ಫೋಟೋ; ಹಲ್ಲೆಗೊಳಗಾದ ಶರಣಮ್ಮ ಬಂದಾಳ ಹಾಗೂ ಅವರ ಮಗ
ಸಿಂದಗಿ: ಮನೆಯ ಜಾಗಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಕೆಲವು ಮಹಿಳೆಯರೇ ಹಿಗ್ಗಾ ಮುಗ್ಗಿ ಎಳೆದಾಡಿ ಥಳಿಸಿ ಹಲ್ಲೆ ಮಾಡಿದ ಘಟನೆ ತಾಲ್ಲೂಕಿನ ಗಣಿಹಾರ ಗ್ರಾಮದಲ್ಲಿ ನಡೆದಿದೆ.
ಗಣಿಹಾರ ಗ್ರಾಮದ ಶರಣಮ್ಮ ಬಂದಾಳ ಎಂಬ ಮಹಿಳೆಯ ಮೇಲೆ ಮೂವರು ಸವರ್ಣೀಯ ಮಹಿಳೆಯರು ಎಳೆದಾಡಿ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ ಇದರ ಬಗ್ಗೆ ಹಲ್ಲೆಗೊಳಗಾದ ಮಹಿಳೆಯ ರಕ್ಷಣೆಗೆ ಗ್ರಾಮದ ಬೀಟ್ ಪೊಲೀಸರು ಹಾಗೂ ಪೊಲೀಸ ಇಲಾಖೆ ಬಂದಿಲ್ಲ ಎನ್ನುವುದು ನೊಂದ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾಳೆ. ನಂತರ ಗ್ರಾಮದ ಐವರ ಮೇಲೆ ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
ಹೇಳಿಕೆ: ನಾನೊಬ್ಬಳು ಮಾದರ ದಲಿತ ಮಹಿಳೆ ನಾನು ಸರಕಾರಿ ಗೌಂಠಾಣಿ ಜಮೀನಿನ ಸರ್ವೆ ನಂ; 258ರ ಜಾಗೆಯಲ್ಲಿ ವಾಸವಾಗಿದ್ದು ಇದರ ಬಗ್ಗೆ ರಾಂಪೂರ ಗ್ರಾಪಂ ಸಭೆಯಲ್ಲಿ ಠರಾವು ಮಾಡಿಸಿ ಎಂದು ಪಿಡಿಓಗೆ ಅರ್ಜಿ ಸಲ್ಲಿಸಿದ್ದೇನೆ ನಂತರ ತಾಪಂ ಕಛೇರಿಗೆ, ಬಿಇಓ ಆಫೀಸಿಗೆ, ಡಿಸಿ, ಎಸ್ಸಿ, ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದ್ದೇನೆ ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ. ಆದಾಗ್ಯೂ ನಿತ್ಯ ಊರಿನ ಮಹಿಳೆಯರಿಂದ ನಿಂದನೆಗಳು ತಪ್ಪಿಲ್ಲ. ಅಲ್ಲದೆ ಮನೆ ಜಾಗಕ್ಕಾಗಿ ಹಿಗ್ಗಾಮುಗ್ಗಿ ಜಗ್ಯಾಡಿ ಒದ್ದು ನನ್ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನು ಸಿಂದಗಿ ಪೊಲೀಸ ಠಾಣೆಗೆ ದೂರು ನೀಡಲು ಕೂಡ ಬಂದಿದ್ದೇನೆ. ನನ್ನ ಮೇಲೆ ಹಲ್ಲೆಗೈದಿರುವ ಬಗ್ಗೆ ದೂರು ನೀಡಲು ಹೋದರೆ ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ಹಾಗಿದ್ದರೆ ದಲಿತ ಮಹಿಳೆಗೆ ನ್ಯಾಯ ಇಲ್ಲವೆ ಇದರ ಬಗ್ಗೆ ಬೆಂಗಳೂರ ಆಯುಕ್ತರಿಗೆ ದೂರು ಸಲ್ಲಿಸಿದ್ದೇನೆ ಇದಕ್ಕೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ.