ಪರೀಕ್ಷಾ ತಯಾರಿಗಾಗಿ ‘ ನಮ್ಮ ನಡೆ ಮಕ್ಕಳ ಮನೆ ಕಡೆ ‘ ಕಾರ್ಯಕ್ರಮ – ಅಜಿತ ಮೆನ್ನಿಕೇರಿ

Must Read

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...

ಆದರ್ಶ ವಿದ್ಯಾಲಯದ ಪ್ರಕಟಣೆ

ಸಿಂದಗಿ: ಆದರ್ಶ ವಿದ್ಯಾಲಯಕ್ಕೆ 2021-22ನೇ ಸಾಲಿನ 6ನೇ ತರಗತಿಗೆ ದಾಖಲಾತಿ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಯು ಜುಲೈ 27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ...

ಜಾನುವಾರು ವೈದ್ಯ ಸಿಬ್ಬಂದಿ ಒದಗಿಸಲು ಆಗ್ರಹ

ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದ ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ಸೇರಿದಂತೆ ಸಿಬ್ಬಂದಿ ನೇಮಕ ಮಾಡುವಂತೆ ಆಗ್ರಹಿಸಿ ಕರ್ನಾಟಕ ಟಿಪ್ಪು ಸುಲ್ತಾನ ಮಹಾವೇದಿಕೆ ಕಾರ್ಯಕರ್ತರು ಮತ್ತು ರೈತರು...

ಮೂಡಲಗಿ: ಕೋವಿಡ್-19 ಸಂದರ್ಭದಲ್ಲಿ ಭೌತಿಕವಾಗಿ ತರಗತಿಗಳನ್ನು ನಡೆಸಲು ಸಾಧ್ಯವಾಗಿರುವದಿಲ್ಲ. ಅಗತ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಮಕ್ಕಳ ಜ್ಞಾನಾರ್ಜನೆ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಲಾಗಿದೆ. ಪರೀಕ್ಷಾ ತಯಾರಿಗಾಗಿ ‘ನಮ್ಮ ನಡೆ ಮಕ್ಕಳ ಮನೆ ಕಡೆ’ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಿಗೆ ಪ್ರೇರಣಾ ಕಾರ್ಯ ಮಾಡಲಾಗುತ್ತಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು.

ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಆಯೋಜಿಸಿರುವ ‘ನಮ್ಮ ನಡೆ ಮಕ್ಕಳ ಮನೆ ಕಡೆ’ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಸ್.ಎಸ್.ಎಲ್.ಸಿ ಮಕ್ಕಳ ಮನೆ ಭೇಟಿ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿ, ಶಾಲಾ ಶಿಕ್ಷಕರು ವಿದ್ಯಾರ್ಥಿಯ ಮನೆ ಭೇಟಿ ನೀಡಿ ಅವರಲ್ಲಿರುವ ಪರೀಕ್ಷಾ ಭಯ ಹಾಗೂ ಅಚ್ಚಕಟ್ಟಾದ ತಯಾರಿಯನ್ನು ಗಮನಿಸಬಹುದು. ಪಾಲಕರಿಗೆ ಮಗುವಿನ ಕಾಳಜಿ ಹಾಗೂ ಅವರು ನೀಡಿರುವ ಸಹಕಾರ ಸಹಪಾಠಿಗಳ ಹಿರಿಯ ವಿದ್ಯಾರ್ಥಿಗಳ ಮಾಗದರ್ಶನಗಳನ್ನು ಅವಲೋಕಿಸಬಹುದು.

ಕೊರೋನಾ ಸಾಂಕ್ರಾಮಿಕದಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜರ್ ಸೂಕ್ತ ರೀತಿಯಲ್ಲಿ ಬಳಸಬೇಕು. ಶೀತ, ಕೆಮ್ಮು, ಜ್ವರದ ರೋಗಗಳ ಲಕ್ಷಣಗಳು ಕಂಡುಬoದಲ್ಲಿ ಸೂಕ್ತ ವೈದ್ಯಕೀಯ ಸಹಾಯ ಪಡೆದು ಸೂಕ್ತ ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳ ಬೇಕೆಂದರು.

