spot_img
spot_img

ಪ್ರತಿಯೊಬ್ಬರೂ ಉನ್ನತ ವಿದ್ಯೆ ಪಡೆದು ಆದರ್ಶ ವ್ಯಕ್ತಿಯಾಗಿ ಬಾಳಬೇಕು

Must Read

spot_img
- Advertisement -

ಸಿಂದಗಿ: ಗುರುವಿನ ಗುಲಾಮ ಆಗುವ ತನಕ ದೊರೆಯದಣ್ಣ ಮುಕುತಿ ಎನ್ನುವಂತೆ ಮೊದಲು ಗುರುವಿನಲ್ಲಿ ಗುಲಾಮನಂತೆ ನಿಷ್ಠೆಯಿಂದ ದುಡಿಯಿರಿ ವಿದ್ಯೆ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ವಿದ್ಯೆ ಎಂದರೆ ಬರೀ ನಾಲ್ಕು ಅಕ್ಷರ ಕಲಿತು ಚಿಕ್ಕ ಉದ್ಯೋಗ ಪಡೆದುಕೊಂಡರೆ ಸಾಲದು ಉನ್ನತ ವಿದ್ಯೆ ಪಡೆದು ಸಮಾಜದಲ್ಲಿ  ಆದರ್ಶ ವ್ಯಕ್ತಿಯಾಗಿ ಬಾಳಬೇಕು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ತಾಲೂಕಿನ ಮೋರಟಗಿ ಗ್ರಾಮದ ಕಲ್ಪವೃಕ್ಷ ಪದವಿ ಕಾಲೇಜಿನಲ್ಲಿ 1983-86 ರ ವಿದ್ಯಾರ್ಥಿ ಬಳಗ ಎಸ್, ಎಸ್, ಹೈಸ್ಕೂಲ್ ಸುಂಗಠಾಣ ಇವರ ಸಹಯೋಗದಲ್ಲಿ  ಹಮ್ಮಿಕೊಂಡ ನಿವೃತ್ತ ಶಿಕ್ಷಕರ ಗುರುವಂದನಾ ಹಾಗೂ ಎಸ್, ವ್ಹಿ, ಬಿರಾದಾರ ಇವರ ಷಷ್ಠಿಪೂರ್ತಿ  ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣವು ಹುಲಿಯ ಹಾಲಿದ್ದಂತೆ ಅದನ್ನು ಸೇವಿಸಿದ ವಿದ್ಯಾರ್ಥಿ ಘರ್ಜಿಸಲೇಬೇಕು  ತಾವೆಲ್ಲರೂ ಶಿಕ್ಷಣವೆನ್ನುವ ಹಾಲನ್ನು ಕುಡಿದು ನಿಮ್ಮನ್ನು ವಿದ್ಯೆ ಕಳಿಸಿದ ಗುರುಗಳು ಮತ್ತು ನಿಮ್ಮ ಪಾಲಕರು ಕಂಡ ಕನಸನ್ನು ನನಸಾಗಿಸಿ ದೇಶದ ಆದರ್ಶ ವ್ಯಕ್ತಿಗಳಾಗಿ ಬೆಳೆಯಿರಿ ಎಂದರು.

- Advertisement -

ಮಾಜಿ ವಿ.ಪ.ಸದಸ್ಯ ಅರುಣ ಶಹಾಪುರ ಮಾತನಾಡಿ  ಮಕ್ಕಳಲ್ಲಿ ಅಡಗಿರುವ ಅಂಧಕಾರವನ್ನು ತೊಲಗಿಸಿ ಜ್ಞಾನವೆಂಬ ಬೆಳಕು ಚೆಲ್ಲುವವನೆ ಶಿಕ್ಷಕ. ಶಿಕ್ಷಕರನ್ನು ದೇವರಂತೆ ಕಾಣಿ  ಎಂದು ಹೇಳಿದ ಅವರು ಇಂದಿನ ವಿದ್ಯಾರ್ಥಿಗಳಲ್ಲಿ ನೈತಿಕತೆ ಕೊರತೆ ಎದ್ದು ಕಾಣುತ್ತಿದೆ ದಿನದಿಂದ ದಿನಕ್ಕೆ ವಿದ್ಯಾರ್ಥಿಗಳು ಮೊಬೈಲ್ ಎನ್ನುವ ಗೀಳಿಗೆ ಬಲಿಯಾಗುತ್ತಿದ್ದಾರೆ  ಪಾಲಕರು ತಮ್ಮ ಮಕ್ಕಳಿಗೆ ಮನೆ ಪಾಠ ಕಲಿಸುವುದು ಬಹಳ ಅವಶ್ಯಕತೆ ಇದೆ ಮಕ್ಕಳಿಗೆ ಅತಿಯಾದ ಸಲುಗೆ ಸಲ್ಲದು ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ ಎಂದರು.

