spot_img
spot_img

ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆ

Must Read

- Advertisement -

ಸವದತ್ತಿ: ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಡಯಟ್ ಉಪನ್ಯಾಸಕರಾದ ಪ್ರಕಾಶ ಪಾಟೀಲ ನೇತೃತ್ವದಲ್ಲಿ ಜರುಗಿಸಲಾಯಿತು. ಈ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ.ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಸಿ.ವೈ.ತುಬಾಕಿ.ಪ್ರಥಮ ದರ್ಜೆ ಸಹಾಯಕರಾದ ಗಿರೀಶ ಮುನವಳ್ಳಿ. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಾಜು ಭಜಂತ್ರಿ. ಡಾ.ಬಿ.ಐ.ಚಿನಗುಡಿ. ವ್ಹಿ.ಸಿ.ಹಿರೇಮಠ. ಬಿ.ಐ.ಇ.ಆರ್.ಟಿ ಗಳಾದ ವೈ.ಬಿ.ಕಡಕೋಳ.ಶ್ರೀಮತಿ ಎಂ.ಎಂ.ಸಂಗಮ.ಎಸ್.ಬಿ.ಬೆಟ್ಟದ.ಸಿ.ವ್ಹಿ.ಬಾರ್ಕಿ. ಶಿಕ್ಷಣ ಸಂಯೋಜಕರಾದ ಕೆ.ಕೆ.ಡಂಗಿ.ಜಿ.ಎಂ.ಕರಾಳೆ.ಶಾಸಕರ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿವ್ಹಿಲ್ ಕಾಮಗಾರಿಗಳ ನೋಡಲ್ ಆಗಿರುವ ಎಂ.ಬಿ.ಬಳಿಗಾರ ಸೇರಿದಂತೆ ತಾಲೂಕಿನ ಎಲ್ಲ ಸಮೂಹ ಸಂಪನ್ಮೂಲ ಕೇಂದ್ರಗಳ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸಿ.ವೈ.ತುಬಾಕಿ ಮಾತನಾಡಿ “ಪೋಷಣ ಅಭಿಯಾನ.ಶಾಲಾ ಕೈತೋಟ ನಿರ್ಮಾಣ.ಮಕ್ಕಳ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ಆಧಾರ ಲಿಂಕ್. ಅಕ್ಷರ ದಾಸೋಹ ಕಾರ್ಯಕ್ಕೆ ಕುರಿತಂತೆ ವಿಷಯಗಳನ್ನು” ಚರ್ಚಿಸಿದರು. ಡಯಟ್ ಉಪನ್ಯಾಸಕರಾದ ಪ್ರಕಾಶ ಪಾಟೀಲ ಮಾತನಾಡಿ “ಇನ್‍ಸ್ಪೈರ್ ಅವಾರ್ಡ,ಟೆಲಿ ಶಿಕ್ಷಣ.ಪಠ್ಯಪುಸ್ತಕ.ಎನ್.ಎ.ಎಸ್ ಪರೀಕ್ಷೆ.ಸೇತುಬಂಧ ದಾಖಲೆಗಳು.ಪರ್ಯಾಯ ಶಿಕ್ಷಣ ಯೋಜನೆ.ಎ.ಇ.ಪಿ 1 ರಿಂದ 5 ತರಗತಿ.ನಲಿಕಲಿಗೆ ಸಂಬಂಧಿಸಿದ ಮಾಹಿತಿ.ಪ್ರೇರಣಾ ಚಟುವಟಿಕೆಗಳು.ಎನ್.ಐ.ಇ.ಪಿ.ಎ.ತರಬೇತಿ.ಶಿಕ್ಷಕರ ಪರ್ವ 8-9-2021 ರಿಂದ 17-9-2021 ರ ವರೆಗೆ ತರಬೇತಿ.ಪ್ರೇರಣಾ ಚಟುವಟಿಕೆಗಳು.”ಕುರಿತಂತೆ ಇನ್ನೂ ಹಲವಾರು ಮಾಹಿತಿಗಳನ್ನು ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ ನೀಡಿದರು.

- Advertisement -

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ ಮಾತನಾಡಿ “ ಭೌತಿಕವಾಗಿ ಈಗ ಶಾಲೆಗಳು ಆರಂಭಗೊಂಡಿವೆ.ಎಲ್ಲ ಅನುಷ್ಠಾನ ಅಧಿಕಾರಿಗಳು ಶಾಲೆಗಳ ಭೇಟಿ ನೀಡುವ ಜೊತೆಗೆ ಕೋವಿಡ್ ನಿಯಮಾವಳಿಗನುಸಾರ ಕಾರ್ಯ ಸಾಗಿರುವುದನ್ನು ಖಚಿತಪಡಿಸಿಕೊಳ್ಳುವುದು.ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಹಾಗೂ ಸಮನ್ವಯ ಶಿಕ್ಷಣ ಚಟುವಟಿಕೆಗಳ ಅನುಷ್ಠಾನ ಕುರಿತು” ಮಾಹಿತಿಯನ್ನು ನೀಡಿದರು.

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ಮಾತನಾಡಿ “ಇಲಾಖೆ ಪ್ರಕಾ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಿ ಯಶಸ್ವಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುವಂತೆ ಎಲ್ಲಾ ಅನುಷ್ಠಾನ ಅಧಿಕಾರಿಗಳಿಗೆ ” ಕರೆ ನೀಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸಿ.ವ್ಹಿ.ಬಾರ್ಕಿ ಸ್ವಾಗತಿಸಿದರು.ವ್ಹಿ.ಸಿ.ಹಿರೇಮಠ ನಿರೂಪಿಸಿದರು.ಎಸ್.ಬಿ.ಬೆಟ್ಟದ ವಂದಿಸಿದರು.

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group