- Advertisement -

ಪರೀಕ್ಷಾ ಯಶಸ್ವಿ ಸಲುವಾಗಿ ಮನೆಯಿಂದಲೆ ಕೆಲಸ ಹಾಗೂ ಪ್ರತಿ ಮಗುವಿನೊಂದಿಗೆ ಸಂವಹನಗಳ ಮೂಲಕ ಅಗತ್ಯ ಕಾಳಜಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಾಲಾ ಹಂತ, ಕ್ಲಸ್ಟರ್ ಹಂತ, ತಾಲೂಕಾ ಹಂತಗಳಿoದ ‘ನೇರ ಫೋನ್ ಇನ್ ಕಾರ್ಯಕ್ರಮ’, ವಾಟ್ಸಪ್ ಗ್ರುಪ್ಸ್, ಆಡಿಯೋ, ವಿಡಿಯೋಗಳ ಮೂಲಕ ವಿದ್ಯಾರ್ಥಿಗಳಿಗೆ ಪಠ್ಯವಸ್ತುಗಳನ್ನು ತಲುಪಿಸಲಾಗಿದೆ. ಸರಣಿ ಪರೀಕ್ಷೆಗಳನ್ನು ಮನೆಯಿಂದಲೇ ಆಯೋಜಿಸಿ ಒಎಮ್‌ಆರ್ ಪ್ರತಿಗಳನ್ನು ತಲುಪಿಸುವ ಕಾರ್ಯಮಾಡುವ ಮೂಲಕ ಭಯಮುಕ್ತ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮೂಡಲಗಿ ಪಟ್ಟಣದ ಕೆ.ಎಚ್.ಸೋನವಾಲಕರ ಸರಕಾರಿ ಪ್ರಾಢ ಶಾಲೆಯ ಶಿಲ್ಪಾ ಕಾಕುಳ್ಳಿ, ವೀಣಾ ಬಳಿಗಾರ, ಸನಾ ಕಡಗಾಂವಕರ, ಎಸ್.ಎಸ್.ಆರ್ ಪ್ರೌಢ ಶಾಲೆಯ ವಾಣಿಶ್ರೀ ಢವಳೇಶ್ವರ, ನಂದಿನಿ ತೋರಸ್ಕರ, ಮಂಜು ಹಿರೇಮಠ, ಸಂಕೇತ ಕಡಾಡಿ ವಿದ್ಯಾರ್ಥಿಗಳ ಮನೆ ಭೇಟಿ ನೀಡಿ ಪರೀಕ್ಷಾ ತಯಾರಿ ಹಾಗೂ ಪಾಲಕರೊಂದಿಗೆ ಸಂವಾದಿಸಿ ಸೂಕ್ತ ಸಲಹೆ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿ ಅರಿಹಂತ ಬಿರಾದಾರ ಪಾಟೀಲ, ದೈಹಿಕ ಶಿಕ್ಷಣ ಅಧಿಕಾರಿ ಎ.ಎ ಜುನೇದಿ ಪಟೇಲ್, ತಾಲೂಕಾ ನೋಡಲ್ ಟಿ. ಕರಿಬಸವರಾಜು, ಸಹಾಯಕ ಸತೀಶ ಬಿ.ಎಸ್, ಸಿ.ಆರ್.ಪಿ ಎಸ್.ವಾಯ್ ದ್ಯಾಗಾನಟ್ಟಿ, ಕೆ.ಎಲ್ ಮೀಶಿ, ಎಸ್.ಬಿ ನ್ಯಾಮಗೌಡರ, ಎಮ್.ಎಮ್ ದಬಾಡಿ, ಕೆ.ಎಸ್ ಹೊಸಟ್ಟಿ, ಸುಭಾಸ ಕುರಣಿ, ಎಸ್.ಎಮ್ ಶೆಟ್ಟರ ಮತ್ತಿತರರು ಹಾಜರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...
- Advertisement -

More Articles Like This

- Advertisement -
close
error: Content is protected !!