spot_img
spot_img

ತಾಲೂಕಿನ ವಿದ್ಯಾರ್ಥಿಗಳು ಹತ್ತಿರದ ಸ್ಥಳದಲ್ಲಿಯೇ ಶಿಕ್ಷಣ ಪಡೆಯುವಂತೆ ಅನುಕೂಲ ಒದಗಿಸುವೆ – ಆನಂದ ಮಾಮನಿ

Must Read

ಸವದತ್ತಿ: “ಶಿಕ್ಷಣ ಎಲ್ಲರಿಗೂ ದೊರಕಬೇಕಾದ ಅವಶ್ಯಕತೆ ಇದೆ. ಅದೂ ಕೂಡ ತಮ್ಮ ವಾಸಸ್ಥಳ ಹತ್ತಿರ ಶಾಲೆಗಳಿದ್ದರೆ ಅನುಕೂಲ ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣ ತಮಗೆ ಹತ್ತಿರ ಸ್ಥಳದಲ್ಲಿ ಆದಾಗ ಹೆಚ್ಚಿನ ಹೆಣ್ಣು ಮಕ್ಕಳು ಶಿಕ್ಷಣದ ಪ್ರಯೋಜನ ಪಡೆಯಲು ಸಾಧ್ಯ. ಈ ದಿಸೆಯಲ್ಲಿ ಭಂಡಾರಹಳ್ಳಿಯಲ್ಲಿ ಪ್ರೌಢ ಶಾಲೆ ಆರಂಭಿಸಲಾಗುತ್ತಿದ್ದು ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸುವ ಮೂಲಕ ಶಿಕ್ಷಣ ಕ್ಕೆ ಹೊಸ ಭಾಷ್ಯ ಬರೆದಿದೆ. ಸುತ್ತ ಮುತ್ತಲಿನ ಎಲ್ಲಾ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ” ಎಂದು ವಿಧಾನಸಭಾ ಉಪಾಧ್ಯಕ್ಷ ಹಾಗೂ ಶಾಸಕರಾದ ಆನಂದ ಮಾಮನಿ ಕರೆ ನೀಡಿದರು.

