ಸಿಂದಗಿ: ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ ಮಾಡಲು ಸರಕಾರ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆ ಹಣ್ಣು ವಿತರಣೆ ಮಾಡುವ ಉತ್ತಮ ಯೋಜನೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ನೀರಲಗಿ ಹೇಳಿದರು,
ಪಟ್ಟಣದ ಬಿ ಆರ್ ಸಿ ಕೇಂದ್ರದಲ್ಲಿ ಅಕ್ಷರ ದಾಸೋಹ ನಿರ್ದೇಶಕರು ಹಮ್ಮಿಕೊಂಡ ತಾಲೂಕಿನ ಮುಖ್ಯಗುರುಗಳ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿ ಸರಕಾರ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಸಂಗಡ ಮೊಟ್ಟೆ ಅಥವಾ ಬಾಳೆ ಹಣ್ಣು ನೀಡುವ ಮಹತ್ವದ ಯೋಜನೆಯನ್ನು ಡಿಸೆಂಬರ್ 01 ರಂದು ಜಾರಿಗೆ ತರುವ ಮೂಲಕ ಉತ್ತರ ಕರ್ನಾಟಕದ 7 ಜಿಲ್ಲೆಗಳಲ್ಲಿ ಸರಕಾರ ಅನುಷ್ಠಾನ ತಂದಿದೆ ತಿಂಗಳಲ್ಲಿ 12 ಬಾಳೆ ಹಣ್ಣು ಅಥವಾ ಮೊಟ್ಟೆ ಸೇವಿಸಲು ಮಕ್ಕಳಿಗೆ ವಿತರಿಸಬೇಕು ಎಂದರು.
ಅಕ್ಷರ ದಾಸೋಹ ನಿರ್ದೇಶಕ ಎಸ್ ಎಸ್ ಕತ್ತಳ್ಳಿ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜ ಅಭಿವೃದ್ದಿ ಹೊಂದಲು ಮಕ್ಕಳ ಆರೋಗ್ಯ ಕಡೆ ಗಮನ ಹರಿಸಿ ಅವರಲ್ಲಿ ಇರುವ ಪೌಷ್ಠಿಕಾಂಶ ಕಡಿಮೆ ಮಾಡುವ ಮೂಲಕ ಶಾಲಾ ಮಕ್ಕಳಿಗೆ ಆರೋಗ್ಯವನ್ನು ಅಭಿವೃದ್ದಿಗೊಳಿಸಲು ಸರಕಾರ ಯೋಜನೆಗಳನ್ನು ಸದುಪಯೋಗ ಮಾಡುವ ಮುಖಾಂತರ ಮಕ್ಕಳಿಗೆ ಅಕ್ಷರ ದಾಸೋಹದ ಮಧ್ಯಾಹ್ನ ಉಪಾಹಾರ ಯೋಜನೆಯಲ್ಲಿ ಮಕ್ಕಳಿಗೆ ಕ್ಷೀರ ಭಾಗ್ಯದೊಂದಿಗೆ ಬಿಸಿ ಊಟದಲ್ಲಿ ಮೊಟ್ಟೆ ಅಥವಾ ಬಾಳೆ ಹಣ್ಣು ನೀಡುವ ರಾಜ್ಯ ಸರಕಾರ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಡಿ 01 ರಿಂದ ಜಾರಿಗೊಳಿಸಿದ್ದು ಬಿಸಿ ಊಟದಲ್ಲಿ ಮೊಟ್ಟೆ ಅಥವಾ ಬಾಳೆ ಹಣ್ಣುಗಳು ಗುಣಮಟ್ಟದಿಂದ ಇರಬೇಕು .ಶಿಕ್ಷಕರು ತಾವು ಶಾಲೆಯ ಮಕ್ಕಳಿಗೆ ವಾರದಲ್ಲಿ ಮಂಗಳವಾರ,ಬುಧವಾರ, ಶುಕ್ರವಾರ ರಂದು ಮಕ್ಕಳಿಗೆ ಮೊಟ್ಟೆ ವಿತರಿಸಬೇಕು ತಾಲೂಕಿನಲ್ಲಿ ಬರುವ ಉರ್ದು ಶಾಲಾ ಮಕ್ಕಳಿಗೆ ಶುಕ್ರವಾರ ಬದಲು ಶನಿವಾರ ಮೊಟ್ಟೆ ನೀಡಬೇಕು. ಮಕ್ಕಳ ತೂಕ ಎದೆ ಅಳತೆ.ಎತ್ತರ ಅಳತೆ ಮಾಡಬೇಕು .ಮಕ್ಕಳಿಗೆ ಖಾಲಿ ಹೊಟ್ಟೆಯಲ್ಲಿ ಮೊಟ್ಟೆ ನೀಡಬಾರದು. ಬಿಸಿ ಊಟ ಸಿಬ್ಬಂದಿಯವರು ಪಾತ್ರೆಗಳು ಸ್ವಚ್ಚವಾಗಿ ಇಡುವಂತೆ ನೋಡಿ ಕೊಳ್ಳ ಬೇಕು. ಮಕ್ಕಳಿಗೆ ಸರಕಾರ ಮೊಟ್ಟೆ ಕೊಡುವ ಯೋಜನೆಯಿಂದ ಮಗು ಆರೋಗ್ಯವಂತರಾಗಿ ಇರಲು ಸಾಧ್ಯ ಎಂದರು.
ಅಕ್ಷರ ದಾಸೋಹ ಸಿಬ್ಬಂದಿ ವೀರೇಶ ಶಾಲಾ ಮುಖ್ಯ ಗುರುಗಳು ಭಾಗವಹಿಸಿದರು.