ವೀರಭದ್ರೇಶ್ವರ ಸ್ವಾಮಿಯ 108 ಅಡಿ ಎತ್ತರದ ಪ್ರತಿಮೆ ನಿರ್ಮಿಸಲು ದೇಣಿಗೆಗೆ ಚಾಲನೆ

Must Read

ಮೂಡಲಗಿ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ವಿಜಯನಗರ ಜಿಲ್ಲೆಯ ಹಂಪಿ ಹತ್ತಿರ ವಿಶ್ವದಲ್ಲಿಯೇ ಮೊದಲ ಬಾರಿಗೆ ಆಂಜನೇಯಸ್ವಾಮಿಗೆ ಲಿಂಗ ದೀಕ್ಷೆ ನೀಡಿದ ಶ್ರೀ ವೀರಭದ್ರೇಶ್ವರ ಸ್ವಾಮಿಯ 108 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸಲು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರದೀಪ ಕಂಕಣವಾಡಿ ಅವರ ಸ್ವಗ್ರಾಮವಾದ ಮೂಡಲಗಿ ತಾಲ್ಲೂಕಿನ ರಾಜಾಪೂರ ಗ್ರಾಮದ ಮುಖಂಡ ವಿಠ್ಠಲ ಪಾಟೀಲ ರವರಿಂದ ಮೊದಲ ದೇಣಿಗೆ ಪಡೆದು ದೇಣಿಗೆ ಚಾಲನೆ ನೀಡಿದರು.

ಹಿಂದಿನಿಂದಲೂ ನಡೆದುಕೊಂಡು ಬಂದ ಹಿಂದೂ ಸಂಪ್ರದಾಯದಂತೆ ಹಾಲುಮತ ಸಮಾಜದವರಿಂದ ಮೊದಲು ದೇಣಿಗೆ ಪಡೆಯಲಾಯಿತು. ಸಂಸ್ಕೃತಿಗಳ ನಾಡು ನಮ್ಮ ಭಾರತ ಅದರ ಇತಿಹಾಸ ಮತ್ತು ಆಚರಣೆ ಅದ್ಭುತ. ಅಂತಹ ನಾಡಿನಲ್ಲಿ ಶ್ರೀ ವೀರಭದ್ರೇಶ್ವರ ಮತ್ತು ಆಂಜನೇಯಸ್ವಾಮಿ ಒಂದೇ ಸ್ಥಳದಲ್ಲಿ ಪ್ರತಿಮೆ ಮಾಡುವುದು ನಮ್ಮೆಲ್ಲರ ಹೆಮ್ಮೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಿದ್ರಾಯಿ ಮರಿಸಿದ್ದಪ್ಪಗೋಳ, ಹಿರಿಯ ಮುಂಖಡರಾದ ರಾಜು ಬೈರುಗೋಳ, ಬೈರಪ್ಪ ಯಕ್ಕುಂಡಿ, ಬಸವರಾಜ ಪಂಡ್ರೋಳಿ, ರಾಮು ಪಾಟೀಲ, ರಾಜು ಪವಾರ ದೇಣಿಗೆ ನೀಡಿದರು ಮತ್ತು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group