(ಸಾವಿತ್ರಿ ಕಮಲಾಪೂರ, ಶಿವಯೋಗಿ ಕುಸುಗಲ್ಲ, ಪುಷ್ಪಾವತಿ, ಡಾ.ಜಯಾನಂದ, ಸಂತೋಷ ಬಿದರಗಡ್ಡೆ, ಗಿರಿಜಾ ಹಿರೇಮಠ)
ಆಡೋಣ ಬಾ ಬಣ್ಣ ತಿಳಿಯೋಣ ಬಾ
ಆಡೋಣ ಬಾ
ನಲಿಯೋಣ ಬಾ
ಗೆಳೆಯ
ಬಣ್ಣ ಬಣ್ಣದಲಿ
ಮುಳುಗಿ ಏಳೋಣ
ಬಾ ಕೂಡಿ
ನಲಿಯೋಣ ಬಾ
ಬಾಳಿನ ಲಗೋರಿ
ಕಟ್ಟಿ ಹೊಡೆಯೋಣ ಬಾ
ಗುರಿ ಮುಟ್ಟೋಣ ಬಾ
ಹೃದಯ ತಟ್ಟೋಣ ಬಾ
ಆಟ ಆಡೋಣ ಬಾ
ಗೋಲಿ ಎಸೆಯೋಣ ಬಾ
ಬಣ್ಣ ಕಳೊಚೋಣ ಬಾ
ಮುಖವಾಡ ಬಯಲು
ಮಾಡೋಣ ಬಾ
ಹೋಗೋಣ ಬಾ
ಕೇಕೆ ಹಾಕೋಣ ಬಾ
ಹಸ್ತ ಮೂಡಿಸೋಣ ಬಾ
ಆಡೋಣ ಬಾ
ಕೂಡಿ ನಲಿಯೋಣ ಬಾ
ಬಾಳಿನ ಪಥದಲಿ ಸಾಗೋಣ ಬಾ
ಬದುಕು ಕಟ್ಟೋಣ ಬಾ
ಇರುಳು ದೂಡೋಣ ಬಾ
ಬೆಳಕು ಕಾಣೋಣ ಬಾ
ಬುದ್ಧ ಬಸವ ಅಂಬೇಡ್ಕರ್
ತತ್ವ ಸಿದ್ದಾಂತವ ತಿಳಿಸೋಣ ಬಾ
ತೇರನು ಎಳೆಯೋಣ ಬಾ
ಗುರಿ ತಲುಪಿಸೋಣ ಬಾ
ನೀ ತುಳಿದ ಪಧದಲಿ
ನಾ ಸಾಗಿ ಬರುವೆ ಬಾ
ಆಡೋಣ ಬಾ
ಎರಚೋಣ ಬಾ
ಬಣ್ಣ ತಿಳಿಯೋಣ ಬಾ…
ಪ್ರೊ ಸಾವಿತ್ರಿ ಮಹದೇವಪ್ಪ ಕಮಲಾಪೂರ ಮೂಡಲಗಿ
ಹೋಳಿ
ವಿವಿಧ ಭಾಷೆ, ಜನಾಂಗದ
ಐಕ್ಯತೆಯ ಭಾವ,
ಮಧುರ ಬಾಂಧವ್ಯ.
ಏಳು ಬಣ್ಣಗಳು ಸೇರಿ, ಬಿಳಿ
ಬಣ್ಣದ ಶಾಂತಿಯ ತೋಟ..
ಹತ್ತು ಹಲವು ಗಿಡ ಮರ ಬಳ್ಳಿಗಳಲಿ ಲವಲವಿಕೆಯ ಚಿಗುರು, ಮುಗುಳು,
ಅರಳು , ಕೂಜನದ ಸಂತಸದ ಕೂಗು.
ಎಲ್ಲರ ಮನದಂಗಳಕೆ ಕಟ್ಟಲಿ
ಸೌಹಾರ್ದ ಭಾವದ ಕಾಮನ
ಬಿಲ್ಲಿನ ಸಮತೆಯ ತೋರಣ.
ಹೋಳಾಗದಿರಲಿ ಮನ ಎಂದಿಗೂ; ಬೆಸೆದುಕೊಳ್ಳಲಿ ಮನ ಎಲ್ಲರೆಲ್ಲರಲಿ .
ಹೋಳಿ ಹಬ್ಬದ ಶುಭಾಶಯಗಳು.
