ಮೀಸಲಾತಿ ಅವಧಿ ವಿಸ್ತರಣೆ

Must Read

ಮೂಡಲಗಿ: ಆಲಮಟ್ಟಿ ಮುಳುಗಡೆ ಸಂತ್ರಸ್ತರ ಕುಟುಂಬದ ಅರ್ಹ ಸದಸ್ಯರಿಗೆ ಸರಕಾರಿ ಉದ್ಯೋಗ ಹಾಗೂ ಶಿಕ್ಷಣಕ್ಕೆ ನಿಗದಿ ಪಡಿಸಿದ ಮೀಸಲಾತಿ ಸೌಲಭ್ಯ ಅವಧಿಯನ್ನು ಮತ್ತೆ 25 ವರ್ಷ ಮುಂದುವರಿಸಲು ಒಪ್ಪಿ ಸರಕಾರ ಪ್ರಕಟಣೆ ಹೊರಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ಆರ್ ನಿರಾಣಿ ತಿಳಿಸಿದ್ದಾರೆ.

ಸರಕಾರವು ಇದೇ 7 ರಂದು ಪ್ರಕಟಣೆ ನೀಡಿ ದಿನಾಂಕ 23/11/2020 ರಿಂದ ಪೂರ್ವಾನ್ವಯವಾಗುವಂತೆ ಅವಧಿ ವಿಸ್ತರಿಸಿ ಪ್ರಕಟಣೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಹರ್ಷ: ಸಂತ್ರಸ್ತರ ಮೀಸಲಾತಿ ಸೌಲಭ್ಯ ಮತ್ತೆ 25 ವರ್ಷ ಮುಂದುವರಿಸಿದ್ದಕ್ಕೆ ಆಲಮಟ್ಟಿ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ ಅವರು ಹರ್ಷ ವ್ಯಕ್ತಪಡಿಸಿ ಇದರಿಂದಾಗಿ ಬಾಗಲಕೋಟ, ಬೆಳಗಾವಿ, ವಿಜಯಪೂರ ಜಿಲ್ಲೆಗಳ ಸಾವಿರಾರು ಕುಟುಂಬಗಳಿಗೆ ನೆರವಾಗಲಿದೆ.

ಈ ಅವಧಿ ಮುಂದುವರಿಸಲು ಪ್ರಯತ್ನಿಸಿದ ವಿಧಾನ ಪರಿಷತ್ ಸದಸ್ಯ ಹಣಮಂತ ಆರ್. ನಿರಾಣಿ ಅವರನ್ನು ಅಭಿನಂದಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group