- Advertisement -
ಬಾಗಲಕೋಟೆ -ಬಾಗಲಕೋಟೆ ಜಿಲ್ಲೆಗೆ ಮತ್ತೊಂದು ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸುತ್ತಿರುವ ಮಾಜಿ ಸಚಿವ ಎಸ್ ಆರ್ ಪಾಟೀಲರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರೋಣ ತಾಲೂಕ ಘಟಕದಿಂದ ಬಾಗಲಕೋಟೆಯ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಲಾಯಿತು
ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಎಸ್ ಆರ್ ಪಾಟೀಲ್ ಅವರು ನೂತನವಾಗಿ ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ MBBS ವೈದ್ಯಕೀಯ ಕಾಲೇಜ್ ಮಂಜೂರಾತಿ ಪಡೆದುಕೊಂಡು ಬಂದಿದ್ದಾರೆ.
ಈ ಸಂದರ್ಭದಲ್ಲಿ ಮಹಾಸಭೆಯ ಗದಗ ಜಿಲ್ಲಾ ಸಮಿತಿ ಸದಸ್ಯ ಭೀಮರಡ್ದೆಪ್ಪ ರಡ್ಡೆರ, ಮಹಾಸಭೆಯ ತಾಲೂಕ ಅಧ್ಯಕ್ಷ ಅನಿಲಕುಮಾರ ತೆಗ್ಗಿನಕೇರಿ, ಮಹಾಸಭೆಯ ಸದಸ್ಯಶ್ರೀ ಅಶೋಕ ಗಡಗಿ ಹಾಗೂ ಹಣಮಂತಪ್ಪ ಗಡಗಿ ಉಪಸ್ಥಿತರಿದ್ದರು