spot_img
spot_img

ಭೂಮಿಯ ವಿನಾಶ ತಡೆಯಲು ಗಿಡಮರಗಳನ್ನು ಬೆಳೆಸಬೇಕು

Must Read

- Advertisement -

ಮೂಡಲಗಿ: ‘ಗಿಡಮರಗಳನ್ನು ಬೆಳೆಸುವ ಮೂಲಕ ಭೂಮಿಯ ವಿನಾಶವನ್ನು ತಡೆಯಲು ಸಾಧ್ಯ’ ಎಂದು ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿ ಹೇಳಿದರು.

ಇಲ್ಲಿಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಆವರಣದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಗೋಕಾಕ ಅರಣ್ಯ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬರು ಗಿಡರಮಗಳನ್ನು ಬೆಳೆಸಿ ಪರಿಸರ ಬಗ್ಗೆ ಕಾಳಜಿವಹಿಸುವುದು ಇಂದಿನ ಅವಶ್ಯಕತೆ ಇದೆ ಎಂದರು.

ಪರಿಸರದ ವಿನಾಶದಿಂದಾಗಿ ಭೂಮಿಯು ಅಪಾಯದ ಅಂಚಿನಲ್ಲಿದ್ದು, ಜೀವಸಂಕುಲದ ಉಳಿವಿಗಾಗಿ, ಉತ್ತಮ ಪರಿಸರ ರಕ್ಷಣೆಗಾಗಿ ಗಿಡಿಮರಗಳನ್ನು ಬೆಳೆಸುವುದು ಅವಶ್ಯವಿದೆ. ಮನುಷ್ಯ ಪ್ರಕೃತಿಯ ಆರಾಧಕರಾಗಬೇಕು ಹೊರತು ವಿನಾಶಕರಾಗಬಾರದು ಎಂದರು.

- Advertisement -

ಬಸ್‍ನಿಲ್ದಾಣದ ನಿಯಂತ್ರಣಾಧಿಕಾರಿಗಳಾದ ಬಿ.ಕೆ. ಕಿಚಡಿ ಮತ್ತು ಎನ್.ಬಿ. ಹೊಸಮನಿ ಅವರು ಸಸಿಗಳನ್ನು ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಲಯನ್ಸ್ ಕ್ಲಬ್‍ದವರು ಬಸ್ ನಿಲ್ದಾಣ ಆವರಣದಲ್ಲಿ ಸಸಿಗಳನ್ನು ನೆಡುತ್ತಿರುವುದು ಶ್ಲಾಘನೀಯವಾಗಿದೆ, ಸಾರಿಗೆ ಇಲಾಖೆಯ ಸಿಬ್ಬಂದಿಯವರು ಸೇರಿ ಸಸಿಗಳನ್ನು ರಕ್ಷಣೆ ಮಾಡುತ್ತೇವೆ ಎಂದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ಪ್ರಾಸ್ತಾವಿಕ ಮಾತನಾಡಿ ಆಗಷ್ಟ ತಿಂಗಳದಲ್ಲಿ ಲಯನ್ಸ್ ಕ್ಲಬ್‍ವು ‘ನಮ್ಮ ನಡೆ ಸಸಿ ನೆಡುವ ಕಡೆಗೆ’ ಅಭಿಯಾನ ಹಮ್ಮಿಕೊಂಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನೂರಾರು ಸಸಿಗಳನ್ನು ನೆಡುವ ಯೋಜನೆ ಹೊಂದಿರುವೆವು ಎಂದರು.

ವೆಂಕಟೇಶ ಸೋನವಾಲಕರ, ಸಂಜಯ ಮೋಕಾಶಿ, ಈರಣ್ಣ ಕೊಣ್ಣೂರ, ಗಿರೀಶ ಆಸಂಗಿ, ಪುಲಕೇಶ ಸೋನವಾಲಕರ, ಸುರೇಶ ನಾವಿ, ಎನ್.ಟಿ. ಪಿರೋಜಿ, ಶಿವಾನಂದ ಗಾಡವಿ, ಮಹಾಂತೇಶ ಹೊಸೂರ, ಶಿವಾನಂದ ಕಿತ್ತೂರ, ಮಹಾವೇರಿ ಸಲ್ಲಾಗೋಳ, ಪ್ರಮೋದ ಪಾಟೀಲ, ಶ್ರೀಶೈಲ್ ಲೋಕನ್ನವರ, ಎಸ್.ಜಿ. ಮಿಲ್ಲಾನಟ್ಟಿ, ಚುಟುಕುಸಾಬ ಜಾತಿಗಾರ, ಸೈಪುಸಾಬ ಇದ್ದರು.

- Advertisement -

ಲಯನ್ಸ್ ಕ್ಲಬ್ ಖಜಾಂಚಿ ಸಪ್ರೀತ ಸೋನವಾಲಕರ ಸ್ವಾಗತಿಸಿ ನಿರೂಪಿಸಿದರು.

- Advertisement -
- Advertisement -

Latest News

ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ

  ಉಪ್ಪಿಷ್ಟು ಹುಳಿಯಿಷ್ಟು ಸಿಹಿಯಿಷ್ಟು ಖಾರಿಷ್ಟು ಸೇರಿದರೆ ಬಹಳರುಚಿ ಮಾಡಿದಡಿಗೆ ಅಳುನಗುವು ಸುಖದುಃಖ ನೋವ್ನಲಿವು ಸೇರಿದರೆ ಅನುಭಾವದಡಿಗೆ ರುಚಿ - ಎಮ್ಮೆತಮ್ಮ ಶಬ್ಧಾರ್ಥ ಅನುಭಾವ = ಅತೀಂದ್ರಿಯವಾದ ಅನುಭವ ತಾತ್ಪರ್ಯ ನಾವು ಮಾಡುವ ಅಡಿಗೆಯಲ್ಲಿ ಷಡ್ರಸಗಳಾದ ಉಪ್ಪು...
- Advertisement -

More Articles Like This

- Advertisement -
close
error: Content is protected !!
Join WhatsApp Group