ಶಿವಯೋಗಿ ಕುಸುಗಲ್ಲ.
ಹೋಳಿ ಹಬ್ಬ
ಬಣ್ಣ ಬಣ್ಣಗಳ ಹಬ್ಬವು
ಹೋಳಿ ಹಬ್ಬವು ಬಂದಿದೆ
ಸಡಗರ ಸಂಭ್ರಮ ತಂದಿದೆ
ಏಳು ಬಣ್ಣವು ಬೇಕೆಂದಿದೆ //
ಧರ್ಮ ಜಾತಿ ಬೇಧವಿಲ್ಲ
ಹೆಣ್ಣು ಗಂಡು ತಾರತಮ್ಯವಿಲ್ಲ
ಪ್ರೀತಿ ಪ್ರೇಮದ ಸಂಕೇತ
ಬಣ್ಣದ ಓಕುಳಿ ಆಡುತ //
ದುಷ್ಟ ಶಕ್ತಿ ಸುಟ್ಟ ಹಾಕು
ಸತ್ಯ ನ್ಯಾಯ ಜಗದಲ್ಲಿ ಬೇಕು
ಮನೆ ಮನೆಗೇ ಬೇಡುವ ರು
ಕಟ್ಟಿಗೆ ಕುಳ್ಳು ಬೇಕೆನ್ನುವರು //
ಕಾಮನ ಬೂದಿ ಹಲ್ಲಿಗೆ ಹಚ್ಚಿ
ಕಾಮನ ಬೆಂಕಿ ಒಲೆಯು ಹಚ್ಚಿ
ಹೋಳಿ ಊಟವು ಸವಿದು
ಕೊರಳಲಿ ಸಕ್ಕರೆ ಹಾರ ಮೆರಗು //
ಹಿರಿಯರು-ಕಿರಿಯರು
ಒಬ್ಬರಿಗೊಬ್ಬರು ಬಣ್ಣವು ಹಚ್ಚುತ್ತ
ಧರ್ಮ ಜಾತಿ ಭೇದ ಮರೆತು
ಭಾವೈಕ್ಯತೆಯ ನಾಡು ನಮ್ಮದು //
ಪುಷ್ಪಾವತಿ ಸ ಶಿ, ಆಳಂದ
ಹೋಳಿ ಹಬ್ಬ
ಹೊಯ್ಕೋಳ್ಳೋಕೆ
ಒಂದ್ ಹಬ್ಬ
ಬಾಯಿಬಡ್ಕೋಳ್ಳಕೆ
ಒಂದ್ ಹಬ್ಬ
ಮನುಷ್ಯನ
ಕ್ಲೇಷ, ಕಾಮ ಗಳನು
ದಹಿಸಲ್ ಒಂದ್ ಹಬ್ಬ
ಬಣ್ಣದ ಓಕುಳಿ ಎರಚಿ
ಜೋರಾಗಿ ಕಿರುಚಿ
ಹೊಯ್ಕೊಳ್ತಾ ಇದ್ದರೆ
ಕಣ್ಣಿಗೆ ದೊಡ್ಡ್ ಹಬ್ಬ
ಆದೇ ಹೋಳಿ ಹಬ್ಬ!
ಜೋರಾಗ್ ಅರಚಿ
ಮೈಯೆಲ್ಲಾ ಬಣ್ಣದ್
ಒಕ್ಲ್ಯಾಗ್ ಅದ್ದಿ
ಮುಖವೆಲ್ಲ ರಕ್ಕಸನoಗಾಗಿ
ಭಾಂಗ್ ನಶೆ ನೇರ್ಸಿ
ಉರಿಯೋ ಬಿಸ್ಲಾಗ್
ಕುಣಿದ್ ಕುಪ್ಪಳ್ಸಿ
ಮಾಡ್ತಾವ್ರೆ ಹೋಳಿ ಹಬ್ಬ!
ಬನ್ರೀ,ಎಲ್ಲಾ ಬಣ್ಣ ತನ್ರೀ
ಮೈಕೈ ಮೂತಿಗೆಲ್ಲ ಬಳ್ಕೊಂಡ್
ಹೋಳಿ ಹಬ್ಬವ ಆಚರಸ್ರಿ
ಇಲ್ಲ ಅಂದ್ರೆ ಮುಂದಿನ ವರ್ಸ್ದ್
ತನ್ಕ ಕಾಯ್ರಿ
ಹ್ಯಾಪಿ ಹೋಳಿ!
