spot_img
spot_img

ಪಂಚಮಸಾಲಿ ಮೀಸಲಾತಿ ನೀಡದಿದ್ದರೆ ಮರಣ ಶಾಸನ ಬರೆಯಬೇಕಾಗುತ್ತದೆ

Must Read

- Advertisement -

ಸಿಂದಗಿ: ಪಂಚಮಸಾಲಿ ಸಮಾಜಕ್ಕೆ 2ಎ ಮಿಸಲಾತಿಗೆ ಆಗ್ರಹಿಸಿ ತಾಲೂಕಾ ಪಂಚಮಸಾಲಿ ಸಮಾಜದಿಂದ ತಹಶೀಲ್ದಾರ ಕಾರ್ಯಾಲಯದ ಶಿರಸ್ತೆದಾರ ಶ್ರೀಮತಿ ಲಮಾಣಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಚಂದ್ರಶೇಖರ ನಾಗರ ಬೆಟ್ಟ, ಯುವ ಸಂಘಟನೆಯ ತಾಲೂಕಾಧ್ಯಕ್ಷ ಯುವರಾಜ ಪಾಟೀಲ ಮಾತನಾಡಿ, ಕಳೆದ ದಿನಗಳಲ್ಲಿ ಕೂಡಲ ಸಂಗಮದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ 10 ಲಕ್ಷಕ್ಕೂ ಅಧಿಕ ಜನರು ಸುಮಾರು 750 ಕೀ.ಮೀ ಪಾದಯಾತ್ರೆಯ ಮೂಲಕ ನಡೆಸಿ ಅರಮನೆ ಮೈದಾನದಲ್ಲಿ 23 ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿ ಕೊನೆಯ ದಿನದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ನಡೆಸಿದ ನಂತರ ಕೆಲ ಶರತ್ತುಗಳನ್ನು ವಿಧಿಸಿ ನಿಮಗೆ ಮಿಸಲಾತಿ ಒದಗಿಸಿಕೊಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಶ್ವಾಸನೆ ನೀಡಿ ಧರಣಿಯನ್ನು ಹಿಂಡೆಯಲು ವಿನಂತಿಸಿ ಸೆ.15 ಗಡುವು ನೀಡಿದ್ದರು.

ಇನ್ನೂವರೆಗೂ ಯಾವುದೇ ಉತ್ತರ ದೊರಕಿಲ್ಲ. ಈ ಬಾರಿ ಲಿಂಗಾಯತ ಒಳಪಂಗಡಗಳು ಸೇರಿದಂತೆ ಆಂದ್ರಪ್ರದೇಶ. ಮಹಾರಾಷ್ಟ್ರ ರಾಜ್ಯಗಳಿಂದ ಸುಮಾರು 30ರಿಂದದ 40 ಜನಸಂಖ್ಯೆಯನ್ನು ಸೇರಿಸಿ ವಿಧಾನಸೌಧ ಮುತ್ತಿಗೆ ಹಾಕಿ ಮಿಸಲಾತಿ ತೆಗೆದುಕೊಂಡೆ ಮರಳುವುದು ಇಲ್ಲದಿದ್ದರೆ ಮರಣಶಾಸನ ಬರೆಯಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

- Advertisement -

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಆನಂದ ಶಾಬಾದಿ, ಶ್ರೀಶೈಲ ಯಳಮೇಲಿ, ಮಲ್ಲಿಕಾರ್ಜುನ ಅಲ್ಲಾಪುರ, ರವಿ ದೇಸಾಯಿ, ಸುಭಾಷ ಹತ್ತರಕಿಹಾಳ, ಶಿವಶರಣಪ್ಪ ಮಾಣಸೂಣಗಿ, ಚೇತನ ರಾಂಪೂರ, ಶ್ರೀಶೈಲ ಕೋರಳ್ಳಿ, ಕಲ್ಲನಗೌಡ ಬಗಲಿ, ಎಂ.ಎಂ.ಪಾಟೀಲ, ಸಂಗನಗೌಡ ಪಾಟೀಲ, ಮಲ್ಲಪ್ಪ ಮರಬಿ ಸೇರಿದಂತೆ ಅನೇಕರಿದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group