ಕೊಕಟನೂರ ಗ್ರಾಮದಲ್ಲಿ ‘ದುಡಿಯೋಣ ಬಾ’ ಅಭಿಯಾನ

Must Read

ಸಿಂದಗಿ: ತಾಲೂಕಿನಲ್ಲಿಯೇ ಕೊಕಟನೂರ ಗ್ರಾಮ ಪಂಚಾಯತಿ ಉತ್ತಮ ಪ್ರಗತಿ ಸಾಧಿಸಿದ್ದು ಇದರಿಂದ ಸಾಕಷ್ಟು ಬಡವರಿಗೆ ಹಿಂದುಳಿದವರಿಗೆ ಅನುಕೂಲವಾಗಿದೆ ಇನ್ನೂ ಹೆಚ್ಚಿನ ಕೆಲಸಗಳು ಆಗಬೇಕಿವೆ ಅವುಗಳನ್ನು ಬೇಗ ಪೂರ್ಣಗೊಳಿಸಬೇಕು ಎಂದು ಪೈಗಂಬರ ಮುಲ್ಲಾ ಹೇಳಿದರು.

ತಾಲೂಕಿನ ಕೊಕಟನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ “ದುಡಿಯೋಣ ಬಾ” ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಕೊಕಟನೂರ ಗ್ರಾಮದಲ್ಲಿ ನಿರ್ಮಾಣವಾದ ಘನ ತ್ಯಾಜ್ಯ ವಿಲೇವಾರಿ ಘಟಕದ ಸುತ್ತಲೂ ಗಿಡ ಹಚ್ಚಲು ಗುಂಡಿ ತೆಗೆಯುವ ಮೂಲಕ ಈ ವರ್ಷದ ಕೆಲಸದಲ್ಲಿ 21 ಕೂಲಿ ಕಾರ್ಮಿಕರಿಗೆ ಕೂಲಿ ದೊರೆತಿದೆ ಎಂದರು.

ಅಭಿಯಾನಕ್ಕೆ ಗ್ರಾಮ ಪಂಚಾಯತ ಅದ್ಯಕ್ಷೆ ರಜಾಕಬಿ ಮೈಬೂಸಾಬ್ ಮುಲ್ಲಾ ಚಾಲನೆ ನೀಡಿದರು.

ಐಇಸಿ ಸಂಯೋಜಕರಾದ ಭೀಮರಾಯ ಚೌಧರಿ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಸರಕಾರದ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗವನ್ನು ವೈಯಕ್ತಿಕ ಕಾಮಗಾರಿಗಳು ಮತ್ತು ಸಮುದಾಯ ಕಾಮಗಾರಿಗಳು ಬರುತ್ತವೆ ಇವುಗಳ ಉತ್ತ್ಮವಾಗಿ ಸದ್ಬಳಕೆ ಮಾಡಿಕೊಳ್ಳುವದು ಹಾಗೂ ಒಂದು ಕುಟುಂಬಕ್ಕೆ ವರ್ಷಕ್ಕೆ ಕನಿಷ್ಟ 100 ದಿನ ಉದ್ಯೋಗ ಪಡೆಯಿರಿ ಮತ್ತು ನಿಮ್ಮ ಊರಲ್ಲೆ ನಿರಂತರ 100 ದಿನ ಕೆಲಸ ಬೇಸಿಗೆಯಲ್ಲಿ ಪಡೆಯಬಹುದು ಎಂದು ತಿಳಿಸಿದರು.

ಪಂಚಾಯತಿ ಅಭಿವೃದ್ದಿ ಅಧಿಕಾರಿ ವಸಂತ ಅಮೀನಗಡ ಮಾತನಾಡಿ, ಈ ಯೋಜನೆಯು ಗ್ರಾಮೀಣ ಪ್ರದೇಶದ ಜನರಿಗೆ ವಲಸೆ ಹೋಗುವದನ್ನು ತಪ್ಪಿಸಲು ತುಂಬಾ ಸಹಕಾರಿಯಾಗಿದೆ ಆದ್ದರಿಂದ ಇದರ ಉಪಯೋಗ ಎಲ್ಲರೂ ಪಡೆದುಕೊಳ್ಳಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ರಮೇಶ ಚಿನ್ನಾಕರ್ ಸದಸ್ಯರಾದ ಬಾಬು ರಾಠೋಡ, ಪರಸುರಾಮ ಜವಳಗಿ, ಮಡಿವಾಳ ಕಾಂಬಳೆ, ತಾಂತ್ರಿಕ ಸಹಾಯಕ ರವಿ ಜಮಖಂಡಿ, ಬಿಲ್ ಕಲೆಕ್ಟರ್ ಮೈಬು ಬಡಿಗೇರ, ಡಿಇಒ ಶೇಖರ ಕಾಂಬಳೆ, ಬಿ ಎಫ್ ಟಿ. ಖರೋಷಿ, ಗ್ರಾಮ ಕಾಯಕ ಮಿತ್ರ ಮಹಾನಂದ ಬಡಿಗೇರ ಹಾಗೂ ಕಾಯಕ ಬಂದು ಯಮುನಾಬಾಯಿ, ನಿಂಗು ಬಡಿಗೇರ, ವಿನೋದ ನಾಯಿಕ ಸೇರಿದಂತೆ ಅನೇಕರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group