ಎಲ್ರಿಗೂ!
ಡಾ. ಜಯಾನಂದ. ಧನವಂತ
ಬಣ್ಣಗಳ ಓಕಳಿ ಹಬ್ಬ.
ಬಂತಪ್ಪ ಬಂತು ಹೋಳಿ ಹಬ್ಬ
ನಾಡೊಳು ಆಚರಿಸುವ ಕಾಮನ ಹಬ್ಬ
ವಸಂತ ಮಾಸದ ಸಂಭ್ರಮ ಹಬ್ಬ
ವರ್ಷ ಪುನಶ್ಚೇತನದ ಹೊಸ ಹಬ್ಬ
ಕಾಮನ ಪ್ರತಿಮೆ ಪೂಜಿಸುವ ಹಬ್ಬ
ಊರ ತುಂಬೆಲ್ಲ ಮೆರವಣಿಗೆ ಹಬ್ಬ.
ಕಳವುಮಾಡಿ ಕಟ್ಟಿಗೆ ಸಂಗ್ರಹಿಸುವ ಹಬ್ಬ
ಲಬ್ ಲಬ್ ಲಬ್ಬೋ ಹೊಯ್ಕೊಳೊ ಹಬ್ಬ
ಹಲಗೆ ಬಡಿದು, ಕೇಕೆ ಹಾಕುವ ಹಬ್ಬ
ಸಿಕ್ಕವರಲ್ಲಿ ಹಣ ಪಡೆದು ಬಣ್ಣ ತರುವ ಹಬ್ಬ.
ಓಣಿ ತುಂಬೆಲ್ಲ ಓಕಳಿ ಆಡುವ ಹಬ್ಬ
ಸಿಕ್ಕವರಿಗೆ ಬಣ್ಣ ಬಳಿದು ರಂಜಿಸುವ ಹಬ್ಬ
ಭಿನ್ನತೆ ಮರೆತು ಸೇರಿ ಕುಣಿದಾಡುವ ಹಬ್ಬ
ರಂಗು ರಂಗಿನ ಓಕಳಿ, ನೀರೆರೆಚುವ ಹಬ್ಬ.
ಕಾಮಣ್ಣನ ಪೂಜಿಸಿ ಸುಡುವ ಹಬ್ಬ
ಕಿಚ್ಚಿನಿಂದ ಹೊಲೆ ಹಚ್ಚುವ ಹಬ್ಬ
ಕಾಮನ ಬೂದಿ ಹೊಲಕ್ಕೆ ಹಾಕುವ ಹಬ್ವ
ರೋಗರುಜುನಿ ದೂರಾಗಲೆನ್ನುವ ಹಬ್ಬ.
ಬಂತಪ್ಪ ಬಂತು ಹೋಳಿ ಹಬ್ಬ
ನಾಡೊಳು ಆಚರಿಸುವ ಕಾಮನ ಹಬ್ಬ
ಸಂತೋಷ್ ಬಿದರಗಡ್ಡೆ
ಶಿಕ್ಷಕ, ಸಾಹಿತಿಗಳು
ವರ್ಣರಂಜಿತ ಓಕುಳಿಯಾಟ
ಓಣಿಓಣಿಯಲ್ಲೆಲ್ಲ ಬಣ್ಣಗಳ ರಂಗಿನಾಟ
ಹಿರಿ-ಕಿರಿಯರೆಂಬ ಬೇಧ ಭಾವರಹಿತ
ಬಣ್ಣದೊಳು ಮಿಂದೇಳುತ ಒಂದಾಗಿ
ಕುಣಿದು ಕುಪ್ಪಳಿಸೋ ಓಕುಳಿಯಾಟ//
ಚೈತ್ರ ವಸಂತಮಾಸ ಸಂಭ್ರಮಕೆ
ವರ್ಣಗಳ ಬಾನಂಗಳದಿ ಚಿಮ್ಮುತ
ಸಂತಸ ಸಡಗರದಿ ಬಣ್ಣಗಳೆರಚಾಡಿ
ಸಂಭ್ರಮಿಸಿ ನಲಿಯೋಣ ಬನ್ನಿ ಎಲ್ಲ
ಶ್ರೀಮತಿ ಗಿರಿಜಾ ಹಿರೇಮಠ