spot_img
spot_img

ಇಷ್ಟಾರ್ಥ ಸಿದ್ದಿ ಗಜಾನನ ದೇವಸ್ಥಾನ

Must Read

- Advertisement -

ಇಂದು ಅಂಗಾರಕ ಸಂಕಷ್ಟಿ. ಬೆಳಗಾವಿ ಸವದತ್ತಿ ಇತಿಹಾಸ ಕಾಲದಿಂದಲೂ ತನ್ನದೇ ಆದ ಖ್ಯಾತಿ ಹೊಂದಿದೆ. ಸುಗಂದವರ್ತಿ ಎಂದು ೧೨ ಹಳ್ಳಿಗಳ ಆಡಳಿತ ಕೇಂದ್ರವಾಗಿ ರಟ್ಟರ ಆಳ್ವಿಕೆಗೆ ಒಳಪಟ್ಟಿತ್ತು.ಈ ಕುರಿತಂತೆ “ಕಂಪಣ ಹನ್ನೆರಡರ ಮೊದಲ ಬಾಡ ರಾಜಧಾನಿ ಸುಗಂಧವರ್ತಿ”ಎಂದು ರಟ್ಟರ ಶಾಸನದಲ್ಲಿ ಉಲ್ಲೇಖವಿದೆ.ಕ್ರಿ,ಶ,೧೦೪೮ ರಿಂದ ೧೧೮೪ ರ ಅವಧಿ ಸವದತ್ತಿ ಸುಗಂಧವರ್ತಿ ಎಂದು ರಟ್ಟರ ರಾಜಧಾನಿಯಾಗಿತ್ತು.

ಇಲ್ಲಿ ಸುಪ್ರಸಿದ್ದ ಗಜಾನನ ದೇವಸ್ಥಾನ ಕಟ್ಟಿ ಓಣಿ ದೇಸಾಯಿ ಗಲ್ಲಿಯಲ್ಲಿದೆ, ಈ ದೇವಸ್ಥಾನವು ಬಹಳ ಪ್ರಸಿದ್ದಿಯಾಗಿದ್ದು ವೈಶಿಷ್ಟ್ಯಪೂರ್ಣವಾಗಿದೆ. ಸುಮಾರು ಇನ್ನೂರು ವರ್ಷಗಳ ಹಿಂದೆ ಈ ಸ್ಥಳದಲ್ಲಿ ಇದ್ದು ಉದ್ಭವ ಗಣಪತಿಯಾಗಿದ್ದು. ಕಟ್ಟಿ ಮನೆತನದವರು ಪೂಜಿಸುತ್ತ ಬಂದಿರುವರು. ಮೊದಲು ಇಲ್ಲಿ ತುಳಸಿ ಬನವಿತ್ತು. ತುಳಸಿ ಬನದಲ್ಲಿ ಈ ಉದ್ಭವ ಗಣಪತಿ ದರ್ಶನ, ಇಲ್ಲಿ ಹತ್ತಿರದಲ್ಲಿ ರಾಘವೇಂದ್ರ ಮಠವಿದ್ದು. ಅದರ ಅರ್ಚಕರ ಸ್ವಪ್ನದಲ್ಲಿ ಗಣೇಶನ ಇರುವಿಕೆಯ ಕುರಿತು ಕಂಡ ಕನಸನ್ನು ಅನುಸರಿಸಿ ತುಳಸಿ ಬನದಲ್ಲಿ ನೋಡಿದಾಗ ಈ ಉದ್ಭವ ಗಣಪತಿ ಕಂಡ ಆ ಮನೆತನದವರು ಅಲ್ಲಿ ಪ್ರತಿನಿತ್ಯವೂ ಪೂಜಾ ಕಾರ್ಯ ನೆರವೇರಿಸತೊಡಗಿದರು. ನಂತರ ಆ ಮನೆತನದವರು ತಮ್ಮ ಭಕ್ತಿಯ ಸಮರ್ಪಣೆಯ ಜೊತೆಗೆ ಕಷ್ಟ ಕಾಲದಲ್ಲಿ ಈ ಗಣಪತಿಯನ್ನು ನೆನೆದು ತಮ್ಮ ಕಷ್ಟ ಪರಿಹರಿಸೆನುತ ಬೇಡಿಕೊಳ್ಳಲು ತಮಗೆ ಒದಗಿದ ಕಷ್ಟಗಳು ಪರಿಹಾರವಾಗತೊಡಗುತ್ತ ಬರತೊಡಗಿದವು.

ಹೀಗೆ ಅಕ್ಕಪಕ್ಕದ ಜನರಿಗೆ ಈ ಗಣಪತಿಯ ಕುರಿತು ಇಷ್ಟಾರ್ಥಸಿದ್ದಿ ಎಂಬ ಸಂದೇಶ ಪ್ರಾಪ್ತವಾಗಿ ಅನೇಕರು ತಮ್ಮ ಭಕ್ತಿಯ ಕೋರಿಕೆಗಳನ್ನು ಬೇಡಿಕೊಂಡು ಅದರಿಂದ ಫಲವನ್ನು ಹೊಂದಿ ಗಣಪತಿಗೆ ಅಭಿಷೇಕ ವಿಶೇಷ ಪೂಜೆ ಮಾಡಿಸುತ್ತ ಬರತೊಡಗಿದರು. ಗಣಪತಿ ಇರುವ ಸ್ಥಳದಲ್ಲಿ ಕಾಲಕ್ರಮೇಣ ಪುಟ್ಟದಾದ ದೇವಾಲಯವನ್ನು ಅಂದಿನ ಹಿರಿಯರು ನಿರ್ಮಿಸಿಕೊಂಡರು. ೨೦೦೦ ರಲ್ಲಿ ಈ ಹಳೆಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ನೂತನ ದೇವಸ್ಥಾನ ಕಟ್ಟಲಾಯಿತು..ಈ ಗಣಪತಿ ಭಕ್ತರ ಹರಕೆಗಳನ್ನು ಈಡೇರಿಸುತ್ತಾ ತನ್ನದೆ ಆದ ಶಕ್ತಿಯಿಂದ ಭಕ್ತರ ಇಷ್ಟಾರ್ಥಗಳನ್ನು ಇಡೇರಿಸುವ ದೇವಸ್ಥಾನವಾಗಿ ಇಂದಿಗೂ ಜನಜನಿತವಾಗಿದೆ.

- Advertisement -

ಈ ದೇವಸ್ಥಾನದಲ್ಲಿ ಮಂಗಳವಾರದಂದು ಸಂಕಷ್ಟಿ ಚತುರ್ಥಿ ಜರುಗಿಸಲಾಯಿತು. ಈ ನಿಮಿತ್ತವಾಗಿ ಗಜಾನನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಮುಂಜಾನೆ ಪಂಚಾಮೃತ ಅಭಿಷೇಕ ಮೂರ್ತಿಗೆ ಪುಷ್ಪಾಲಂಕಾರ ಜೊತೆಗೆ ಬೆಣ್ಣೆ ಅಲಂಕಾರ ಪೂಜೆ. ನಂತರ ಮಹಾ ಮಂಗಳಾರತಿ ದೇವಸ್ಥಾನದ ಅರ್ಚಕರಾದ ಧಿರೇಂದ್ರ ಕಾನಡೆ ದಂಪತಿಗಳು ಅವರ ಮಗನಾದ ಸಂಜು ಕಾನಡೆ.ಯವರಿಂದ ಜರುಗಿತು.
ಈ ಗಣಪತಿಗೆ ಸಾಂದರ್ಭಿಕವಾಗಿ ವಿಶೇಷ ಪೂಜೆಗಳು ಅಭಿಷೇಕ.ಸಂಕಷ್ಟ ಹರ ಚತುರ್ಥಿಯ ದಿನದಂದು ಅಭಿಷೇಕ ಪೂಜೆ.ಹೀಗೆ ಜರುಗುತ್ತಿವೆ ಎಂದು ಗಣಪತಿ ದೇವಸ್ಥಾನದ ಮಹತ್ವವನ್ನು ತಿಳಿಸಿದರು.

ವೈ.ಬಿ.ಕಡಕೋಳ
ಶಿಕ್ಷಕರು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ತಲೆಬಾಗು ಗುರುಗಳಿಗೆ ಗಣ್ಯರಿಗೆ ಮಾನ್ಯರಿಗೆ ಶಿರಬಾಗು ಹಿರಿಯರಿಗೆ ಹೆತ್ತವರಿಗೆ ಶರಣಾಗು ಸಂಪೂರ್ಣ ಮದವಳಿದು ದೈವಕ್ಕೆ ಬಾಗಿದವ ಬಾಳುವನು - ಎಮ್ಮೆತಮ್ಮ ಶಬ್ಧಾರ್ಥ ಗಣ್ಯರು = ಗಣನೀಯವಾದವರು ಮಾನ್ಯರು = ಮನ್ನಣೆಗೆ ಪಾತ್ರರಾದವರು ತಾತ್ಪರ್ಯ ಗುರುಗಳಲ್ಲಿ‌ ಗಣ್ಯರಲ್ಲಿ‌ ಮಾನ್ಯರಲ್ಲಿ‌‌...
- Advertisement -

More Articles Like This

- Advertisement -
close
error: Content is protected !!
Join WhatsApp Group