ಉತ್ತರ ಕರ್ನಾಟಕದ ಕಲಾವಿದರ ಮತ್ತು ಕಲಾ ಪೋಷಕರ ಸಂಘಟನೆಯಾದ ಗದುಗಿನ ಕಲಾ ವಿಕಾಸ ಪರಿಷತ್ ಮತ್ತು ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಗದಗ ಸಂಯುಕ್ತ ಆಶ್ರಯದಲ್ಲಿ, ಗದುಗಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸಹಕಾರದೊಂದಿಗೆ, ದಿ. ೦೨ ಫೆಬ್ರುವರಿ ೨೦೨೩ ಬೆಳಗ್ಗೆ ೧೦-೩೦ ಗಂಟೆಗೆ ಮುಂಡರಗಿ ರಸ್ತೆಯಲ್ಲಿ ಇರುವ ಚಿಕ್ಕಟ್ಟಿ ಸಂಸ್ಥೆಯ ಸಭಾ ಭವನದಲ್ಲಿ ‘ಗಾನಯೋಗಿ’ ಪಂ. ಪಂಚಾಕ್ಷರಿ ಗವಾಯಿಗಳವರ ೧೩೧ ನೆಯ ಜಯಂತ್ಯುತ್ಸವ ಅಮರ ಸ್ವರ ಸಮಾರೋಹ ಸಂಗಿತ, ನೃತ್ಯ ಮತ್ತು ೨೩ ನೆಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು, ಭಾರತೀಯ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಪಂ. ಪುಟ್ಟರಾಜ ಕೃಪಾಭೂಷಣ ಪ್ರಶಸ್ತಿ ಪುರಸ್ಕೃತ ಕಲಾಪೋಷಕರಾದ ಪ್ರೊ. ಡಾ. ಎಸ್. ವೈ. ಚಿಕ್ಕಟ್ಟಿ ಇವರು ವಹಿಸಿಕೊಳ್ಳುವರು.
ಮುಖ್ಯ ಅತಿಥಿಗಳಾಗಿ, ಗದುಗಿನ ಪ್ರಥಮದರ್ಜೆ ಗುತ್ತಿಗೆದಾರರಾದ ವಿ.ಕೆ. ಗುರುಮಠ, ಗಣ್ಯ ವರ್ತಕರಾದ, ಸದಾಶಿವ ಮದರಿಮಠ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಗದಗ ಗೌರವ ಕಾರ್ಯದರ್ಶಿ ಶರಣಬಸಪ್ಪ (ರಾಜು) ಗುಡಿಮನಿ ಆಗಮಿಸುವರು. ಇದೇ ಸಂದರ್ಭದಲ್ಲಿ, ಶ್ರೀಮತಿ ವಿದ್ಯಾ ಮಗದುಮ್, ಅಧ್ಯಕ್ಷರು, ಗಾನಯೋಗಿ ಸಂಗೀತ ಪರಿಷತ್ ಗೋಕಾಕ, ರಾಜಲಿಂಗಪ್ಪ ಸಜ್ಜನ (ಚಂಡ್ರಕಿ), ಅಧ್ಯಕ್ಷರು, ಗಾನಯೋಗಿ ಸಂಗೀತ ಪರಿಷತ್ ಗುರುಮಠಕಲ್ ಮತ್ತು ಗದಗ ಬೆಟಗೇರಿ ನಗರಸಭೆ ಮಾಜಿ ಅಧ್ಯಕ್ಷರು ಮತ್ತು ಪುಟ್ಟರಾಜರ ಅಭಿಮಾನಿ ಭಕ್ತರಾದ ಪೀರಸಾಬ ಕೌತಾಳ ಇವರಿಗೆ ಗಾನಯೋಗಿ ಪಂಚಾಕ್ಷರಿ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇದೇ ಸಂದರ್ಭದಲ್ಲಿ, ಗದಗ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಸಿದ್ದಪ್ಪ ಪಲ್ಲೇದ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ಬೆಂಗಳೂರು, ರಾಜ್ಯ ಉಪಾಧ್ಯಕ್ಷರಾದ ರವಿ ಎಲ್. ಗುಂಜಿಕರ್, ಮತ್ತು ಮಧುಸೂಧನ ಪುಣೇಕರ್ ಅಧ್ಯಕ್ಷರು, ಜಿಲ್ಲಾ ಚೇಂಬರ್ ಆಪ್ ಕಾಮರ್ಸ್ ಗದಗ ಇವರುಗಳಿಗೆ ಸನ್ಮಾಸಲಾಗುವುದು.
ಕಲಾ ವಿಕಾಸ್ ಪರಿಷತ್ ಅಧ್ಯಕ್ಷ, ವೇ. ಚನ್ನವೀರ ಸ್ವಾಮಿ ಹಿರೇಮಠ (ಕಡಣಿ) ಪ್ರಾಸ್ತಾವಿಕ ನುಡಿಸೇವೆ, ಬೆಳಗಾವಿಯ ಅಂಗಡಿ ಶಿಕ್ಷಣ ಸಂಸ್ಥೆಯ ಉಪನ್ಯಾಸಕರಾದ ಪ್ರೊ. ಮಂಜುಶ್ರೀ ಬ. ಹಾವಣ್ಣವರ ಇವರು ನುಡಿ ನೈವೇದ್ಯ ಸಲ್ಲಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಸ್ಥಳೀಯ ಯುವ ಕಲಾವಿದರಿಂದ ಮತ್ತು ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಉಭಯ ಸಂಸ್ಥೆಗಳ ಚಿಕ್ಕಟ್ಟಿ ಸಮೂಹ ಸಂಸ್ಥೆಯ ಪರವಾಗಿ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ಸ್ಥಾವರಮಠ ಪತ್ರಿಕಾ ಪ್ರಕಟಣೆಯಮೂಲಕ ತಿಳಿಸಿದ್ದಾರೆ.