ಸಿಂದಗಿ : ಕಣ್ಣು ಮಾನವನ ಅಮೂಲ್ಯ ಅಂಗವಾಗಿದ್ದು, ಎಲ್ಲರು ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ, ಮುಂಜಾಗ್ರತೆ ವಹಿಸಿ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಮಹಾಂತೇಶ ಯಡ್ರಾಮಿ ನುಡಿದರು.
ನಗರದ ಬಿ ಆರ್ ಸಿ ಸಭಾ ಭವನದಲ್ಲಿ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಓದುತ್ತಿರುವ ಪ್ರತಿಯೊಂದು ಮಗುವಿನ ಕಣ್ಣುಗಳನ್ನು ಪರೀಕ್ಷೆ ಮಾಡುವ ಕಾರ್ಯಕ್ರಮ ಚಾಲನೆ ಮಾಡುವ ಮೂಲಕ ಮಾತನಾಡಿ,, ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕಾಂಶವಳ್ಳ ಸಮತೋಲಿತ ಆಹಾರ, ನಿಯಮಿತ ಕಣ್ಣಿನ ಪರೀಕ್ಷೆ, ಪ್ರತಿ 20 ನಿಮಿಷಗಳಿಗೊಮ್ಮೆ ಕಣ್ಣಿಗೆ ಸ್ವಲ್ಪ ವಿಶ್ರಾಂತಿ, ಸೂಕ್ತ ಕಣ್ಣಿನ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು, ವಿಟಾಮಿನ್-ಎ ಸೇವನೆ, ಕಣ್ಣಿನ ಸ್ವಚ್ಚತೆ ಕಾಪಾಡುವುದು ಸೇರಿದಂತೆ ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಅನೇಕ ಸಲಹೆ-ಸೂಚನೆಗಳನ್ನು ನೀಡಿ ಎರಡು ಕಣ್ಣುಗಳು ಸರಿಯಾಗಿದ್ದರೇನೇ ನಾವು ಪ್ರಪಂಚವನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ನೋಡಲು ಸಾಧ್ಯ ಶಾಲೆಗಳಲ್ಲಿ ಓದುತ್ತಿರುವ ಪ್ರತಿಯೊಂದು ಮಗುವಿನ ಕಣ್ಣುಗಳು ಸರಿಯಾಗಿರುವುದು ಮತ್ತು ಸುರಕ್ಷಿತವಾಗಿರುವುದು ಅತ್ಯವಶ್ಯಕ ಒಂದು ವೇಳೆ ಕಣ್ಣುಗಳಲ್ಲಿ ತೊಂದರೆ ಇದ್ದು ದೃಷ್ಟಿ ದೋಷ ಹೊಂದಿದ್ದರೆ ಆ ಮಗು ಸರಿಯಾದ ರೀತಿಯಲ್ಲಿ ಶಿಕ್ಷಣವನ್ನು ಅರ್ಥಮಾಡಿಕೊಳ್ಳಲು ಕಷ್ಟ ಸಾಧ್ಯವಾಗುವುದು ಅದಕ್ಕೆಂದೇ ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಓದುತ್ತಿರುವ ಪ್ರತಿಯೊಂದು ಮಗುವಿನ ಕಣ್ಣುಗಳನ್ನು ಪರೀಕ್ಷೆ ಮಾಡಿ ಅವಶ್ಯಕವಿದ್ದರೆ ಕನ್ನಡಕಗಳ ವಿತರಣೆ ಅವಶ್ಯಕವಿದ್ದರೆ ಶಸ್ತ್ರ ಚಿಕಿತ್ಸೆಯನ್ನ ಮಾಡಿ ಔಷಧೋಪಚಾರವನ್ನು ಮಾಡಿ ಕಳಿಸಿ ಕೊಡಲಾಗುವದು ಎಂದರು.
ಶಿಕ್ಷಣ ಸಂಯೋಜಕ ಬಸನಗೌಡ ಪಾಟೀಲ ಮಾತನಾಡಿ, ಶಂಕರ ಕಣ್ಣಿನ ಆಸ್ವತ್ರೆಯವರು ತಾಲೂಕಿನ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಪ್ರೌಢ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ ಓದುತ್ತಿರುವ ಎಲ್ಲಾ ಮಕ್ಕಳ ಕಣ್ಣುಗಳನ್ನ ತಪಾಸಣೆ ಮಾಡಿ ಅಗತ್ಯ ಕನ್ನಡಕಗಳನ್ನ ಒದಗಿಸಿ ಹಾಗೂ ಸೂಕ್ತ ಶಸ್ತ್ರ ಚಿಕಿತ್ಸೆಯನ್ನು ಕೂಡ ಮಾಡಿ ಈ ಕಾರ್ಯವನ್ನು ಕಳೆದ ಮೂರು ನಾಲ್ಕು ತಿಂಗಳುಗಳಿಂದ ಮಾಡುತ್ತಾ ಬಂದಿದ್ದಾರೆ ಎಂದು ಅವರಿಗೆ ಅಭಿನಂದನೆಗಳು ತಿಳಿಸಿದರು.
ಶಸ್ತ್ರ ಚಿಕಿತ್ಸೆಗೆ ಒಳಪಡದ ಎಲ್ಲಾ ಮಕ್ಕಳನ್ನು ಇನ್ನೊಮ್ಮೆ ಪರಿಶೀಲಿಸಿ ಪರಿಷ್ಕರಿಸಿ ಒಟ್ಟು 120 ಮಕ್ಕಳನ್ನು ಪರೀಕ್ಷೆ ಮಾಡಲಾಯಿತು ಎಂದು ಬೆಂಗಳೂರಿನ ಶಂಕರ ಕಣ್ಣಿನ ಆಸ್ವತ್ರೆ ವೈದ್ಯರು ಸಲಹೆ ನೀಡಿ 50 ಮಕ್ಕಳಿಗೆ ಕನ್ನಡಕ,25 ಮಕ್ಕಳಿಗೆ ಶಸ್ತ್ರ ಚಿಕಿತ್ಸೆ,30 ಮಕ್ಕಳಿಗೆ ಔಷಧ ಉಪಚಾರ ಉಳಿದ ಮಕ್ಕಳಿಗೆ ಸಾಮಾನ್ಯ ಕಣ್ಣಿನ ಪರೀಕ್ಷೆಯನ್ನು ಮಾಡಲಾಗಿದೆ ಎಂದು ಎಂದರು.
ಬಿ ಆರ್ ಪಿ ಯಶವಂತ್ರಾಯಗೌಡ ಬಿರಾದಾರ,
ಬಿ ಐ ಇ ಆರ್ ಟಿ ರವರಾದ ವಿ ಡಿ ಬೊಮ್ಮನಹಳ್ಳಿ, ಎ ಎಸ್ ಯತ್ನಾಳ್, ಎ ಪಿ ಸೋನ್ಯಾಳ ಇವರು ಸಹಕರಿಸಿ ಮಕ್ಕಳನ್ನು ಬಿ ಆರ್ ಸಿ ಗೆ ಕರೆಸಿ ಒಟ್ಟು 120 ಮಕ್ಕಳನ್ನು ನೋಂದಾಯಿಸಿಕೊಂಡರು. ಶಂಕರ ಕಣ್ಣಿನ ಆಸ್ಪತ್ರೆ ವೈದ್ಯಾಧಿಕಾರಿಗಳು, ಆರ್ ಬಿ ಎಸ್ ಕೆ ತಂಡ ಹಾಗೂ ಸರ್ಕಾರಿ ನೇತ್ರ ತಜ್ಞರು ಭಾಗವಹಿಸಿದರು.



