ಸವದತ್ತಿ: ಇಕೋಕ್ಲಬ್ ಅಡಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ಉಪನ್ಯಾಸ ಕಾರ್ಯಕ್ರಮ ಹಾಗೂ ವಿಜ್ಞಾನ ಪ್ರಯೋಗ. ರಂಗೋಲಿ ಹಾಗೂ ವಸ್ತು ಪ್ರದರ್ಶನ ವಿವಿಧ ಕಾರ್ಯಕ್ರಮ ಗಳು ನಡೆದವು.
ಪಟ್ಟಣದ ಗುರ್ಲಹೊಸೂರಿನ ಸರಕಾರಿ ಶಾಸಕರ ಮಾದರಿ ಕನ್ನಡ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ನಿಮಿತ್ತ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ವಿಜ್ಞಾನ ಶಿಕ್ಷಕಿಯರ ಮಾರ್ಗದರ್ಶನದಿಂದ ಆರರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಂದ ವಿಭಿನ್ನವಾದ ಹಾಗೂ ಅದ್ಭುತವಾದಂತಹ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ರಂಗೋಲಿ ಚಿತ್ರಗಳು ಮೂಡಿಬಂದಿದ್ದವು ಇವುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ ಎನ್ ಕಂಬೋಗಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ ಬಿ ಬಳಿಗಾರ ಅಕ್ಷರ ದಾಸೋಹ ಯೋಜನೆ ನಿರ್ದೇಶಕರಾದ ಸಿ. ವೈ. ತುಬಾಕಿಯವರು ದೈಹಿಕ ಶಿಕ್ಷಣಾಧಿಕಾರಿಗಳಾದ ವೈ. ಎಮ್. ಶಿಂಧೆ, ಶಿಕ್ಷಣ ಸಂಯೋಜಕರಾದ ಜಿ ಎಮ್ ಕರಾಳೆಯವರು, ರಾಜ್ಯ ಭಾರತ ಸೇವಾದಳದ ಖಜಾಂಚಿಗಳಾದ ಬಸವರಾಜ ಹಟ್ಟಿಗೌಡರ ಮತ್ತು ಭಾರತ ಸೇವಾದಳ ಚಿಕ್ಕೋಡಿಯ ಕಾರ್ಯದರ್ಶಿಗಳಾದ ಅನಿಲ ಪತ್ತಾರ ಇವರು ಆಗಮಿಸಿ ವಿಜ್ಞಾನ ರಂಗೋಲಿ ಹಾಗೂ ವಿಜ್ಞಾನ ವಸ್ತು ಹಾಗೂ ಪ್ರಯೋಗ ಕುರಿತು ಏರ್ಪಡಿಸಿದ್ದ ಪ್ರದರ್ಶನ ವೀಕ್ಷಿಸಿ ಮಕ್ಕಳಲ್ಲಿರುವ ಅಂತಹ ಪ್ರತಿಭೆಯನ್ನು ಕಂಡು ಅಧಿಕಾರಿಗಳು ಮಕ್ಕಳನ್ನು ಪ್ರಶಂಸಿಸಿದರು.
ನಂತರ ಜರುಗಿದ ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್. ಆರ್. ಪೆಟ್ಲೂರರವರು ಸಸಿಗೆ ನೀರುಣಿಸುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.
