- Advertisement -
ಬೀದರ: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖುದಾವಂದಪೂರ ಗ್ರಾಮದ ರೈತ ಮಹಿಳೆ ತನ್ನ ಮಗಳೊಂದಿಗೆ ಹೊಲದಿಂದ ಮನೆಗೆ ತೆರಳುವಾಗ ಸಿಡಿಲು ಬಡಿದು ಸಾವನ್ನಪ್ಪಿದ ದಾರುಣ ಘಟನೆ ರವಿವಾರ ಸಂಜೆ ಸಂಭವಿಸಿದೆ.
ಭಾಗ್ಯಶ್ರೀ ಗಂಡ ಭೀಮರಾವ ಮೇತ್ರೆ (32) ಮತ್ತು ಮಗು ವೈಶಾಲಿ ಮೇತ್ರೆ (9) ಮೃತಪಟ್ಟವರು. ಮಧ್ಯಾನ್ಹದಿಂದ ಸತತವಾಗಿ ಸುರಿಯುತ್ತಿರುವ ಮಳೆಯಲ್ಲಿ ಹೊಲದಲ್ಲಿಯೇ ಕಾಲ ಕಳೆದ ಮಹಿಳೆ ಮತ್ತು ಅವಳ ಮಗಳು ಸ್ವಲ್ಪ ಮಳೆ ನಿಂತ ಮೇಲೆ ಮನೆಗೆ ಹೋಗುವ ಸಂದರ್ಭದಲ್ಲಿ ಹೊಲದಲ್ಲಿಯೇ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದು ತಾಲೂಕು ದಂಡಾಧಿಕಾರಿ ಕಛೇರಿಯಿಂದ ಕಂದಾಯ ನಿರೀಕ್ಷಕರು ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿದರು. ಈ ಕುರಿತು ಮೆಹಕರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.