spot_img
spot_img

Bidar: ಹಿಂಸೆಗೆ ತಿರುಗಿದ ಚುನಾವಣಾ ರಾಜಕೀಯ

Must Read

- Advertisement -

ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಿಗೆ ಚಾಕು ಇರಿತ.

ಬೀದರ: ಜಿಲ್ಲೆಯ ಭಾಲ್ಕಿಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಿಗೆ ಚಾಕು ಇರಿತದ ಘಟನೆ ವರದಿಯಾಗಿದ್ದು ರಾಜಕಾರಣ ಹಿಂಸೆಗೆ ತಿರುಗಿದಂತಾಗಿದೆ.

ಆರೋಪಿಗಳ ವಿರುದ್ಧ ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಕ್ಷೇತ್ರದಲ್ಲಿ ಖಂಡ್ರೆ ವರ್ಸಸ್ ಖಂಡ್ರೆ ಬಿಗ್ ಫೈಟ್ ನಡೆಯುತ್ತಿದ್ದು, ಭಾಲ್ಕಿ ಕ್ಷೇತ್ರದಲ್ಲಿ ಎರಡು ಖಂಡ್ರೆ ಕುಟುಂಬಗಳು ಈಗ ಬದ್ಧ ವೈರಿಗಳಂತಾಗಿವೆ.

ಪ್ರಕಾಶ ಖಂಡ್ರೆಯನ್ನು ಬಿಜೆಪಿ ಅಭ್ಯರ್ಥಿ ಆಗಿ ಕಣಕ್ಕೆ ಇಳಿಸಿದ ರಾಜ್ಯ ಬಿಜೆಪಿ ನಾಯಕರು, ಈಶ್ವರ ಖಂಡ್ರೆ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಆಗಿ ಕಣಕ್ಕೆ ಇಳಿಸಿದ ಕಾಂಗ್ರೆಸ್ ನಾಯಕರು.

- Advertisement -

ಒಂದೇ ಕುಟುಂಬದಲ್ಲಿ ರಾಜಕೀಯವನ್ನು ತಂದಿಟ್ಟಿದ್ದು ಸಹೋದರರಾದರೂ ಎರಡೂ ಕುಟುಂಬದವರು ರಾಜಕೀಯ ವಿಷಯ ಬಂದರೆ ಬದ್ದ ವೈರಿಗಳಾಗಿದ್ದಾರೆ.

ನಿನ್ನೆ ರಾತ್ರಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಪ್ರಚಾರ ವೇಳೆ ಚಾಕು ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪ ಮಾಡಿದ್ದಾರೆ.

ಈ ರೀತಿ ಗೂಂಡಾ ವರ್ತನೆ ಬಹಳ ದಿನ ನಡೆಯಲ್ಲ. ಭಾಲ್ಕಿ ಕ್ಷೇತ್ರದಲ್ಲಿ ಬಿಜೆಪಿಯವರು ಮಾಡುತ್ತಿರುವ ಅಕ್ರಮ ಬಗ್ಗೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ಮಾಡಿದರೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಖಂಡ್ರೆ ಎಚ್ಚರಿಕೆ ನೀಡಿದರು.

ಒಂದು ಗಾದೆ ಮಾತು ನೆನಪು ಬರುತ್ತದೆ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂದು ಹಿರಿಯರು ಹೇಳುತ್ತಾರೆ.ಹಾಗೆ ಭಾಲ್ಕಿ ಕ್ಷೇತ್ರದಲ್ಲಿ ಅಣ್ಣ ತಮ್ಮ ಜಗಳದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹಣೆಬರಹ ಏನಾಗುತ್ತದೆ ಎಂಬುದನ್ನು ಕಾದು ನೊಡ ಬೇಕು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group