- Advertisement -
ಬೀದರ: ಗ್ರಾಮದ ಪಕ್ಕದಲ್ಲೆ ಇದ್ದ ಕೆರೆಗೆ ಬಟ್ಟೆ ತೊಳೆಯಲು ತೆರಳಿದ್ದ ಇಬ್ಬರು ಬಾಲಕಿಯರು ಬಟ್ಟೆ ತೊಳೆದ ಬಳಿಕ ಸ್ನಾನ ಮಾಡಲು ನೀರಿಗೆ ಇಳಿದಿದ್ದರಿಂದ ನೀರು ಪಾಲಾದ ದುರ್ಘಟನೆ ಬಸವಕಲ್ಯಾಣದ ಪುಲ್ದರ್ ವಾಡಿಯಲ್ಲಿ ನಡೆದಿದೆ.
ಸಕುಬಾಯಿ (16), ಚಾಂದನಿ (16) ಮೃತ ದುರ್ದೈವಿಗಳು. ಇವರು ಚಿಟ್ಟಾ (ಕೆ) ಪ್ರೌಢಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದರೆನ್ನಲಾಗಿದೆ.
ಇತ್ತೀಚೆಗೆ ಕೆರೆ ಹೂಳು ಎತ್ತಿದ ಪರಿಣಾಮ ಆಳ ಹೆಚ್ಚಾಗಿತ್ತು. ಈಜಲೆಂದು ನೀರಿಗೆ ಇಳಿದ ಸ್ನೇಹಿತೆಯರು ಆಳ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬಾಲಕಿಯರ ಸಾವಿಗೆ ಇಡೀ ಹಳ್ಳಿಯಲ್ಲಿ ಶೋಕದ ವಾತಾವರಣ ಉಂಟಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
- Advertisement -
ಮಂಠಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