ಪದವೀಧರ ಪ್ರಧಾನ ಗುರುಗಳಾದ ಎಂ.ಬಿ ಕಮ್ಮಾರ ಸರಕಾರಿ ಪ್ರೌಢಶಾಲೆ ಕಗದಾಳ ಗಣಿತ ಸಂಪನ್ಮೂಲ ವ್ಯಕ್ತಿಗಳಾದ ಜಿ.ಕೆ ಪಾಟೀಲ್ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಆರ್ ಕೆ ಭಜಂತ್ರಿ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗಳಾದ ಎಫ್. ಜಿ. ನವಲಗುಂದ.ಗುರ್ಲಹೊಸೂರ ಸಂಪನ್ಮೂಲ ವ್ಯಕ್ತಿಗಳಾದ ಎಸ್. ರಾಮಚಂದ್ರ.ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕರಾದ ವೈ. ಬಿ. ಕಡಕೋಳ, ಸಿ.ವ್ಹಿ.ಬಾರ್ಕಿ, ಎಸ್.ಬಿ.ಬೆಟ್ಟದ, ಎಂ.ಎಂ.ಸಂಗಮ, ಬಿ. ಆರ್. ಪಿ. ಗಳಾದ ವ್ಹಿ.ಸಿ.ಹಿರೇಮಠ, ರತ್ನಾ ಸೇತಸನದಿ ಹಾಗೂ ಶಾಲೆಯ ಸಿಬ್ಬಂದಿಯವರಾದ ಎಸ್ ಎಚ್ ಕರಿಗಾರ,ಶ್ರೀಮತಿ ಯಕ್ಕುಂಡಿ,ಶ್ರೀಮತಿ ಗುಂಡಾರ,ಶ್ರೀಮತಿ ಸಂತಿ ಶ್ರೀಮತಿ ಕೆಂಪಯ್ಯನವರ, ಶ್ರೀಮತಿ ಮಿರ್ಜಿ, ಐಹೊಳೆ, ಮಾಟೋಳ್ಳಿ , ದೊಡ್ಡಕಲ್ಲನ್ನವರ, ಶ್ರೀಮತಿ ಗೊರಗುದ್ದಿ, ಬೆಳವಟಗಿ ಹಾಗೂ ಅತಿಥಿ ಶಿಕ್ಷಕಿಯರಾದ ಕುಮಾರಿ ರಾಧಾ ಹಾಗೂ ಸುರಪುರ ಹಾಗೂ ಅಡುಗೆ ಸಿಬ್ಬಂದಿ,ಆಯಾ ಶ್ರೀಮತಿ ನೀಲಮ್ಮ ಮೊದಲಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇಕೋಕ್ಲಬ್ ನೋಡಲ್ ಶಿಕ್ಷಕಿಯರಾದ ಶ್ರೀಮತಿ ಎಸ್ ಎಸ್ ಮಿರ್ಜಿಯವರು “ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ” ಕುರಿತಾಗಿ ಪ್ರಾಸ್ತಾವಿಕ ನುಡಿಗಳನ್ನು ಹೇಳಿ ರಾಮನ್ ಪರಿಣಾಮ ಕುರಿತು ಮಕ್ಕಳಿಗೆ ಮಾಹಿತಿಯನ್ನು ನೀಡಿದರು ನಂತರ ಮಕ್ಕಳಿಂದ ವಿಶೇಷ ಕಾರ್ಯಕ್ರಮ ಗಳು ಅನಾವರಣಗೊಂಡವು ಎಂಟನೇ ತರಗತಿಯ ವಿದ್ಯಾರ್ಥಿನಿಯರಿಂದ ಡಾಕ್ಟರ್ ಸರ್ ಸಿ ವಿ ರಾಮನ್ ಹಾಗೂ ಜಗದೀಶ್ ಚಂದ್ರ ಬೋಸ್ ರವರ ಬಗ್ಗೆ ಸಂಕ್ಷಿಪ್ತ ಪರಿಚಯ ಮಾಹಿತಿಯನ್ನು ನೀಡಿದರು.
