spot_img
spot_img

ಡಾ.ಸಂತೋಷ ಚೊಕ್ಕಾಡಿ ಅವರ “ಅರ್ಥವಿದೆಯೆ ವಿದಾಯಕ್ಕೆ” ಕವನ ಸಂಕಲನ ಬಿಡುಗಡೆ ಮತ್ತು ವಿಶೇಷ ಉಪನ್ಯಾಸ

Must Read

- Advertisement -

ಮೈಸೂರು -ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಮೈಸೂರು ಜಿಲ್ಲಾ ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ವೇದಿಕೆ ವತಿಯಿಂದ ಫೆ.24ರ ಶನಿವಾರ ಮಧ್ಯಾಹ್ನ 3-30ಕ್ಕೆ ನಂಜುಮಳಿಗೆ ಹತ್ತಿರವಿರುವ ಗೋಪಾಲಸ್ವಾಮಿ ಶಿಶು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕವಿ ಡಾ.ಸಂತೋಷ ಚೊಕ್ಕಾಡಿ ಅವರ “ಅರ್ಥವಿದೆಯೆ ವಿದಾಯಕ್ಕೆ” ಕವನ ಸಂಕಲನ ಬಿಡುಗಡೆ ಮತ್ತು ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ.

ಕೃತಿ ಬಿಡುಗಡೆಯನ್ನು ಕವಿ ವಿಮರ್ಶಕ ಖ್ಯಾತ ಅಂಕಣಕಾರರಾದ ಬಾಲಸುಬ್ರಮಣ್ಯ ಕಂಜರ್ಪಣೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಲೇಖಕರಾದ ವಿಕ್ರಂ ಚದುರಂಗ ವಹಿಸಲಿದ್ದಾರೆ. ಕೃತಿಯನ್ನು ಕುರಿತು ಮಹಾರಾಜ ಕಾಲೇಜು ಕನ್ನಡ ಪ್ರಾಧ್ಯಾಪಕರಾದ ಡಾ.ವಿಜಯಲಕ್ಷ್ಮಿ ಮಾತನಾಡಲಿದ್ದಾರೆ.

- Advertisement -

ಕಾರ್ಯಕ್ರಮದಲ್ಲಿ ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯ ಕರೆಸ್ಪಾಂಡೆಂಟ್ ಎನ್.ಆರ್.ಮಂಜುನಾಥ, ಕವಿ ಡಾ.ಸಂತೋಷ ಚೊಕ್ಕಾಡಿ, ಕನ್ನಡ ಉಪನ್ಯಾಸಕ ವೇದಿಕೆಯ ಅಧ್ಯಕ್ಷರಾದ ಡಾ.ನೀ.ಗೂ.ರಮೇಶ ಉಪಸ್ಥಿತರಿರುತ್ತಾರೆ. 

ಕವಿ ಡಾ.ಸಂತೋಷ ಚೊಕ್ಕಾಡಿರವರ ಕಿರುಪರಿಚಯ:

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಚೊಕ್ಕಾಡಿಯವರು. ಈಗಾಗಲೇ ಪ್ರಾತಃಕಾಲದ ಪದ್ಯಗಳು, ನಿಜದ ಹಾದಿಯ ಬೆಳಕು, ನಿನ್ನರಾಗವ ಹುಡುಕು, ಈವರೆಗೆ ನಮಗಿಲ್ಲ ಹಕ್ಕಿಯ ಹಾಡು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಪರಿಶೋಧ ಲೇಖನಗಳ ಸಂಗ್ರಹ. “ದಕ್ಷಿಣ ಕನ್ನಡ ಕಾವ್ಯದ ವಿಭಿನ್ನ ನೆಲೆಗಳು ”ಇವರ ಪಿ.ಹೆಚ್.ಡಿ ಮಹಾಪ್ರಬಂಧ. ಮಧುರ ಕ್ಷಣ, ಚಲುವಿನ ಸಿರಿ ಭಾವಗೀತೆಗಳ ಧ್ವನಿ ಸಾಂದ್ರಿಕೆ ಆಲ್ಬಂನ್ನು ಬಿಡುಗಡೆಗೊಳಿಸಿದ್ದಾರೆ. ಪ್ರಸ್ತುತ ಸರಗೂರು ತಾಲ್ಲೂಕು ಬಿ.ಮಟಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group