spot_img
spot_img

“ಕುಟುಂಬ ಸಹಿತ ನೋಡುವಂಥ ಸಿನಿಮಾಗಳು ಹೆಚ್ಚು ತಯಾರಾಗಬೇಕು”- ಉಮೇಶ್ ವಿ.ಬಡಿಗೇರ (ಸಿನಿಮಾ ನಿರ್ದೇಶಕರು)

Must Read

- Advertisement -

ಸವದತ್ತಿ: ಸಿನಿಮಾ ಮತ್ತು ಸಾಹಿತ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸಾಹಿತ್ಯದ ಹಿನ್ನೆಲೆಯುಳ್ಳ ಸಿನಿಮಾಗಳು ದೀರ್ಘಕಾಲ ಜನರ ಮನಸ್ಸನ್ನು ಆವರಿಸಿಕೊಂಡಿವೆ. ಆದರೆ ಪ್ರಸ್ತುತ ದಿನಗಳಲ್ಲಿ ನಾವು ಸಿನಿಮಾ ನೋಡುವ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕಾಗಿದೆ ಎಂದು ರಾಜ್ಯ ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಉಮೇಶ ಬಡಿಗೇರ ನುಡಿದರು.

ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ ಏರ್ಪಡಿಸಿದ ‘ಸಿನಿಮಾ ಮತ್ತು ಸಾಹಿತ್ಯ’ ರಾಷ್ಟ್ರೀಯ ವೆಬಿನಾರ್ ನಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ನಾವು ನೋಡುವ ಉತ್ತಮ ಸಿನಿಮಾಗಳು ಸಾಕಷ್ಟಿವೆ. ಆದರೆ ಸಿನಿಮಾ ನೋಡುವ ವ್ಯಾಖ್ಯಾನವೇ ಬದಲಾಗಿ ಉತ್ತಮ ಸಿನಿಮಾಗಳು ನೋಡುವ ಅವಕಾಶಗಳು ಕಡಿಮೆಯಾಗಿವೆ. ವ್ಯಾಪಾರೀಕರಣಗೊಂಡ ಸಿನಿಮಾ ಕ್ಷೇತ್ರವು ನಾಯಕ ಕೇಂದ್ರಿತವೆಂಬ ಧೋರಣೆಯಲ್ಲಿ ನಮ್ಮ ಅಭಿರುಚಿಯನ್ನು ಬದಲಿಸಿದೆ ಎನ್ನಬಹುದು. ಅದಕ್ಕಾಗಿ ನಾವು ಉತ್ತಮ ಸಿನಿಮಾಗಳನ್ನು ನೋಡುವ ಮತ್ತು ನಮ್ಮ ಮಕ್ಕಳಿಗೆ ತೋರಿಸುವ ಬದ್ಧತೆಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದರು.

- Advertisement -

ಸಿನಿಮಾ ಬಹು ಪ್ರಭಾವಿ ಸೃಜನಶೀಲ ಮಾಧ್ಯಮವಾಗಿದೆ. ಬಂಗಾರದ ಮನುಷ್ಯ ಸಿನಿಮಾ ನೋಡಿದ ಅನೇಕರು ಕೃಷಿ ಕಡೆಗೆ ಆಕರ್ಷಿತರಾದರು. ಮಯೂರದಂತಹ ಸಿನಿಮಾ ಬಂದ ಮೇಲೆ ಚಾರಿತ್ರಿಕ ಪಾತ್ರವೊಂದು ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿಯಿತು. ಮಯೂರ ಸಾಹಿತ್ಯ ಕೃತಿಯು ಒಬ್ಬ ರದ್ದಿ ಆಯುವವನ ಗಂಟಿನಲ್ಲಿ ಸಿಕ್ಕಿದ ನಂತರ ಸಿನಿಮಾ ಆಗಿ ರೂಪುಗೊಂಡಿತು ಎಂದು ಗತಕಾಲದ ಚಿತ್ರಣವನ್ನು ನೆನಪಿಸಿದರು.

ಸಿನಿಮಾ ಜನರ ಮನಸ್ಸನ್ನು ಹಾಳುಮಾಡದೆ, ದಾರಿ ತಪ್ಪುವ ಜನರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುವಂತಿರಬೇಕು. ಕುಟುಂಬ ಸಹಿತ ನೋಡುವಂತಹ ಸಿನಿಮಾಗಳು ತಯಾರಾಗಬೇಕು. ನೋಡುಗರನ್ನು ವಿವೇಕವಂತರನ್ನಾಗಿ ಮಾಡಬೇಕಾಗಿದೆ ಎಂದು ನುಡಿದರು. ಸಂವಾದದಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎನ್.ಆರ್.ಸವತೀಕರ ವಹಿಸಿದ್ದರು. ಸೌಮ್ಯಾ ಪರದೇಶಿ ಪ್ರಾರ್ಥಿಸಿದರು, ಪ್ರೊ. ಕೆ. ರಾಮರೆಡ್ಡಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು, ಡಾ.ಎ.ಎಫ್.ಬದಾಮಿ ವಂದಿಸಿದರು, ಪ್ರೊ. ಗೌರಿ ಅಕ್ಕಿ ಕಾರ್ಯಕ್ರಮ ನಿರೂಪಿಸಿದರು.

- Advertisement -

ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ಸಿನಿಮಾ, ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು, ಆಸಕ್ತರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group