ಹಣಕಾಸು ವ್ಯವಹಾರ: ತುರ್ತು ಚಿಕಿತ್ಸಾ ಘಟಕಕ್ಕೆ ನುಗ್ಗಿ ಹಲ್ಲೆ

Must Read

ಬೀದರ – ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಅವರ ಮಕ್ಕಳ ಮೇಲೆ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿದ್ದಾಗಲೆ ದಾಳಿ ಮಾಡಿ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ ಘಟನೆ ಬೀದರನ ಬ್ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ತುರ್ತು ಚಿಕಿತ್ಸಾ ಘಟಕದಲ್ಲಿಯೇ ನಡೆದ ಈ ಮಾರಾಮಾರಿಯಲ್ಲಿ ಮಾಜಿ ಜಿ ಪಂ ಅಧ್ಯಕ್ಷ ಕಾಂಗ್ರಸ್ ಮುಖಂಡ ಫಿರೋಜ್ ಖಾನ್ ಹಾಗೂ ಅವರ ಮಕ್ಕಳಾದ ರೌಫ್, ಆಫಸರ್ ಖಾನ್, ಅರಬಾಜ್ ಖಾನ್, ಅಜ್ಜು ಅವರ ಮೇಲೆ ಖಾರದ ಪುಡೊ ಎರಚಿ ದಾಳಿ ನಡೆಸಿ ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಹ್ಮದ್ ರೌಫ್ ನನ್ನು ಹೈದರಾಬಾದ್ ಆಸ್ಪತ್ರೆಗೆ ಸೇರಿಸಲಾಗಿದೆ.

ಪ್ರಕರಣ ಕುರಿತಂತೆ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಸೆ. ೩೦೭, ೩೫೩ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ವರ್ಷ ಕಾಂಗ್ರೆಸ್ ಮುಖಂಡನ ಪುತ್ರ ಹಾಗೂ ರೌಫ್ ಮಧ್ಯೆ ಹಣಕಾಸು ವ್ಯವಹಾರ ಸಂಬಂಧಿಸಿದಂತೆ ಮನಿಯಾರ ತಾಲಿಮ್ ನಲ್ಲಿ ಗಲಾಟೆ ನಡೆದಿತ್ತು. ಅದನ್ನೇ ಮನಸಿನಲ್ಲಿಟ್ಟುಕೊಂಡಿದ್ದ ಕೈ ಮುಖಂಡನ ಮಕ್ಕಳು ರೌಫ್ ಆಸ್ಪತ್ರೆಯಲ್ಲಿದ್ದಾಗ ತುರ್ತು ಚಿಕಿತ್ಸಾ ಘಟಕಕ್ಕೆ ನುಗ್ಗಿ ಕಣ್ಣಿಗೆ ಖಾರದ ಪುಡಿ ಎರಚಿ, ಆಸ್ಪತ್ರೆಯ ಸಲಕರಣೆಗಳಿಂದ ಹೊಡೆದು ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ರೌಫ್ ನನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group