7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳು ಪರಿಸರದ ಕುರಿತು ಗೀತೆಗಳನ್ನು ಹಾಡಿದರು ಏಳನೇ ತರಗತಿ ವಿದ್ಯಾರ್ಥಿನಿ ಕುಮಾರಿ ಅನ್ನಪೂರ್ಣ ಜಾಬಣ್ಣ ವರ್ “ಮರದಂತೆ ಮನುಷ್ಯನಿಲ್ಲ” ಎಂಬುದರ ಕುರಿತು ವಿಶಿಷ್ಟವಾಗಿ ಅನಿಸಿಕೆಯನ್ನು ವ್ಯಕ್ತಪಡಿಸಿದಳು 8ನೇ ತರಗತಿಯ ವಿದ್ಯಾರ್ಥಿಗಳು ಪರಿಸರ ಜಾಗೃತಿ ರೂಪಕವನ್ನು ಪ್ರಸ್ತುತಪಡಿಸಿದರು ಇದು ಪರಿಸರ ಕಾಳಜಿ ಬಗ್ಗೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಪ್ರತಿಯೊಬ್ಬರಿಗೂ ಮನಮುಟ್ಟುವಂತೆ ಅಭಿನಯದ ಮುಖಾಂತರ ಪ್ರಸ್ತುತಪಡಿಸಿದರು.
ಪ್ರಧಾನ ಗುರುಗಳಾದ ಎಮ್ ಬಿ ಕಮ್ಮಾರ ಅವರ ಪ್ರೋತ್ಸಾಹ ಹಾಗೂ ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ಎಸ್ ಎಸ್ ಮಿರ್ಜಿ ಇವರ ಮಾರ್ಗದರ್ಶನದಲ್ಲಿ 6 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಂದ ಹಲವಾರು ಸರಳ ಪ್ರಯೋಗಗಳನ್ನು ಮಾಡಿತೋರಿಸಿದರು. ಅದರಲ್ಲೂ ವಿಶೇಷವಾಗಿ ಆಮ್ಲ ಪ್ರತ್ಯಾಮ್ಲ ಗಳನ್ನು ನೈಸರ್ಗಿಕ ಸೂಚಕಗಳ ಮುಖಾಂತರ ಗುರುತಿಸುವದು, ವಿವಿಧ ಸಾಂದ್ರತೆಗಳ ಆಧಾರದ ಸರಳ ಪ್ರಯೋಗ, ಸೌರಮಂಡಲದ ಮಾದರಿಯ ವಿವರಣೆ ,ವಿದ್ಯುತ್ ಮಂಡಲದ ಪ್ರಯೋಗ ,ಸರಳ ಸಂಪನ್ಮೂಲಗಳನ್ನು ಬಳಸಿ ಸ್ಟೆತೋಸ್ಕೋಪ್ ತಯಾರಿಕೆ, ಪರಾವರ್ತನೆ ಗೊಳ್ಳುವ ಹಾಗೂ ಪರಾವರ್ತನೆ ಗೊಳ್ಳದ ಬದಲಾವಣೆಗಳ ಬಗ್ಗೆ ಪ್ರಯೋಗಗಳನ್ನು ಮಾಡಿ ತೋರಿಸಿದ್ದು ಗಮನ ಸೆಳೆಯಿತು.
