spot_img
spot_img

ಅಬಕಾರಿ ಇಲಾಖೆ ಮಿಂಚಿನ ದಾಳಿ; ನಾಲ್ವರು ವಶಕ್ಕೆ

Must Read

ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಅನೈತಿಕ ಚಟುವಟಿಕೆ ಮಾಡುವವರಿಗೆ ನಡುಕ ಹುಟ್ಟಿಸಿದ ಅಬಕಾರಿ ಇಲಾಖೆ ಹಾಗು ಪೊಲೀಸ ಇಲಾಖೆಗಳ ಜಂಟಿ ಕಾರ್ಯಚರಣೆ ಅಥವಾ ತಮ್ಮ ತಮ್ಮ ಇಲಾಖೆ ಆದೇಶ ಮೇರೆಗೆ ದಾಳಿ ಮಾಡುವುದರ ಮೂಲಕ ಬೀದರ ನಲ್ಲಿ ಅನೈತಿಕ ಚಟುವಟಿಕೆ ಮಾಡುವವರು ಹುಷಾರ್ ಎಂಬ ಸಂದೇಶ ರವಾನೆ ಆಗಿದೆ ಎಂದು ಹೇಳುವುದರಲ್ಲಿ ಏನೂ ತಪ್ಪಿಲ್ಲ ಎನ್ನಬಹುದು.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಜಿಲ್ಲಾ ಅಬಕಾರಿ ಇಲಾಖೆ ಪುಲ್ ಅಲರ್ಟ್ ಆಗಿದ್ದು ಬೀದರ್ ಜಿಲ್ಲಾದ್ಯಂತ, ಬೀದರ ನಗರದಲ್ಲಿ ಮತ್ತು ಔರಾದ ಹಾಗು ಬಸವಕಲ್ಯಾಣದಲ್ಲಿ ಏಕ ಕಾಲಕ್ಕೆ  ಅಸದಿಕಾರಿಗಳು ದಾಳಿ ಮಾಡಿ ನಾಲ್ಕು ಪ್ರಕರಣ ದಾಖಲಿಸಿದ್ದಾರೆ.

ಜಿಲ್ಲಾದ್ಯಾಂತ  ಮಾಡಲಾದ ದಾಳಿಯಲ್ಲಿ ಸುಮಾರು 144,521 ರೂಪಾಯಿ ಮೌಲ್ಯದ ಎರಡು ದ್ವಿಚಕ್ರವಾಹನ ,89.280 ಲೀಟರ್ ಮದ್ಯ,33.490ಲೀಟರ್ ಕಲಬೆರಕೆ ಸೇಂದಿ ಜಪ್ತಿ ಮಾಡಿ ನಾಲ್ಕು ಜನ ಆರೋಪಿಗಳನ್ನು ವಶಕ್ಕೆ ಪಡೆದರು.

ಬೀದರ ಜಿಲ್ಲೆಯಲ್ಲಿ ಏಕಕಾಲಕೆ ನಡೆಸಿದ ದಾಳಿಯಿಂದ  ಬೀದರ ನಗರದ ಕಮಠಾಣ ರಸ್ತೆಯ ಚಿದ್ರಿಬಳಿ 60ಲೀಟರ್ ಬಿಯರ್ ಹಾಗೂ ಒಂದು ದ್ವಿಚಕ್ರ ವಾಹನ, ವಶಕ್ಕೆ ಪಡೆದಲಾಗಿದೆ ಅಲ್ಲದೆ ಬೀದರ ನಗರದ ವಡ್ಡರ ಕಾಲೋನಿಯ ಮನೆಯೊಂದರಲ್ಲಿ ಸಂಗ್ರಹಿಸಲಾದ 10 ಲೀಟರ್ ಕಲಬೆರಕೆ ಸೇಂದಿ ಹಾಗು ಔರಾದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜ್ ರಸ್ತೆ ಯಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗಿಸುತಿರುವ 8 ಲೀಟರ್ ಕಲಬೆರಕೆ ಸೇಂದಿ ಹಾಗೂ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮ ಜೈಭವಾನಿ ಚೈನೀಸ್ ಸೆಂಟರ್ ನಲ್ಲಿ  ಸಂಗ್ರಹಿಸಿ ಇಡಲಾದ 28.620 ಲೀಟರ್ ಬೀಯರ ಮತ್ತು ಆರೋಪಿ ಯನ್ನು ವಶಕ್ಕೆ ಪಡೆದ ಅಧಿಕಾರಿ ಬೀದರ ಜಿಲ್ಲೆಯಲ್ಲಿ ಒಟ್ಟು ನಾಲ್ಕೂ ಕಡೆ ದಾಳಿ ಮಾಡಿ  ಪ್ರಕರಣ ಮಾಡಿ ಸುಮಾರು 144,521 ರೂಪಾಯಿ ಮೌಲ್ಯದ ಎರಡು ದ್ವಿಚಕ್ರವಾಹನ ,89.280 ಲೀಟರ್ ಮದ್ಯ,33.490ಲೀಟರ್ ಕಲಬೆರಕೆ ಸೇಂದಿ ಜಪ್ತಿ ನಾಲ್ಕು ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೀದರ ಜಿಲ್ಲಾ ಅಬಕಾರಿ ವರಿಷ್ಠಾಧಿಕಾರಿ ಮಾಹಿತಿ ನೀಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!