ಶ್ವಾನಗಳಿಗೆ ಉಚಿತ ಲಸಿಕಾ ಅಭಿಯಾನ

Must Read

ಮೂಡಲಗಿ : ಮನೆಯಲ್ಲಿ ಸಾಕುವ ಪ್ರಾಣಿಗಳಿಂದಲೇ ಹಲವು ಸಲ ಕಡಿತಕ್ಕೆ ಒಳಗಾದ ಘಟನೆಗಳು ಸಾಕಷ್ಟು ಇವೆ. ಮುದ್ದು ಪ್ರಾಣಿಗಳನ್ನು ಸಾಕುವ ಜೊತೆಗೆ ಅವುಗಳ ಆರೋಗ್ಯದ ಕಡೆಗೆ ಗಮನ ಹರಿಸಿ ಅವುಗಳ ಕಡಿತದಿಂದ ನಾವು ಪ್ರಾಣಾಪಾಯದಿಂದ ಪಾರಾಗಲು ಸರಿಯಾದ ಸಮಯದಲ್ಲಿ ಹುಚ್ಚು ನಾಯಿ ರೋಗದ ಲಸಿಕೆ ಹಾಕಿಸಬೇಕು ಎಂದು ಪಾಲಿಕ್ಲಿನಿಕ ಉಪ ನಿರ್ದೇಶಕ ಡಾ ಅಶೋಕ ಕೊಳ್ಳ ಹೇಳಿದರು.

ಶುಕ್ರವಾರ ಪಶು ಆಸ್ಪತ್ರೆ ಹಾಗೂ ಪಾಲಿಕ್ಲಿನಿಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಕು ಪ್ರಾಣಿಗಳಿಗೆ ಉಚಿತ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಲಸಿಕೆ ಹಾಕಿ ಮಾತನಾಡಿದರು.

ಪಶು ಆಸ್ಪತ್ರೆಯ ಉಪ ನಿರ್ದೇಶಕ ಡಾ ಎಮ್ ಬಿ ವಿಭೂತಿ ಮಾತನಾಡಿ, ಶ್ವಾನಗಳು ಅತ್ಯಂತ ಪ್ರಾಮಾಣಿಕ ಪ್ರಾಣಿ ಇವುಗಳ ಆರೈಕೆ ಅಂದ್ರೆ ಸರಿಯಾದ ವಯಸ್ಸಿನಲ್ಲಿ ಇವುಗಳಿಗೆ ಚುಚ್ಚು ಮದ್ದು ಹಾಕಿಸುವದು ಇದರಿಂದ ಮಕ್ಕಳು ಸಹ ಯಾವುದೆ ಭಯ ಆತಂಕಇ ಲ್ಲದೆ ಇವುಗಳ ಜೊತೆಗೆ ಆಡಬಹುದು ಎಂದರು.

ಈ ಕಾರ್ಯಕ್ರಮದಲ್ಲಿ ನೂರಾರು ಶ್ವಾನಗಳಿಗೆ ಉಚಿತ ಲಸಿಕೆ ಹಾಕಲಾಯಿತು. ಈ ಸಂದರ್ಭದಲ್ಲಿ ಪಶುವೈದ್ಯರಾದ ಡಾ ಬಿ ಎನ್ ಗೌಡರ, ಡಾ ಎಮ್ ಜಿ ಕೌಜಲಗಿ, ಡಾ ವಿನೋದ ಕಡಪಟ್ಟಿ, ಪಶು ಪರಿವೀಕ್ಷಕ ಶಂಕರ ಶಾಬನ್ನವರ ಹಾಗೂ ದಲಿತ ಮುಖಂಡ ವಿಲಾಸ ಸಣ್ಣಕ್ಕಿ ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group