ಮುಖ್ಯ ಅತಿಥಿಗಳಾದ ಸರಕಾರಿ ಪ್ರೌಢಶಾಲೆ ಕಗದಾಳ ಗಣಿತ ಸಂಪನ್ಮೂಲ ವ್ಯಕ್ತಿಗಳಾದ ಜಿ.ಕೆ ಪಾಟೀಲ ಮಾತನಾಡಿ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕುರಿತು ತಿಳಿಸುತ್ತ ಮಕ್ಕಳಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಸಂಶೋಧನಾತ್ಮಕ ಮನೋಭಾವ ಜೊತೆಗೆ ಮುಂದಿನ ಭಾವೀ ವಿಜ್ಞಾನಿಗಳಾಗಲು ಪ್ರಯತ್ನಿಸಬೇಕೆಂದು ತಿಳಿಸಿ, ಅರವಿಂದ್ ಗುಪ್ತ ರವರು ಯೂಟ್ಯೂಬ್ನಲ್ಲಿ ತೋರಿಸಿರುವ 700 ಕ್ಕೂ ಹೆಚ್ಚು ಸರಳ ಪ್ರಯೋಗಗಳನ್ನು ವೀಕ್ಷಿಸಿ ಶಿಕ್ಷಕರ ಸಹಾಯದಿಂದ ಮಾಡಲು ಪ್ರೇರೇಪಿಸಿದರು ಅದರ ಜೊತೆಗೆ ನಮ್ಮ ದೈನಂದಿನ ಜೀವನದಲ್ಲಿ ವಿಜ್ಞಾನವು ಹಾಸುಹೊಕ್ಕಾಗಿದ್ದು ಪ್ರತಿಯೊಂದಕ್ಕೂ ವೈಜ್ಞಾನಿಕ ಕಾರಣಗಳಿವೆ ಎಂಬುದನ್ನು ತಿಳಿಸಿದರು ಬರವಣಿಗೆಯ ವಿವಿಧ ಕೌಶಲ್ಯಗಳನ್ನು ಪರಿಚಯಿಸಿದರು ಉದಯಕಾಲ ಪತ್ರಿಕೆಯಲ್ಲಿ ಬರುವ ಅನುದಿನ ವಿಜ್ಞಾನ ಎಂಬ ಶೀರ್ಷಿಕೆಯ ಎಲ್ ಪಿ ಕುಲಕರ್ಣಿಯವರ ಸಾರಥ್ಯದಲ್ಲಿ ಬರುವ ವಿಜ್ಞಾನಿಕ ಆರ್ಟಿಕಲ್ ಗಳನ್ನು ಓದುವಂತೆ ಪ್ರೇರೇಪಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಆರ್ ಕೆ ಭಜಂತ್ರಿ ಅವರು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಮಹತ್ವವನ್ನು ಹಾಗೂ ಇಡೀ ರಾಷ್ಟ್ರದಲ್ಲಿ ಅದನ್ನು ಆಚರಿಸುವ ಉದ್ದೇಶದ ಬಗ್ಗೆ ತಿಳಿಸಿದರು. ಹಾಗೂ ಪ್ರತಿಯೊಬ್ಬರು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡು ವೈಜ್ಞಾನಿಕ ಚಿಂತನೆಯ ಪಥದತ್ತ ಚಲಿಸಲು ಮಾರ್ಗದರ್ಶನ ನೀಡಿದರು.
ವೈ ಬಿ ಕಡಕೋಳ ಶಿಕ್ಷಕ ಸಾಹಿತಿಗಳು ತಮ್ಮ ಸಾರಥ್ಯದಲ್ಲಿ ಮೂಡಿ ಬಂದಂತಹ ಪುಸ್ತಕಗಳನ್ನು ರೂಪಕದಲ್ಲಿ ಭಾಗವಹಿಸುವಂತಹ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ನೀಡಿ ಎಲ್ಲ ವಿದ್ಯಾರ್ಥಿಗಳು ಓದಿನಲ್ಲಿ ಹಾಗೂ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಲು ಪ್ರೇರೇಪಿಸಿದರು.
ನಂತರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವೈ. ಬಿ. ಕಡಕೋಳ. ಜಿ. ಕೆ. ಪಾಟೀಲ.ರಾಜು ಭಜಂತ್ರಿ ಯವರನ್ನು ಸನ್ಮಾನಿಸಲಾಯಿತು.
ಎಸ್ ಎಚ್ ಕರಿಗಾರ ಗುರುಗಳು ಸ್ವಾಗತಿಸಿದರು ಶ್ರೀಮತಿ ಗುಂಡಾರ ಗುರುಮಾತೆಯವರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ನೆರವೇರಿಸಿದರು ಆನಂದ ಬೆಳವಟಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಎಂ.ಎಂ ಮಾಟೋಳ್ಳಿ ವಂದಿಸಿದರು.
ವರದಿ: ವೈ. ಬಿ. ಕಡಕೋಳ, ಸಂಪನ್ಮೂಲ ವ್ಯಕ್ತಿ ಗಳು