ಜನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ

Must Read

ಬೆಳಗಾವಿ – ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಪೃಥ್ವಿ ಫೌಂಡೇಶನ್ ವತಿಯಿಂದ ಜನಪದ ಶ್ರೀ ಪ್ರಶಸ್ತಿ ಪ್ರದಾನ ಅಮಾರಂಭ ನಡೆಯಿತು.

ಅತಿಥಿಗಳಾಗಿ ಆಗಮಿಸಿದ ವಿಶ್ರಾಂತ ಉಪನ್ಯಾಸಕರು ಹಾಗೂ ಸಾಹಿತಿಗಳಾದ ಡಾ. ಪಿ.ಜಿ. ಕೆಂಪಣ್ಣವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೃಥ್ವಿ ಫೌಂಡೇಶನ್ ಅಧ್ಯಕ್ಷರು ಹಾಗೂ ಸದಸ್ಯರು ಜಾನಪದ ಸಾಹಿತ್ಯ ಮತ್ತು ಕಲೆಗಳನ್ನು ಸಂರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಜಾನಪದ ನಮ್ಮ ಸಾಹಿತ್ಯದ ತಾಯಿಬೇರು, ಮುಂದಿನ ಪೀಳಿಗೆಗೆ ಜಾನಪದ ವಿಶಿಷ್ಟ ಪ್ರಕಾರಗಳನ್ನು ಪರಿಚಯ ಮಾಡಿಕೊಡುವ ಅಗತ್ಯವಿದೆ ಎಂದರು.

ಅಧ್ಯಕ್ಷರಾದ ಡಾ. ಹೇಮಾ ಸೊನೊಳ್ಳಿ, ಏಳು ವರ್ಷಗಳ ಕಾರ್ಯಕ್ರಮ ಪರಿಚಯಿಸುವುದರ ಜೊತೆಗೆ ಜಾನಪದ ಉಳಿದರೆ ನಮ್ಮ ಸಂಸ್ಕೃತಿ-ಸಂಪ್ರದಾಯ ಉಳಿಯುತ್ತದೆ ಎಂದು ನುಡಿದರು.

ಇದೇ ಸಮಾರಂಭದಲ್ಲಿ ಶ್ರೀಮತಿ ವಿದ್ಯಾ ಹುಂಡೇಕರ, ಶ್ರೀಮತಿ ಪ್ರೇಮಾ ಪಾನಶೆಟ್ಟಿ, ಇವರುಗಳಿಗೆ ಅನುಪಮ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆ ಮೇಲೆ ಶ್ರೀಮತಿ ಮಹಾದೇವಿ ಹಿರೇಮಠ, ಶ್ರೀಮತಿ ಶೈಲಜಾ ಹಿರೇಮಠ, ಶ್ರೀಮತಿ ಭುವನೇಶ್ವರ ಪೂಜಾರಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವು ಶ್ರೀಮತಿ ಜಯಶ್ರೀ ನಿರಾಕಾರಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಶ್ರೀಮತಿ ಶೈಲಜಾ ಹಿರೇಮಠ ಸ್ವಾಗತಿಸಿದರು, ಶ್ರೀಮತಿ ಭುವನೇಶ್ವರಿ ಪೂಜಾರಿ ವಂದಿಸಿದರೆ ಶ್ರೀಮತಿ ಆಶಾ ಯಮಕನಮರ್ಡಿ ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲಿನಿ ಚಿನಿವಾರ ಲಲಿತಾ ಪರ್ವತರಾವ, ಶಾಂತಾ ಹೊಂಡಾಯಿ, ಬಸವರಾಜ ಗಾರ್ಗಿ, ಬಸವರಾಜ ಮಠಪತಿ, ಶ್ರೀರಂಗ ಜೋಷಿ, ರಮೇಶ, ಎಂ.ವೈ ಮೆಣಸಿನಕಾಯಿ ಇತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Latest News

ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ವ್ಯಕ್ತಿ ದಾರುಣ ಸಾವು

ಬೀದರ - ಮಕರ ಸಂಕ್ರಾಂತಿ ನಿಮಿತ್ತ ಗಾಳಿಪಟ ಹಾರಿಸುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಯುವಕ ಸಂಜಿಕುಮಾರ ಎಂಬುವವರ ಕುತ್ತಿಗೆಗೆ ಗಾಳಿ ಪಟದ ಮಾಂಜಾ(ಚೀನಿ...

More Articles Like This

error: Content is protected !!
Join WhatsApp Group