ಮರ ದೇವರು ಕೊಟ್ಟ ವರ
ಬಹು ಉಪಯೋಗಿ ಮರ
ದೇವರು ಕೊಟ್ಟ ವರ
ರಕ್ಷಿಪುದು ಪರಿಸರ
ನೀಗುವದು ಬರ
ತರಲು ಮಳೆ ನೀರ
ತಡೆಯಲು ಮಹಾಪೂರ
ಹಿಡಿದಿಡಲು ಭೂಸಾರ
ಬೇಕು ನಮಗೆ ಮರ
ಮರಮುಟ್ಟು ಔಷಧ
ಬೆಳೆಗಳಿಗೆ ಗೊಬ್ಬರ
ಕಟ್ಟಲು ಮನೆ ಮಂದಿರ
ಬೇಕು ನಮಗೆ ಮರ
ಹಸಿರು ಹೊನ್ನಿದು ಮರ
ಭೂ ತಾಯಿಗೆ ಅಲಂಕಾರ
ಪಶು ಪಕ್ಷಿಗೆ ಆಹಾರ
ರೈತ ಜನಕೆ ಆಸರ
ಸುಜನರೆ ಕೇಳಿರಿ
ಮರಗಳನು ಬೆಳೆಸಿರಿ
ಕಾಡನು ಉಳಿಸಿರಿ
ಪರಿಸರ ರಕ್ಷಿಸಿರಿ
… ಆರ್. ಎಸ್. ಚಾಪಗಾವಿ
ಬೆಳಗಾವಿ 8317404648

