spot_img
spot_img

ವಿಕಲಚೇತನ ನೌಕರರಿಗೂ ಕ್ರೀಡಾಕೂಟ ಆಯೋಜಿಸಲು ಆಗ್ರಹ

Must Read

- Advertisement -

ಬೆಂಗಳೂರು: ಸರಕಾರಿ ನೌಕರರಿಗೆ ಯಾವ ರೀತಿಯಲ್ಲಿ ಪ್ರತಿ ವರ್ಷ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುತ್ತದೆ ಅದೇ ರೀತಿಯಲ್ಲಿ ವಿಕಲಚೇತನ ನೌಕರರಿಗೂ ಕೂಡಾ ಕ್ರೀಡಾಕೂಟವನ್ನು ಆಯೋಜನೆ ಮಾಡುವಂತೆ ಒತ್ತಾಯಿಸಿ ಬೆಂಗಳೂರಿನ ಸರಕಾರಿ ನೌಕರರ ಸಂಘದ ಕಚೇರಿಯಲ್ಲಿ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರಿಗೆ ವಿಕಲಚೇತನ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಸರಕಾರಿ ನೌಕರರಂತೆ ವಿಕಲಚೇತನ ನೌಕರರು ಕೂಡಾ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲು ಆಸಕ್ತಿಯಿದ್ದು ಆದರೆ ಅವರಿಗೆ ಸೂಕ್ತ ವೇದಿಕೆಗಳ ಅಗತ್ಯವಿದೆ.ಆದರೆ ವೇದಿಕೆಗಳ ಕೊರತೆಯಿಂದ ನಮ್ಮಲ್ಲಿ ಇರುವ ಪ್ರತಿಭೆಯು ಹೊರಬರಲು ಸಾಧ್ಯವಾಗುತ್ತಿಲ್ಲ.ಅಲ್ಲದೇ ಈಗಾಗಲೇ ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಮಾತ್ರ ವಿಕಲಚೇತನ ನೌಕರರಿಗೆ ಕ್ರೀಡಾಕೂಟವನ್ನು ಆಯೋಜನೆ ಮಾಡಿದ್ದರೆ.ಆದರೆ ಉಳಿದ ಜಿಲ್ಲೆಯ ವಿಕಲಚೇತನ ನೌಕರರು ವಿಕಲಚೇತನ ನೌಕರರ ಕ್ರೀಡಾಕೂಟದಿಂದ ವಂಚಿತರಾಗುತ್ತಿದ್ದಾರೆ. ವಿಕಲಚೇತನ ನೌಕರರು ಕೂಡಾ ಅನೇಕ ಕ್ರೀಡೆಗಳಲ್ಲಿ ಭಾಗವಹಿಸಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೆಯಾದ ಪ್ರತಿಭೆಯನ್ನು ಅನಾವರಣ ಮಾಡುವುದರ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಗೆ ಮಾಡಿದ್ದಾರೆ.ಆದ್ದರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ವಿಕಲಚೇತನ ನೌಕರರಿಗೆ ಕ್ರೀಡಾಕೂಟವನ್ನು ಆಯೋಜನೆ ಮಾಡುವುದರ ಮೂಲಕ ವಿಕಲಚೇತನ ನೌಕರರ ಕ್ರೀಡಾ ಆಸಕ್ತಿಗೆ ಚೈತನ್ಯ ತುಂಬಬೇಕು ಎಂದು ಹೇಳಿದರು.

ಮನವಿ ಸ್ವೀಕರಿಸಿದ ಬಳಿಕ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಮಾತನಾಡಿ,ವಿಕಲಚೇತನ ನೌಕರರ ಕ್ರೀಡಾಕೂಟವನ್ನು ಆಯೋಜನೆ ಮಾಡಯವ ಬಗ್ಗೆ ಚಿಂತನೆ ನಡೆದಿದ್ದು, ಕೂಡಲೆ ಅದರ ಬಗ್ಗೆ ಸಂಘದಲ್ಲಿ ಚರ್ಚೆ ಮಾಡಿ ವಿಕಲಚೇತನ ನೌಕರರಿಗೂ ಕೂಡಾ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುತ್ತದೆ ಎಂದು ಹೇಳಿದರು.

- Advertisement -

ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ನಾಗರಾಜ.ಆರ್.ಜುಮ್ಮಣ್ಣನ್ನವರ ಮಾತನಾಡಿ,ವಿಕಲಚೇತನ ನೌಕರರಿಗೆ ರಾಜ್ಯದ ಮೊಟ್ಟ ಮೊದಲ ಬಾರಿ ಸರಕಾರಿ ನೌಕರರ ಸಂಘದ ವತಿಯಿಂದ ವಿಕಲಚೇತನ ನೌಕರರಿಗೆ ಕ್ರೀಡಾಕೂಟವನ್ನು ಕೊಪ್ಪಳ ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕ ಆಯೋಜನೆ ಮಾಡಿದೆ ಜೊತೆಗೆ ಅದೇ ರೀತಿಯಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ.

ಕೇವಲ ಕೊಪ್ಪಳ ಜಿಲ್ಲೆಯ ವಿಕಲಚೇತನ ನೌಕರರಿಗೆ ಮಾತ್ರ ಇದರ ಕೇವಲ ಜಿಲ್ಲೆಯ ಮಾತ್ರ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ ಆದರೆ ಬೇರೆ ಬೇರೆ ಜಿಲ್ಲೆಯಲ್ಲಿ ಕ್ರೀಡಾಕೂಟದ ವ್ಯವಸ್ಥೆ ಇಲ್ಲದ ಕಾರಣ ಅವರು ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಅವಕಾಶ ಇಲ್ಲದಾಗುತ್ತದೆ ಆದ್ದರಿಂದ ರಾಜ್ಯದ ಪ್ರತಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಆಯೋಜನೆ ಮಾಡಿದರೆ ಸೂಕ್ತ ಎಂದು ಹೇಳಿದರು.

ಈ ಸಮಯದಲ್ಲಿ ಸರಕಾರಿ ನೌಕರರ ಸಂಘದ ರಾಜ್ಯ ಖಜಾಂಚಿ ಶ್ರೀನಿವಾಸ, ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ, ಉಪಾಧ್ಯಕ್ಷರಾದ ರುದ್ರಪ್ಪ,ಶಿವಲಿಂಗಯ್ಯಾ,ಕೊಪ್ಪಳ ಜಿಲ್ಲಾ ಸರಕಾರಿ ನೌಕರರ ಸಂಘದ ಖಜಾಂಚಿ ಸುಶೀಲೆಂದ್ರರಾವ ದೇಶಪಾಂಡೆ, ಕಾರ್ಯದರ್ಶಿ ಶಂಕರಗೌಡ ಮಾಲಿಪಾಟೀಲ ಮುಂತಾದವರು ಹಾಜರಿದ್ದರು.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group