spot_img
spot_img

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಮಾವಿನಗಿಡದ ಆಯ್ಕೆ

Must Read

spot_img
- Advertisement -

ಮೂಡಲಗಿ: ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಶನಿವಾರ ಜರುಗಿದ ಮೂಡಲಗಿ ಶೈಕ್ಷಣಿಕ ವಲಯದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಭೆಯಲ್ಲಿ ನೂತನ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷರಾಗಿ ಎಮ್.ಜಿ.ಮಾವಿನಗಿಡದ ಆಯ್ಕೆಗೊಂಡರು.

ಸಭೆಯಲ್ಲಿ ಸಂಘದ ಗೌರವಾಧ್ಯಕ್ಷರಾಗಿ ಎಲ್.ಎಮ್.ಬಡಕಲ್ ಆಯ್ಕೆಗೊಂಡರು ಈ ಸಮಯದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಸ್.ಎಮ್.ಲೋಕನ್ನವರ, ಪ್ರಧಾನ ಕಾರ್ಯದರ್ಶಿ ಎ.ಪಿ.ಪರಸನ್ನವರ, ನೌಕರ ಸಂಘದ ಕಾರ್ಯದರ್ಶಿ ಕೆ.ಆರ್.ಅಜ್ಜಪ್ಪನವರ, ಶಿಕ್ಷಕರ ಪತ್ತಿನ ಸೊಸೈಟಿ ಅಧ್ಯಕ್ಷ ವಾಯ್.ಬಿ.ಪಾಟೀಲ ಹಾಗೂ ವಿವಿಧ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ಎಮ್.ಜಿ.ಮಾವಿನಗಿಡದ ಅವರು ನೌಕರ ಮತ್ತು ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳಿಂದ ಸತ್ಕಾರ ಸ್ವೀಕರಿಸಿ ಮಾತನಾಡಿ, ಶಿಕ್ಷಕರ ಜವಾಬ್ದಾರಿ ಮತ್ತು ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದರ ಜೊತೆಗೆ ಶಿಕ್ಷಕರ ಬೇಕು ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.

- Advertisement -

ಬಿ.ಇ.ಒ ಅಜೀತ ಮನ್ನಿಕೇರಿ ನೂತನ ಅಧ್ಯಕ್ಷರನ್ನು ಕಚೇರಿಯಿಂದ ಸತ್ಕರಿಸಿ ಮಾತನಾಡಿ, ಸಂಘದ ಎಲ್ಲ ಪದಾಧಿಕಾರಿಗಳು ಮತ್ತು ನಿರ್ದೇಶಕರು ಸರಕಾರಿ ಶಾಲೆಯಲ್ಲಿ ದಾಖಲಾತಿಗಳನ್ನು ಹೆಚ್ಚಿಸಿ ಗುಣಮಟ್ಟದ ಶಿಕ್ಷಣ ನೀಡುವದರೊಂದಿಗೆ ಸಂಘವು ರಾಜ್ಯದಲ್ಲಿಯೇ ಉತ್ತಮ ಸಂಘವಾಗಿ ಬೆಳೆಯಲಿ ಎಂದು ಹಾರೈಸಿದರು.

ಇದೆ ಸಮಯದಲ್ಲಿ ಮೂಡಲಗಿ ವಲಯದಿಂದ ರಾಜ್ಯ ಘಟಕಕ್ಕೆ ನಾಮನಿರ್ದೇಶಕರಾಗಿ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಡಿ.ಜೆ.ಕಲಾರಕೊಪ್ಪ, ರಾಜ್ಯ ಸಹ ಕಾರ್ಯದರ್ಶಿಯಾಗಿ ಎಮ್.ವಾಯ್.ಸಣ್ಣಕ್ಕಿ, ರಾಜ್ಯ ಕಾರ್ಯಕಾರಣಿ ಸಮೀತಿ ಸದಸ್ಯರಾಗಿ ಆಯ್ಕೆಗೊಂಡ ಎಸ್.ಎ.ಕುರಣಗಿ ಅವರನ್ನು ಹಾಗೂ ಜಿಲ್ಲಾ ಘಟಕಕ್ಕೆ ನಾಮನಿರ್ದೇಶನಗೊಂಡು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ಆಯ್ಕೆಗೊಂಡ ಸಂತೋಷ ಪಾಟೀಲ, ಶಾನವಾಜ ದಬಾಡಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.

ಈ ಸಮಯದಲ್ಲಿ ವಿ.ಎ.ಹುಲ್ಲಾರ, ಬಿ.ಬಿ.ಕೆವಟಿ, ಎಮ್.ಎಮ್.ಮೋಡಿ, ಸಿದ್ಧಾರೂಢ ನಾಗನೂರ, ಜಿ.ಆಯ್.ಪತ್ತಾರ, ಎಸ್.ಎಸ್.ಪಾಟೀಲ, ಬಿ.ಎಲ್.ನಾಯಿಕ, ಎನ್.ಜಿ.ಹೆಬ್ಬಳಿ, ಎ.ಬಿ.ನಾಯ್ಕ, ಗೋವಿಂದ ಸಣ್ಣಕ್ಕಿ, ರಮೇಶ ಬೆಳವಿ, ಪಿ.ಬಿ.ಕುಲಕರ್ಣಿ, ವಾಯ್.ಡಿ.ಜಲ್ಲಿ, ರಶೀದಾ ಹುಣಶ್ಯಾಳಕರ, ಮಹಾದೇವಿ ಕಳಸನ್ನವರ, ಲಕ್ಷ್ಮೀ ಯಲಿಗಾರ, ಹಾಗೂ ಸಿ.ಆರ್.ಪಿ, ಬಿ.ಆರ್.ಪಿ, ಶಿಕ್ಷಣ ಸಂಯೋಜಕರು, ಕಚೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದರು.

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group