ಡಾ. ಎಸ್ ರಾಮಮೂರ್ತಿ ಶರ್ಮ ಲಕ್ಕರೂರವರ ಕನ್ನಡದಲ್ಲಿ ಲಿಪಿ- ತಂತ್ರಾಂಶಗಳು ಕೃತಿ ಲೋಕಾರ್ಪಣೆ

Must Read

ಬೆಂಗಳೂರು – ಐಸಿರಿ ಪ್ರಕಾಶನ ಪ್ರಕಟಿಸಿರುವ ಡಾ .ಎಸ್ ರಾಮಮೂರ್ತಿ ಶರ್ಮ ಲಕ್ಕರೂರವರ ಕನ್ನಡದಲ್ಲಿ ಲಿಪಿ -ತಂತ್ರಾಂಶಗಳು ಕೃತಿಯನ್ನು ಬೆಂಗಳೂರಿನ ಶ್ರೀ ಕೃಷ್ಣ ಸಂಜೆ ಪದವಿ ಕಾಲೇಜು ಸಭಾಂಗಣದಲ್ಲಿ ವಚನ ಸಾಹಿತ್ಯ ಚಿಂತಕಿ ಪ್ರೊ. ಚಂದ್ರಿಕಾ ಪುರಾಣಿಕ ರವರು  ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಪ್ರಾದೇಶಿಕ ಭಾಷೆಯಲ್ಲಿ ಅಳವಡಿಸಲಾಗಿರುವ ತಂತ್ರಾಂಶಗಳನ್ನು ಅಲ್ಲಿಯ ಜನರ ಸಂಪರ್ಕಕ್ಕೆ ತಂದು ಅದರ ಮುಕ್ತವಾದ ಬಳಕೆ ಮತ್ತು ಬೆಳೆಸುವ ಹಾದಿಯಲ್ಲಿ ಎಲ್ಲಾ ಪ್ರಯತ್ನಗಳು ಕ್ರಿಯಾಶೀಲವಾಗಿ ನಡೆಯುತ್ತಿರಬೇಕು. ಈ ನಿಟ್ಟಿನಲ್ಲಿ ಕನ್ನಡದಂತಹ ಭಾಷೆಯ ಇತಿಹಾಸ, ಸಂಶೋಧಕರ ಪರಿಶೋಧನೆಗಳೊಂದಿಗೆ ಇಂದಿನ ವಿದ್ಯುನ್ಮಾನ ತಂತ್ರಾಂಶಗಳ ಬಳಕೆ ಬೆಳವಣಿಗೆಯನ್ನು ಓದುವ -ವಿದ್ಯಾರ್ಥಿ ,ಕಲಿಯುವ -ಮನಸ್ಸುಗಳಿಗೆ ಸುಲಭವಾಗಿ ಪರಿಚಯವನ್ನು ಮಾಡುವ ಪ್ರಯತ್ನವನ್ನು ಈ ಕೃತಿಯ ಮೂಲಕ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.

ಕೃತಿ ಕುರಿತು ಲೇಖಕ ಟಿ ಜಿ ಶ್ರೀನಿಧಿ  ಮಾತನಾಡಿದರು.

ಶ್ರೀ ಕೃಷ್ಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ ರುಕ್ಮಾಂಗದ ನಾಯ್ಡು ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಪ್ರಾಧ್ಯಾಪಕ ಡಾ. ಆರ್  ವಾದಿರಾಜು, ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಭಾಗವಹಿಸಿದ್ದರು,ಕಾಲೇಜಿನ ಪ್ರಾಂಶುಪಾಲ ಪ್ರೊ .ಚಂಗಪ್ಪ ಉಪಸ್ಥಿತರಿದ್ದರು.

Latest News

ಗಾರ್ಡನ್ ಅಭಿವೃದ್ದಿಗೆ  ರೂ.೨೩.೩೯ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

ಸಿಂದಗಿ; ಆಯಾ ವಾರ್ಡುಗಳು ಸಾರ್ವಜನಿಕರು, ವಯೋ ವೃದ್ಧರು ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಪಟ್ಟಣದ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು ೭೨...

More Articles Like This

error: Content is protected !!
Join WhatsApp Group