ಮೂಡಲಗಿ- ಜಂಗಮರ ಜೋಳಿಗೆ ಕಾಯಕಕ್ಕೆ ಹೊಸತನ ನೀಡಿದ ಮೂಲಪುರುಷ ರೇಣುಕಾಚಾರ್ಯರು.ಅಗಸ್ತ್ಯ ಮುನಿಗಳ ಶಿವಸಿದ್ದಾಂತವನ್ನು ಮಾನವಕುಲಕ್ಕೆ ಬೋಧನೆ ಮಾಡಿದರು ಮತ್ತು ವೀರಶೈವ ಧರ್ಮದ ಉದ್ಧಾರಕ್ಕಾಗಿ ಶ್ರಮಿಸಿದವರು ಎಂದು ವೇದಮೂರ್ತಿ ಶಂಕ್ರಯ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ಶ್ರೀ ದಾನಮ್ಮದೇವಿ ದೇವಸ್ಥಾನದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿದರು.
ದ್ವೇಷ ಸಾಧಿಸುವವನು ಜಂಗಮನಲ್ಲ ಕರುಣಾಮಯಿ, ಪರೋಪಕಾರಿ ಮತ್ತು ಸಮಾಜಮುಖಿ ಕೆಲಸ ಮಾಡುವವನೇ ನಿಜವಾದ ಜಂಗಮ ಎಂದು ಅವರು ಹೇಳಿದರು.
ಜಂಗಮ ಸಮಾಜದ ಹಿರಿಯರು ಚನ್ನಮಲ್ಲಯ್ಯ ನಿರ್ವಾಣಿ, ಮಹಾಲಿಂಗಯ್ಯ ಹಿರೇಮಠ, ಚಂದ್ರಯ್ಯನಿರ್ವಾಣಿ, ಚೇತನ ನಿಶಾನಿಮಠ, ಸೋಮಯ್ಯ ಹಿರೇಮಠ, ಕಲ್ಮೇಶ ಗೋಕಾಕ,ರಾಮಣ್ಣ ಹಂದಿಗುಂದ, ಈರಣ್ಣ ಕೊಣ್ಣೂರ, ಡಾ.ಬಿ.ಎಮ್.ಪಾಲಭಾವಿ, ಶಿವಬಸು ಹಂದಿಗುಂದ, ಆದಮ್ ತಾಂಬೋಳಿ,ಈರಪ್ಪ ಬನ್ನೂರ,ಪ್ರಕಾಶ ಮಾದರ, ಬಸಯ್ಯ ಶಿ.ಮಠಪತಿ, ಶಿವಾನಂದ ಹಿರೇಮಠ,ಮಹೇಶ ಹಿರೇಮಠ,ಲಿಂಗಪ್ಪ ಗಾಡವಿ ಇನ್ನು ಅನೇಕರು ಭಾಗಿಯಾಗಿದ್ದರು.