ಕೆಇಬಿ ಖಾಸಗೀಕರಣ ವಿರೋಧಿ ಹೋರಾಟಕ್ಕೆ ರೈತ ಸಂಘದ ಬೆಂಬಲ

Must Read

ಸಿಂದಗಿ: ವಿದ್ಯುತ್ ಖಾಸಗೀಕರಣ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ದಿ. 10 ರಂದು ಕರ್ನಾಟಕ ವಿದ್ಯುಚ್ಛಕ್ತಿ ಪ್ರಸರಣ ನಿಗಮದವರು ಹಮ್ಮಿಕೊಂಡಿರುವ ಹೋರಾಟಕ್ಕೆ ಅಖಂಡ ಕರ್ನಾಟಕ ರೈತ ಸಂಘ ಸಂಪೂರ್ಣ ಬೆಂಬಲವಿದೆ ಎಂದು ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ರು. ರಂಜಣಗಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಖಾಸಗೀಕರಣದಿಂದ ಕೆಇಬಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರದಾರರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಅವರಿಂದ ಕಠಿಣವಾದ ಕೆಲಸ ತೆಗೆದುಕೊಳ್ಳುತ್ತಿದ್ದಾರೆ. ಅದಲ್ಲದೆ ಈ ಖಾಸಗೀಕರಣದಿಂದ ರೈತರ ಪಂಪುಸೆಟ್ಟುಗಳಿಗೆ ಮೀಟರ್ ಅಳವಡಿಸಿ ರೈತರಿಗೂ ಬಿಲ್ ವಸೂಲಿ ಮಾಡುವ ಹುನ್ನಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿವೆ. ಇದರಿಂದಾಗಿ ಕೆಇಬಿ ಖಾಸಗೀಕರಣ ಮಾಡುತ್ತಿರುವುದು ಸರಿಯಲ್ಲ. 1992 ರಲ್ಲಿ ಪಿ.ವಿ.ನರಸಿಂಹರಾವ್ ಕಾಂಗ್ರೇಸ್ ಸರ್ಕಾರ ಇದ್ದಾಗ ರೈತಸಂಘದಿಂದ ದೆಹಲಿಯಲ್ಲಿ ಗೋಟ್‍ಕ್ಲಬ್‍ನಲ್ಲಿ ಗ್ಯಾಂಟ್ ಒಪ್ಪಂದದ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದಾರೆ. ಅವಾಗ ಖಾಸಗೀಕರಣದ ಅರಿವು ಯಾರಿಗೂ ಬರಲಿಲ್ಲ. ಇನ್ನು ಮುಂದೆ ಖಾಸಗೀಕರಣದ ಅರಿವು ಆಗಿ ಚಳುವಳಿಗಳು ಪ್ರಾರಂಭಗೊಳ್ಳುತ್ತವೆ. ಆದರಿಂದ ವಿಮಾನ, ಕುಡಿಯುವ ನೀರು, ಆಸ್ಪತ್ರೆ, ಬಸ್ ಖಾಸಗೀಕರಣ ಹೀಗೆ ಇನ್ನೂ ಅನೇಕ ಸೇರಿದಂತೆ ಖಾಸಗಿ ಅವರಿಗೆ ಸೇರುತ್ತಿವೆ. ರಸಗೊಬ್ಬರ ಸಬ್ಸಿಡಿ ನಿಲ್ಲಿಸುವುದು ಇನ್ನೂ ಅನೇಕ ರೈತರಿಗೆ ತೊಂದರೆಯಾಗದಂತೆ ಜನಸಾಮಾನ್ಯರಿಗೆ ತೊಂದರೆಯಾಗುವಂಥ ಒಪ್ಪಂದಗಳು ಮಾಡಿ ನಮ್ಮನ್ನೆಲ್ಲ ಹಣವಂತರಿಗೆ ಕೈಯಲ್ಲಿ ಕೊಡುವ ಕೆಲಸ ಈಗಿರುವ ಬಿಜೆಪಿ ಸರ್ಕಾರ ಮಾಡುತ್ತದೆ. ಈಗ ಕೆಇಬಿಯವರು ಮಾಡುವ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ.

ಇದೇ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಶಿವಶರಣಪ್ಪಗೌಡ ಅ. ಬಿರಾದಾರ, ಉಪಾಧ್ಯಕ್ಷ ಚನ್ನಪ್ಪಗೌಡ ಪಾಟೀಲ, ರೈತ ಮುಖಂಡರಾದ ಅಶೋಕ ಅಲ್ಲಾಪೂರ, ಬಾಬು ಎಸ್. ಕೂಡಿ, ಗೊಲ್ಲಾಳಪ್ಪ ಚೌಧರಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group