spot_img
spot_img

ಶಿವ ಶರಣ ನೂಲಿ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

Must Read

- Advertisement -

ಮೂಡಲಗಿ: ವೈಚಾರಿಕ ಕ್ರಾಂತಿಯ ಹರಿಕಾರರು, ಶಿವ  ಶರಣರಾದ ನೂಲಿ ಚಂದಯ್ಯರವರ ಹಾಗೂ ಸಾಮಾಜಿಕ ಬದಲಾವಣೆಯ ಹರಿಕಾರರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರಳ ರೀತಿಯಲ್ಲಿ ಹಾಗೂ ಅಥ೯ಪೂಣ೯ವಾಗಿ ತಹಶೀಲ್ದಾರ  ಕಚೇರಿಯಲ್ಲಿ ಆಚರಿಸಲಾಯಿತು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ   ತಹಶೀಲ್ದಾರರ ಶಿವಾನಂದ ಎ ಬಬಲಿ ಅವರು, ನೂಲಿಯ ಚಂದಯ್ಯನವರು 12 ನೇ ಶತಮಾನದ  ಅಣ್ಣ  ಬಸವಣ್ಣನವರ ಸಮಕಾಲಿನವರಾಗಿ, ಶ್ರೇಷ್ಠ ಶಿವಶರಣರಾಗಿ, ತಮ್ಮ ಬಾಳಿನುದ್ದಕ್ಕೂ ಪ್ರಾಮಾಣಿಕತೆಯನ್ನು ಮೆರೆದು ಕಾಯಕವೇ ಕೈಲಾಸ ಎಂದು ತಮ್ಮ ಕಾಯಕವನ್ನು ಮಾಡುತ್ತಾ, ಕಾಯಕದಲ್ಲಿಯೇ ಸಾಕಷ್ಟು ಪವಾಡಗಳನ್ನು ಮಾಡಿದ ಶರಣರು ಹಾಗೂ ನಾರಾಯಣ ಗುರುಗಳು ಸಾಮಾಜಿಕ, ಆಥಿ೯ಕವಾಗಿ ಸಮಾಜದಲ್ಲಿ ಹೊಸ ಅವಿಷ್ಕಾರವನ್ನೆ ಮಾಡಿದ ಮಹಾಪುರುಷರು ಎಂದು ನುಡಿದರು

ಕೃಷ್ಣಾ ಗಾಡಿವಡ್ಡರ ಹಾಗೂ ಹಿರಿಯರಾದ ಮಾರುತಿ ಭಜಂತ್ರಿಯವರು ಮಾತನಾಡಿ, ನೂಲಿಯ ಚಂದಯ್ಯನರು ಕಲ್ಯಾಣ ಕ್ರಾಂತಿಯನ್ನು ಮಾಡಿದ ಬಗೆಯನ್ನು ಹಾಗೂ ಅವರು ಕೆರೆಯ ಮೇಲೆ ಬೆಳೆದ ಹುಲ್ಲಿನಿಂದಲೇ ಹಗ್ಗವನ್ನು  ಹೊಸೆದು ಪವಾಡ ಪುರುಷರಾದ ಬಗ್ಗೆ ಹಾಗೂ ಅವರ ಯಶೋಗಾಥೆಯ ಬಗ್ಗೆ ವಿವರಿಸಿದರು.  

- Advertisement -

ಕಾಯ೯ಕ್ರಮದಲ್ಲಿ ತಾಪಂ ಕಾ ನಿ ಅಧಿಕಾರಿ ಎಪ್. ಜಿ. ಚಿನ್ನಣವರ, ಗಣ್ಯರಾದ ಸಂತೋಷ ಸೋನವಾಲಕರ, ಅನ್ವರ ನದಾಫ, ರವಿ ಮೂಡಲಗಿ, ರಾಜು ವಿ. ಭಜಂತ್ರಿ ಕೊರಮ (ಭಜಂತ್ರಿ) ಸಮಾಜದ ತಾಲುಕಾದ್ಯಕ್ಷರು ಸಮುದಾಯದ ಮುಖಂಡರಾದ ಹಣಮಂತ ಭಜಂತ್ರಿ, ಸಂಜಯ ಭಜಂತ್ರಿ, ಸಚಿನ ಭಜಂತ್ರಿ ಶ್ರೀಕಾಂತ ಭಜಂತ್ರಿ ಹಾಗೂ ತಾಲೂಕಿನ ಭಜಂತ್ರಿ ಕೊರಮ ಸಮಾಜದ ಮುಖಂಡರು ಹಾಗೂ ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳು ಹಾಗೂ ತಾಲೂಕು ಶಿರಸ್ತೇದಾರ ಬಿ ಬಿ ಮ್ಯಾಗೇರಿ ಮೊದಲಾದವರು ಉಪಸ್ಥಿತರಿದ್ದರು.

ತಾಲೂಕಾ ಶಿರಸ್ತೇದಾರ ಪರಶುರಾಮ ನಾಯಿಕ  ಕಾಯ೯ಕ್ರಮವನ್ನು ನಿರೂಪಿಸಿ, ವಂದಿಸಿದರು.

- Advertisement -
- Advertisement -

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group