ಕಾರ್ಯಕ್ರಮದ ಮಧ್ಯೆ ಭರತ ನಾಟ್ಯದ ಜೊತೆಗೆ ಇನ್ನಿತರ ರಸಮಂಜರಿ ಕಾರ್ಯಕ್ರಮ ಜರುಗಿದವು 1983-86 ರರ ಮಾಜಿ ವಿದ್ಯಾರ್ಥಿಗಳು ತಮಗೆ ಕಲಿಸಿದ ಶಿಕ್ಷಕರಿಗೆ ಸನ್ಮಾನಿಸಿ ಅವರ ಹಿಂದಿನ ಶಿಕ್ಷಣದ ಅನಿಸಿಕೆ ವ್ಯಕ್ತಪಡಿಸಿದರು. ಮತ್ತು ವೇದಿಕೆ ಮೇಲಿರುವ ಗಣ್ಯರು ಎಸ್. ವ್ಹಿ. ಬಿರಾದಾರ ಅವರಿಗೆ ಷಷ್ಠಿಪೂರ್ತಿ ಗ್ರಂಥ ತುಲಾಭಾರ ಮಾಡಿದರು.

ಕಾರ್ಯಕ್ರಮದಲ್ಲಿ  ಶ್ರೀ ಶಿವಬಸವ ಶಿವಾಚಾರ್ಯರು ಹಿರೇಮಠ  ಕೆರುಟಗಿ  ದಿವ್ಯಸಾನ್ನಿಧ್ಯ ವಹಿಸಿದ್ದರು ಗ್ರಾಪಂ ಅಧ್ಯಕ್ಷ ಅಮೋಘಸಿದ್ದ ಒಡಿಯಾರ್, ಹುಬ್ಬಳ್ಳಿ ರೇಲ್ವೆ ನಿರ್ವಹಣಾ ಮಂಡಳಿ ಸದಸ್ಯ ಸಿದ್ದು ಭಂಟನೂರ, ಕಲ್ಪವೃಕ್ಷ ಸಂಸ್ಥೆಯ  ಅಧ್ಯಕ್ಷ ಎಸ್, ವ್ಹಿ, ಬಿರಾದಾರ, ಬಾಗಲಕೋಟ ಸಾ, ಶಿ, ಇಲಾಖೆ ಉಪನಿರ್ದೇಶಕ ಶ್ರೀಶೈಲ್ ಬಿರಾದಾರ, ಕ್ಷೇತ್ರ ಶಿಕ್ಷಣ ಅಧಿಕಾರಿ ಎಚ್. ಎಂ. ಹರನಾಳ,  ಎನ್, ಎನ್, ಪಾಟೀಲ್, ಎಸ್, ಎಂ, ಪಾಟೀಲ್, ರಾಜಶೇಖರ್ ಪಾಟೀಲ್, ಎಸ್, ಎಚ್, ಗಡಿಗಿಮಾನಿ, ಹಾವಣ್ಣ ಹಾವಳಗಿ, ಜಿಲಾನಿ ನಾಗಾವಿ, ಭವಾನಸಿಂಗ ಭಾರತಿ, ನಿಂಗಣ್ಣ ಅಗಸರ, ಸೇರಿದಂತೆ ವಿದ್ಯಾರ್ಥಿಗಳು ಪಾಲಕರು ಹಾಗೂ ಗುರುಗಳು ಗುರುಮಾತೆಯರು ಇದ್ದರು.

- Advertisement -
- Advertisement -

Latest News

ದಲಿತರ ಹಣ ಗ್ಯಾರಂಟಿಗಳಿಗೆ ಬಳಸಿದ ಕಾಂಗ್ರೆಸ್ ; ತನಿಖೆ ಮಾಡಿಸಬೇಕು – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...
- Advertisement -

More Articles Like This

- Advertisement -
close
error: Content is protected !!
Join WhatsApp Group