ಅವರು ತಮ್ಮ ಮಾತೃಛಾಯಾ ನಿವಾಸದಲ್ಲಿ ಭಂಡಾರಹಳ್ಳಿಯಲ್ಲಿ ಪ್ರೌಢ ಶಾಲೆ ಮಂಜೂರಾತಿ ನೀಡಿದ ಪ್ರಯುಕ್ತ ಗ್ರಾಮದ ಗುರು ಹಿರಿಯರಿಂದ ಕೃತಜ್ಞತಾ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪ್ರಭಾರಿ ಮುಖ್ಯೋಪಾಧ್ಯಾಯ ಹಾಗೂ ಶಿಕ್ಷಕರ ಸಂಘದ ಖಜಾಂಚಿಯವರಾದ ಐ ಪಿ ಕಿತ್ತೂರ ಮಾತನಾಡಿ, ಶಿಕ್ಷಕ ಸ್ನೇಹಿ ಜನಾನುರಾಗಿ ಶಾಸಕ ಆನಂದ ಮಾಮನಿ ಯವರು ಕೋರೋನಾ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಬೆನ್ನೆಲುಬಾಗಿ ನಿಂತು ಸಹಾಯ ಸಹಕಾರ ಒದಗಿಸಿದ್ದನ್ನು ಮರೆಯಲಾಗದು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ತಾಲೂಕಿನಾದ್ಯಂತ ಹೆಚ್ಚು ಸರಕಾರಿ ಶಾಲೆಗಳು ಹಾಗೂ ಕೊಠಡಿಗಳು, ಕಂಪೌಂಡ್ ಮಂಜೂರು ಮಾಡಿಸುವ ಮೂಲಕ ಶಿಕ್ಷಣ ಇಲಾಖೆಯ ಮೆಚ್ಚುಗೆಗೆ ಪಾತ್ರ ರಾಗಿರುವರು ಎಂದು ಶಾಸಕರ ಕಾರ್ಯ ವೈಖರಿ ಕುರಿತು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಗಣ್ಯರಾದ ಬಿ ಕೆ ನಿಕ್ಕಂ ಅಧ್ಯಕ್ಷರು ಚಂದ್ರಮಾ ಪಿಕೆಪಿಎಸ್ ಭಂಡಾರಹಳ್ಳಿ, ಹೆಚ್ ಬಿ ಪಾಟೀಲ ಉಪಾಧ್ಯಕ್ಷರು ಚಂದ್ರಮಾ ಪಿಕೆಪಿಎಸ್ ಭಂಡಾರಹಳ್ಳಿ, ಎಂ ಎಂ ಮುನವಳ್ಳಿ ಸದಸ್ಯರು ಗ್ರಾಮ ಪಂಚಾಯಿತಿ ಭಂಡಾರಹಳ್ಳಿ, ಹೆಚ್ ಸಿ ಅರ್ಟಗಲ, ವಿ ಎ ಅರಭಾವಿ, ಎಸ್ ಎಂ ನಿಕ್ಕಂ, ಎ ಎಂ ದೊಡಮನಿ, ಬಿ ಎಂ ಮುನವಳ್ಳಿ, ಎಂ ಹೆಚ್ ನಿಕ್ಕಂ, ಬಿ ಎನ್ ನಿಕ್ಕಂ, ವಿ ಎ ನಿಕ್ಕಂ, ಕೆ ಡಿ ಬ್ಯಾಕೋಡ, ಎಸ್ ಸಿ ಗುಡೆವ್ವನಪೂಜೇರ, ಆರ್ ಎಂ ಬೈಲವಾಡ, ವಿ ಎ ನಲಗೆ, ಪಿ ಹೆಚ್ ಬೈಲವಾಡ, ಆರ್ ಎಸ್ ಬೈಲವಾಡ, ಎ ಎನ್ ಲಾಳಸಿಂಗೆ, ಎಸ್ ಎಫ್ ಹೊಸುಪಾರ, ಟಿ ಹೆಚ್ ನಿಕ್ಕಂ, ಹೆಚ್ ಎ ನಿಕ್ಕಂ, ಎಂ ಬಿ ಮುನವಳ್ಳಿ, ಎಲ್ ಬಿ ಅರಭಾವಿ, ಸಿ ಎಂ ನಿಕ್ಕಂ, ಹೆಚ್ ಐ ಬೋಳಿಶೆಟ್ಟಿ, ಎಫ್ ಜಿ ಕಲಕುಟ್ರಿ, ಎಫ್ ಎಂ ಗುಡೆವ್ವನಪೂಜೇರ, ಎ ಬಿ ನಾಯ್ಕರ, ಎನ್ ಎಂ ಬನ್ನೂರ, ವಿ ಅರ್ಜುನ ನಿಕ್ಕಂ ಹಾಗೂ ಹೆಚ್ ಆರ್ ಪೇಟ್ಲೂರ ಅಧ್ಯಕ್ಷರು ಪ್ರಾ ಶಾ ಶಿ ಸಂಘ ಸವದತ್ತಿ, ಎಫ್ ಜಿ ನವಲಗುಂದ ಪ್ರಧಾನ ಕಾರ್ಯದರ್ಶಿ ಪ್ರಾ ಶಾ ಶಿ ಸಂಘ ಸವದತ್ತಿ, ಐ ಪಿ ಕಿತ್ತೂರ ಮುಖ್ಯೋಪಾಧ್ಯಾಯರು ಸ ಹಿ ಪ್ರಾ ಶಾಲೆ ಭಂಡಾರಹಳ್ಳಿ ಹಾಗೂ ಖಜಾಂಚಿಗಳು ಪ್ರಾ ಶಾ ಶಿ ಸಂಘ ಸವದತ್ತಿ, ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!