spot_img
spot_img

ಪ್ರತಿಯೊಬ್ಬರು ಪುರಾಣ ಪ್ರವಚನ ಕೇಳಿ ಜೀವನ ಸಾರ್ಥಕಪಡಿಸಿಕೊಳ್ಳಿ

Must Read

- Advertisement -

ಶಿವಾಪೂರ: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ  ಕೆಟ್ಟ ವ್ಯಸನಾದಿಗಳಿಗೆ ಅಂಟಿಕೊಳ್ಳದೆ ಸತ್ಸಂಗ, ಪುರಾಣ ಪ್ರವಚನದಂಥ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮುಖಾಂತರ ತಮ್ಮ ಜೀವನದ ಅಮೂಲ್ಯ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಇಂಚಗೇರಿ ಮಠದ ಪಿಠಾಧ್ಯಕ್ಷರಾದ  ಶ್ರೀ ರೇವಣಸಿದ್ದೇಶ್ವರ ಮಹಾರಾಜರು ಹೇಳಿದರು.

ಮೂಡಲಗಿ ತಾಲೂಕಿನ ಶಿವಾಪೂರ ಗ್ರಾಮದಲ್ಲಿ ಕರ್ನಾಟಕ ಏಕೀಕರಣ ಪುರಸ್ಕೃತ ಇಂಚಗೇರಿ ಮಠದ  ಗುರುಗಳಾದ  ಸ್ವಾತಂತ್ರ ಸೇನಾನಿ ಶ್ರೀ ಮಾಧವಾನಂದ ಪ್ರಭುಜಿಯವರ  ಸ್ಮರಣಾರ್ಥ ಸಪ್ತಾಹ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.      

ಸಾಹಿತಿಗಳಾದ ಮಾಹಾಲಿಂಗ ಮಂಗಿ ಮಾತನಾಡಿ, ಶ್ರೀ ಮಾಧವನಂದರೂ  ಸ್ವಾತಂತ್ರ ಹೋರಾಟದಲ್ಲಿ  ತಮ್ಮ ನೂರಾರು ಅನುಯಾಯಿಗಳೊಂದಿಗೆ  mತೊಡಗಿಸಿಕೊಂಡು ಇಂಚಗೇರಿ ಮಠವನ್ನೇ ಸ್ವಾತಂತ್ರ ಹೋರಾಟಕ್ಕೆ ಅರ್ಪಿಸಿದ್ದರಲ್ಲದೆ, ಮಹಾರಾಷ್ಟ್ರ ಕರ್ನಾಟಕದ ಪ್ರತಿ ಹಳ್ಳಿಗಳಿಗೆ ಸಂಚರಿಸಿ ಅಧ್ಯಾತ್ಮದ ಬೋಧನೆ ನೀಡಿದ್ದಾರೆ ಎಂದು ಹೇಳಿದರು.

- Advertisement -

ಕಾರ್ಯಕ್ರಮದಲ್ಲಿ  ಅಥಿತಿಗಳಾದ ಶಂಕರೆಪ್ಪ ಮಹಾರಾಜರು ಕೌಜಲಗಿ, ರಾಮಣ್ಣ ಮಹಾರಾಜರು ನಾಗನೂರ,ಮುಖಂಡರಾದ ಎಸ್ ಡಿ ಪಾಟೀಲ ,ಎಸ್ ಎಸ್ ಪಾಟೀಲ, ಬಿ ಆರ್ ಸಾಯನ್ನವರ,ಎಸ್ ವಾಯ ಜುಂಜರವಾಡ, ಕೆ ಜಿ ಮುಧೋಳ ಸೇರಿದಂತೆ ಗ್ರಾಮದ ಹಾಗೂ ಸುತ್ತಮುತ್ತಲಿನ ಎಲ್ಲ ಇಂಚಗೇರಿ ಸಂಪ್ರದಾಯದ ಸದ್ಭಕ್ತರು,ದಿಂಡಿ ಪಲ್ಲಕಿ ಪಾದಯಾತ್ರಿಕರು ಹಾಗೂ ಶ್ರೀ ಮಾಧವಾನಂದ ಟ್ರಸ್ಟ್ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು. ಮಂಗಳಾರತಿ ಹಾಗೂ ಪುಷ್ಪವೃಷ್ಟಿಯೊಂದಿಗೆ ಮಂಡಳಿಯ ಕಾರ್ಯಕ್ರಮ ಮಂಗಲಗೊಂಡಿತು. ನಿರೂಪಣೆಯನ್ನು ಸಂಗಪ್ಪ ಹಡಪಡ, ವಂದನಾರ್ಪನೆಯನ್ನು ಚಿದಾನಂದ ಹುಗಾರ ಮಾಡಿದರು.

- Advertisement -
- Advertisement -

Latest News

ವಿದ್ಯಾರ್ಜನೆ ಯಾತಕ್ಕಾಗಿ?

ತಾವು ಕಲಿತು ಆರoಕಿ ಸಂಬಳ ಗಿಟ್ಟಿಸುವ ಕೆಲಸಕ್ಕೆ ಅರ್ಹತೆ ಪಡೆದಿಲ್ಲ. ತನ್ನ ಮಕ್ಕಳು ಪ್ರಾರಂಭದಲ್ಲಿಯೇ ಆರoಕೆ ಸಂಬಳ ಗಿಟ್ಟಿಸುವಾಗ ಯಾವ ಹೆತ್ತವರು ಬೀಗುವುದಿಲ್ಲ ಹೇಳಿ...ಈಗಿನ ದಿನಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group