Homeಸುದ್ದಿಗಳುಸ್ನೇಹಿತರಿಂದ ಶಿಕ್ಷಕ ಸಾಹಿತಿ ಡಾಕ್ಟರೇಟ್ ಪಡೆದ ವೈ ಬಿ ಕಡಕೋಳರ ಸನ್ಮಾನ

ಸ್ನೇಹಿತರಿಂದ ಶಿಕ್ಷಕ ಸಾಹಿತಿ ಡಾಕ್ಟರೇಟ್ ಪಡೆದ ವೈ ಬಿ ಕಡಕೋಳರ ಸನ್ಮಾನ

ಮುನವಳ್ಳಿ :ಪಟ್ಟಣದ ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ಅವರು ಇತ್ತೀಚೆಗೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಡಾ ಮಹೇಶ ಗಾಜಪ್ಪನವರ ಮಾರ್ಗದರ್ಶನ ದಲ್ಲಿ ತಲ್ಲೂರು ರಾಯನಗೌಡರು ಸಮಗ್ರ ಅಧ್ಯಯನ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪಡೆದ ಪ್ರಯುಕ್ತ ಅವರ ಬಾಲ್ಯ ಸ್ನೇಹಿತರು ಆತ್ಮೀಯವಾಗಿ ಸನ್ಮಾನಿಸಿದರು.

ಗುರುನಾಥ ಪತ್ತಾರ, ಭವಾನಿ ಖೊಂದುನಾಯ್ಕ, ಶ್ರೀಶೈಲ ಹಿರೇಮಠ, ಜಯದೇವ ಅಷ್ಠಗಿಮಠ, ಬಸಯ್ಯ ವಿರುಪಯ್ಯನವರಮಠ, ಪುಂಡಲೀಕ ಕಿಲ್ಲೇದಾರ, ಮಹಾಂತೇಶ ಶೆಟ್ಟರ್, ಪಂಚು ಕರೀಕಟ್ಟಿ, ಅನಿಲ ಕಿತ್ತೂರ, ಹೇಮಾ ಹೊನ್ನಳ್ಳಿ. ರಜನಿ ನಾಯ್ಕ ಸೇರಿದಂತೆ ಹಲವಾರು ಸ್ನೇಹಿತರು ಅಪರಂಜಿ ಬಳಗದ ಮೂಲಕ ವೈ ಬಿ ಕಡಕೋಳ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು.

ವೈ ಬಿ ಕಡಕೋಳ ಅವರ ಕುರಿತು ಭವಾನಿ ಖೊಂದುನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ ಬಿ ಕಡಕೋಳ ಪ್ರಬಂಧ ಮೂಡಿ ಬರಲು ಕಾರಣರಾದವರ ಕುರಿತು ಹಾಗೂ ತಲ್ಲೂರು ರಾಯನಗೌಡರ ಕುರಿತು ಮಾತನಾಡಿದರು. ಗುರುನಾಥ ಪತ್ತಾರ ವೈ ಬಿ ಕಡಕೋಳ ಮಂಡಿಸಿದ ಪ್ರಬಂಧದ ಕುರಿತು ಮಾತನಾಡಿದರು. ಬಸಯ್ಯ ವಿರುಪಯ್ಯನವರಮಠ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group