ರಾಜ್ಯಕ್ಕೆ ಆಹಾರ ಸಂಸ್ಕರಣಾ ಘಟಕ: ಈರಣ್ಣ ಕಡಾಡಿ

Must Read

ಮೂಡಲಗಿ: ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ಕರ್ನಾಟಕ ಸೇರಿದಂತೆ ದೇಶಾದ್ಯಂತ ಆಹಾರ ಸಂಸ್ಕರಣಾ ಕ್ಷೇತ್ರದ ಸ್ಥಾಪನೆ/ ಉನ್ನತೀಕಣಕ್ಕೆ ಬೆಂಬಲ ನೀಡಿದ್ದು, 2020-21 ರಿಂದ 2024-25 ವರೆಗಿನ 5 ವರ್ಷಗಳಲ್ಲಿ ಕ್ರೆಡಿಟ್ ಲಿಂಕ್ ಸಬ್ಸಿಡಿ ಮೂಲಕ ಕರ್ನಾಟಕಕ್ಕೆ ಒಟ್ಟು 11,910 ಘಟಕಗಳನ್ನು ಹಂಚಿಕೆ ಮಾಡಲಾಗಿದ್ದು, ರಾಜ್ಯಕ್ಕೆ ಇದುವರೆಗೆ 49.93 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ಹೇಳಿದರು.

ಶುಕ್ರವಾರ ಫೆ-11 ರಂದು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಜ್ಯದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೆ ಸರ್ಕಾರದ ನೆರವು ಕುರಿತು ಸಂಸದ ಈರಣ್ಣ ಕಡಾಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಇದುವರೆಗೆ ಸಚಿವಾಲಯವು ಕರ್ನಾಟಕದಲ್ಲಿ 2 ಮೆಗಾ ಫುಡ್ ಪಾರ್ಕ್ ಯೋಜನೆಗಳು, 16 ಕೋಲ್ಡ್ ಚೈನ್ ಯೋಜನೆಗಳು, 4 ಕೃಷಿ ಸಂಸ್ಕರಣಾ ಕ್ಲಸ್ಟರ್‍ಗಳು, 18 ಆಹಾರ ಸಂಸ್ಕರಣಾ ಘಟಕಗಳು, 3 ಬ್ಯಾಕ್‍ವರ್ಡ ಮತ್ತು ಪಾರ್ವಡ್ ಲಿಂಕ್ ಯೋಜನೆಗಳ ರಚನೆ ಮತ್ತು 9 ಆಹಾರ ಪರೀಕ್ಷಾ ಪ್ರಯೋಗಾಲಯ ಯೋಜನೆಗಳನ್ನು ಅನುಗುಣವಾದ ಘಟಕದ ಅಡಿಯಲ್ಲಿ ಸಹಾಯಕ್ಕಾಗಿ ಅನುಮೋದಿಸಲಾಗಿದೆ ಎಂದು ಉತ್ತರಿಸಿದ್ದಾರೆ ಎಂದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group