Homeಸುದ್ದಿಗಳುಫೇಸ್‌ಬುಕ್‌ ನಲ್ಲಿ ಕಾಮಿನಿಯ ಜಾಲ ; ನಗ್ನ ವಿಡಿಯೋ ಹಾಕುವುದಾಗಿ ಹೆದರಿಸಿ ಹಣ ವಸೂಲಿ

ಫೇಸ್‌ಬುಕ್‌ ನಲ್ಲಿ ಕಾಮಿನಿಯ ಜಾಲ ; ನಗ್ನ ವಿಡಿಯೋ ಹಾಕುವುದಾಗಿ ಹೆದರಿಸಿ ಹಣ ವಸೂಲಿ

ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಪ್ರಭಾವಿ ನಾಯಕರನ್ನು ಟಾರ್ಗೆಟ್ ಮಾಡಿ, ವಾಟ್ಸಪ್ ಮೂಲಕ ವಿಡಿಯೋ ಕಾಲ್ ಮಾಡಿ ಹಣ ವಸೂಲಿ ಮಾಡಿದ ಚಾಣಾಕ್ಷ ಹೆಣ್ಣು ಮಗಳು, ಆ ಹೆಣ್ಣಿನ ಮೋಡಿಗೆ ಮರುಳಾಗಿ ಬೀದರ್ ಜಿಲ್ಲೆಯ ಹದಿನೈದಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳು ಈ ವಂಚಕಿಯ ಜಾಲಕ್ಕೆ ಸಿಲುಕಿದ್ದಾರೆನ್ನಲಾಗಿದೆ.

ಮೊದಲು ವಾಟ್ಸಪ್ ಕಾಲ್ ಮಾಡುವ ಹುಡುಗಿ ನಗ್ನ ವಿಡಿಯೋ ಹಾಕಿ ಬ್ಲಾಕ್ ಮೇಲ್ ಮಾಡುತ್ತಾಳೆ. ಹಣ ಕೊಡಿ‌ ಇಲ್ಲ ಫೇಸ್ಬುಕ್ ಗೆ ಹಾಕುವ ಬೆದರಿಕೆ ಹಾಕುತ್ತಾಳೆ.

ಇದೇ ರೀತಿ ಕಾಮಿನಿಯ ಜಾಲಕ್ಕೆ ಸಿಕ್ಕ ಸಂಗಮೇಶ ಎಂಬುವವರು ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡಿದ್ದು ಇಂಥ ವಂಚಕರ ಜಾಲ ಜಾಲಾಡಬೇಕೆಂದು ಕೋರಿದ್ದಾರೆ.

‘ರಾಜಸ್ತಾನ, ಜಾರ್ಖಂಡ್ ನ ಜಾಲವು ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯ ಚೆಂದದ ಚಿತ್ರದ ಡಿಪಿ ಇಟ್ಟು ಮಧ್ಯ ವಯಸ್ಕರು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಪ್ರಭಾವಿಗಳನ್ನು ಗುರಿ ಮಾಡುತ್ತಿದೆ’ ಎಂದು ವಂಚನೆ ಒಳಗಾದವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

‘ಅಪರಾಧ ಕೃತ್ಯದಲ್ಲಿ ತೊಡಗಿದವರು ಬೇರೆಯವರ ಮೊಬೈಲ್ ನಂಬರ್, ವಿಳಾಸ ಕೊಟ್ಟು ತೆರೆಮರೆಯಲ್ಲಿ ಇಂತಹ ಕೆಲಸ‌ ಮಾಡುತ್ತಾರೆ. ಯಾವುದೆ ಕಾರಣಕ್ಕೂ ಇಂಥವರಿಂದ ಮೋಸ ಹೋಗದಂತೆ ಬಿಎಸ್ ಎನ್ ಲ್ ನಿರ್ದೇಶಕ ದೂರುದಾರನಾದ ಸಂಗಮೇಶ ನಾಸೀಗರ್ ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group