- Advertisement -
ಮೂಡಲಗಿ : ಪಟ್ಟಣದ ವಿವಿಧ ಮಾರ್ಗಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ಉದ್ದೇಶಿಸಿರುವುದರಿಂದ ಸೋಮವಾರ ದಿ.ಜು 8ರಂದು ಮುಂಜಾನೆ 10 ಘಂಟೆಯಿಂದ ಸಾಯಂಕಾಲ 5 ಘಂಟೆಯವರೆಗೆ ವಿದ್ಯುತ್ ಪೊರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ.
ಆದ್ದರಿಂದ 110 ಕೆವ್ಹಿ ಮೂಡಲಗಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಪಟ್ಟಣದ ಶ್ರೀ ಶಿವಭೋದರಂಗ ಮಠ, ಕಲ್ಮೇಶ್ವರ ವೃತ್ತ, ಗಾಂಧಿ ಚೌಕ, ಮಾರ್ಕೆಟ್ ರೋಡ, ದೇಶಪಾಂಡೆ ಪ್ಲಾಟ್, ಅಮನ್ ನಗರ, ದನಗಳ ಪೇಟೆ ರಸ್ತೆ, ಅಂಬೇಡಕರ ನಗರ ಹಾಗೂ ವಿದ್ಯಾ ನಗರದ ವಿದ್ಯುತ್ ಪೊರೈಕೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಮ್ ಎಸ್ ನಾಗನ್ನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.