ಮೂಡಲಗಿ: ಭಾರತ ದೇಶ ಕಂಡ ಅತ್ಯಂತ ಶ್ರೇಷ್ಠ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನುಮದಿನದ ಅಂಗವಾಗಿ ಜಗತ್ಪ್ರಸಿದ್ಧ ನಾಯಕನಿಗೆ ವಿಶೇಷ ಗೌರವ ಅರ್ಪಿಸುವ ಪ್ರಯುಕ್ತ ದೇಶಾದ್ಯಂತ ಭಾರತೀಯ ಜನತಾ ಪಕ್ಷದ ವತಿಯಿಂದ “ಸೇವಾ ಪಾಕ್ಷಿಕ” ಎಂಬ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿವಿಧ ಕ್ಷೇತ್ರಗಳಲ್ಲಿ ವಿವಿಧ ರೀತಿಯ ಸೇವೆಯನ್ನು ಒದಗಿಸುವ ಸಂಕಲ್ಪ ಮಾಡಲಾಗಿದೆ. ಆದ್ದರಿಂದ ಅರಭಾವಿ ಶಾಸಕ ಹಾಗೂ ಕೆ.ಎಮ್.ಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನಲ್ಲಿ, ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 02 ರವರೆಗೆ ನಡೆಯುವ ಈ ಅಭಿಯಾನದ ನಿಮಿತ್ತವಾಗಿ ಬಿಜೆಪಿ ಅರಭಾವಿ ಮಂಡಲದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮ ವಿವರ ಈ ಕೆಳಗಿನಂತಿದೆ.
ಸೆ.17 ರಂದು 10 ಗಂಟೆಗೆ ಸಮುದಾಯ ಆರೋಗ್ಯಕೇಂದ್ರ ಮೂಡಲಗಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಕೋವಿಡ್ ಲಸಿಕಾ ಅಭಿಯಾನ ಹಾಗೂ ರಕ್ತದಾನ ಶಿಬಿರ, ದಿ 20ರಂದು 10.30ಕ್ಕೆ ಕೌಜಲಗಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಕುರಿತು ವಿಚಾರ ಸಂಕೀರ್ಣ ಬೌದ್ಧಿಕ ಸಮಾವೇಶ ಹಾಗೂ ಪತ್ರ ಅಭಿಯಾನ.
ದಿ.22ರಂದು 10ಗಂಟೆಗೆ ಅವರಾದಿಯಲ್ಲಿ ಅರಳಿಮರ ನೆಡುವ ಅಭಿಯಾನ, ದಿ 25 ರಂದು 10 ಗಂಟೆಗೆ ಎನ್.ಎಸ್.ಎಫ್.ಗೋಕಾಕ ನಲ್ಲಿ ಪಂ.ದೀನದಯಾಳ ಉಪಾಧ್ಯಾಯರವರ ಜನ್ಮದಿನ ನಿಮಿತ್ತ ಕಮಲೋತ್ಸವ ಕಾರ್ಯಕ್ರಮ ಹಾಗೂ ಸಹಭೋಜನ, ದಿ.28ರಂದು 10ಗಂಟೆಗೆ ಯಾದವಾಡ ಗ್ರಾಮದ ಶ್ರೀ ಹೊನ್ನಮ್ಮ ದೇವಸ್ಥಾನದಲ್ಲಿ ಅಂಗನವಾಡಿ ಸೇವಾ ದಿವಸ, ದಿ.29ರಂದು 10ಗಂಟೆಗೆ ಕುಲಗೋಡ ಗ್ರಾಮದ ಶ್ರೀ ಬಲಭೀಮ ದೇವಸ್ಥಾನದಲ್ಲಿ ಅಮೃತ ಸರೋವರ ಫಲಾನುಭವಿಗಳ ಸಭೆ ಹಾಗೂ ನೋಂದಣಿ ಅಭಿಯಾನ, ಇ-ಶ್ರಮ, ಆಯುಷ್ಯಮಾನ ಕಾರ್ಡ, ದಿ.30ರಂದು 10ಗಂಟೆಗೆ ಕೆಮ್ಮನಕೋಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಟಿ. ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ ವಿತರಣೆ, ದಿ.30 ರಂದು 10ಗಂಟೆಗೆ ಸಮುದಾಯ ಆರೋಗ್ಯ ಕೇಂದ್ರ ಮೂಡಲಗಿಯಲ್ಲಿ ಕ್ಷಯರೋಗ ನಿರ್ಮೂಲನಾ ಅಭಿಯಾನ, ದಿ.ಅ.2ರಂದು 10ಗಂಟೆಗೆ ಹಳ್ಳೂರಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಖಾದಿ ಮಳಿಗೆಯ ಕಾರ್ಯಕ್ರಮ ಆಯೋಜಿಸಲಾಗಿದೆ. ಎಂದು ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.