spot_img
spot_img

ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಡಾ. ಜ . ಚ. ನಿ

Must Read

- Advertisement -

ಕನ್ನಡ ನಾಡಿಗೆ ವೀರತತ್ವ ಗಳನ್ನು ಬಿತ್ತಿ ವೈರಾಗ್ಯರತ್ನಗಳನ್ನು ಇಟ್ಟವರು ಸೀಮಾತೀತ ಸಾಹಿತಿ ಡಾ. ಜ.ಚ.ನಿ ಯವರು. ಸೀಮಾತೀತ ಸಾಹಿತ್ಯ ಎಂಬ ಅವರ ವಚನಗಳಿಗೆ ಅವರೇ ನಿದರ್ಶನ ವಾದವರು. ಶ್ರೀಗಳು ಕಾವ್ಯ ಚರಿತ್ರೆ ನಾಟಕ ಪ್ರಬಂಧ ವಚನ ವಿಮರ್ಶೆ ಸಂಶೋಧನೆ ಲಕ್ಷಣ ಶಾಸ್ತ್ರ ಅನುವಾದ ಪ್ರವಾಸ ಸಾಹಿತ್ಯ ಹಾಗೂ ಪತ್ರ ಸಾಹಿತ್ಯ ಹೀಗೆ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೃಷಿ ಮಾಡಿದರು ಮೈಸೂರು ವಿಶ್ವವಿದ್ಯಾಲಯ ಇವರಿಗೆ ಡಾ. ಆಫ್ ಲಿಟರೇಚರ್ ನೀಡಿ ಗೌರವ ಸಲ್ಲಿಸಿದೆ ಅವರ ಇಡೀ ಬದುಕೇ ಒಂದು ಸಾಹಿತ್ಯ ಸಾಹಿತ್ಯಕ್ಕೂ ಅವರ ಬದುಕಿಗೆ ಅವಿನಾಭಾವ ಸಂಬಂಧವಿದೆ ಎಂದು ಡಾ. ಸುಧಾ ಪಾಟೀಲ ಹೇಳಿದರು.

ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳು ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿಯ ನೆಹರು ನಗರ ದ ಕನ್ನಡ ಭವನ ದಲ್ಲಿ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಈ ಮೇಲಿನ ನುಡಿಗಳನ್ನು ಆಡಿದರು.

ಅತಿಥಿಗಳಾಗಿ ಎಲ್ ವಿ ಪಾಟೀಲ ಆಗಮಿಸಿದ್ದರು ಅಧ್ಯಕ್ಷತೆಯನ್ನು ಮಂಗಳಾ ಮೆಟಗುಡ್ಡ ಜಿಲ್ಲಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಇವರು ವಹಿಸಿ ಮಾತನಾಡುತ್ತಾ, ಕರ್ನಾಟಕ ರಾಜ್ಯೋತ್ಸವಕ್ಕೆ ಡಾ. ಡಿ ಎಸ್ ಕರ್ಕಿಯವರ ಹಚ್ಚೇವು ಕನ್ನಡ ದೀಪ ಕಡ್ಡಾಯವಾಗಿ ಹಾಡಲು ಆದೇಶಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

- Advertisement -

ಎಂ .ವೈ ಮನಸಿನಕಾಯಿ ಗೌರವ ಕಾರ್ಯದರ್ಶಿಗಳು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಡಾ. ಎನ್‌. ಬಿ .ದಳವಾಯಿ ಕನ್ನಡ ಸಾಹಿತ್ಯ ಪರಿಷತ್ತಿನ ಕಿತ್ತೂರು ತಾಲೂಕಾಧ್ಯಕ್ಷರು ಪರಿಚಯ ನೀಡಿದರು ಗ್ರಂಥದಾನಿಗಳಾದ ಸುಧಾ ಪಾಟೀಲ , ಜಯಶ್ರೀ ನಿರಾಕರಿ, ಡಾ. ಹೇಮಾವತಿ ಸಿನ್ನೂಳ್ಳಿ, ನಿಜಾಮಾ ಡಾಂಗೆ, ಜಯಶೀಲಾ ಬ್ಯಾಕೋಡ, ಲಲಿತಾ ಪರ್ವತರಾವ್,  ಶಾಂತಾ ಮಸೂತಿ ಅವರನ್ನು ಸನ್ಮಾನಿಸಲಾಯಿತು.

ಡಾ. ಅನ್ನಪೂರ್ಣ ಹಿರೇಮಠ, ಮಹಾನಂದ ಪರುಶೆಟ್ಟಿ  ನಾಡಗೀತೆ  ಹೇಳಿದರು.

ಶಿವಾನಂದ ತಲ್ಲೂರ ಸ್ವಾಗತಿಸಿದರು ಮಲ್ಲಿಕಾರ್ಜುನ ಕೋಳಿ ನಿರೂಪಿಸಿದರು ವಿ ಎಂ ಅಂಗಡಿ ವಂದಿಸಿದರು. ವಿಠ್ಠಲ್  ಪ್ರಸಾದ್ ಯ.ರು.ಪಾಟೀಲ್ ಡಾ. ಸೋಮಶೇಖರ್ ಹಲಸಿಗಿ ಬಸವರಾಜ್ ಮಠಪತಿ ಸುರೇಶ ಹಂಜಿ ನಿಂಗಪ್ಪ ಮೇಟಿ ಇತರರು ಉಪಸ್ಥಿತರಿದ್ದರು.

- Advertisement -
- Advertisement -

Latest News

‘ವಚನ’ ಗ್ರಂಥ ಲೋಕಾರ್ಪಣೆ

ಬೆಳಗಾವಿ - ಬೈಲಹೊಂಗಲ ತಾಲೂಕಿನ ಚಿಕ್ಕಬೆಳಿಕಟ್ಟಿ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಎಸ್. ಡಿ. ಎಮ್. ಸಿ. ಅಧ್ಯಕ್ಷರಾದ ಆತ್ಮಾನಂದ ಶಿ. ಹೊಂಗಲ, ಪ್ರಗತಿಪರ...
- Advertisement -

More Articles Like This

- Advertisement -
close
error: Content is protected !!
Join WhatsApp Group