ಮೂಡಲಗಿ: ವಿಶ್ವಮಾನ್ಯ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಏ. 17 ರಂದು ಕಮಲ ಗುರ್ತಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಬಾರಿ ಅಂತರದಿಂದ ಗೆಲ್ಲಿಸಬೇಕೆಂದು ರಾಜ್ಯ ಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಮತದಾರರಲ್ಲಿ ಮನವಿ ಮಾಡಿದರು.
ಗುರುವಾರ (ಏ.15) ರಂದು ಮೂಡಲಗಿ ನಗರದ ಕರೆಮ್ಮಾ ವೃತ್ತದಿಂದ ಪ್ರಾರಂಭವಾದ ಪಾದಯಾತ್ರೆ, ಬಸವೇಶ್ವರ ವೃತ್ತ ಮೂಲಕ, ಗಾಂಧಿ ಚೌಕ, ಸಂಗಪ್ಪಣ್ಣ ಅಂಗಡಿ ವೃತ್ತದಿಂದ, ಕಲ್ಮೇಶ್ವರ ವೃತ್ತ ಮೂಲಕ ಸುಮಾರು ಎಲ್ಲಾ ವಾರ್ಡಗಳಲ್ಲಿ ಸಂಚರಿಸಿ ಪಾದಯಾತ್ರೆ ಮೂಲಕ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಪರ ಮತಯಾಚಿಸಿದ ಅವರು ದಿ. ಸುರೇಶ ಅಂಗಡಿ ಅವರು ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿ ಉತ್ತರ ಕರ್ನಾಟಕ ಭಾಗಕ್ಕೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದರು. ಅವರ ಅಕಾಲಿಕ ನಿಧನದಿಂದ ಈ ಉಪಚುನಾವಣೆ ಬಂದಿದ್ದು, ಅವರ ಪತ್ನಿ ಮಂಗಲಾ ಅಂಗಡಿ ಅವರನ್ನು ಆರಿಸಿ ಕಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ಮಂಡಲ ಅಧ್ಯಕ್ಷ ಶ್ರೀ ಮಹಾದೇವ ಶೆಕ್ಕಿ, ಬಿಜೆಪಿ ಪ್ರಮುಖರಾದ ಶ್ರೀ ಪ್ರಕಾಶ ಮಾದರ, ಶ್ರೀ ಹಣಮಂತ ಸತರಡ್ಡಿ, ಜಿಲ್ಲಾ ಬಿಜೆಪಿ ಮಾಜಿ ಕೋಶಾಧ್ಯಕ್ಷ ಪರಪ್ಪ ಗಿರೆಣ್ಣವರ, ಚೇತನ ನಿಶಾನಿಮಠ, ಈಶ್ವರ ಮುರಗೋಡ, ಜಗದೀಶ ತೇಲಿ, ಶಿವಭೋದರ ಬೆಳಗಲಿ, ಡಾ. ಬಿ.ಎಂ ಪಾಲಭಾಂವಿ, ಸತೀಶ ಲಂಕೆಪ್ಪನ್ನವರ, ಕೇದಾರಿ ಭಸ್ಮೆ, ಮಹಾಲಿಂಗ ವಂಟಗೂಡಿ, ಕುಮಾರ ಗಿರಡ್ಡಿ, ಈರಪ್ಪ ಡವಳೇಶ್ವರ, ಪಾಂಡು ಮಹೇಂದ್ರಕರ, ಶ್ರೀಕಾಂತ ಕೌಜಲಗಿ, ಬಸವರಾಜ ವಂಟಗೂಡೆ, ಹಣಮಂತ ಗೋಡಿಗೌಡರ ಮಹಾಂತೇಶ ಕುಡಚಿ ಸೇರಿದಂತೆ ಅನೇಕ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.