ಸಂಪನ್ನಗೊಂಡ ‘ಗಂಗಾ ಲಹರಿ’ ವಾಚನ – ವ್ಯಾಖ್ಯಾನ

Must Read

ಬೆಂಗಳೂರು ಉತ್ತರ ರಾಜಾಜಿನಗರ ಬ್ರಾಹ್ಮಣ ಸಭಾ ವತಿಯಿಂದ ಶ್ರೀ ಜಗನ್ನಾಥ ಪಂಡಿತರು ಸಂಸ್ಕೃತದಲ್ಲಿ ಮೂಲ ರಚನೆ ಮಾಡಿರುವ ಕೀರ್ತಿಶೇಷ ಪಂಡಿತ ಶ್ರೀ ಪಂಡರಿನಾಥಾಚಾರ್ಯ ಗಲಗಲಿ (ರಾಷ್ಟ್ರಪತಿ ಪುರಸ್ಕೃತರು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರು ) ರವರು ಕನ್ನಡಕ್ಕೆ ಅನುವಾದಿಸಿರುವ ರಾಗ ತಾಳ ಭಾವದ ಕಾವ್ಯ ‘ಗಂಗಾಲಹರಿಯ’ ಆಯ್ದ ಪದ್ಯಗಳ ವಾಚನ -ವ್ಯಾಖ್ಯಾನವನ್ನು ರಾಜಾಜಿನಗರ ಒಂದನೇ ಕೆ ಬ್ಲಾಕ್, ಬಾಲಮೋಹನ್ ವಿದ್ಯಾ ಮಂದಿರ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಪಂಡಿತ ಪೂಜ್ಯ ಗಲಗಲಿ ಆಚಾರ್ಯರ ನೇರ ಶಿಷ್ಯರಾದ ಖ್ಯಾತ ವಾಗ್ಮಿ ಡಾ. ವೆಂಕಟನರಸಿಂಹಾಚಾರ್ಯ ಜೋಷಿ, ಗುಡೇ ಬಲ್ಲೂರರವರು ವಾಚನ- ವ್ಯಾಖ್ಯಾನವನ್ನು ನಡೆಸಿಕೊಟ್ಟರು.

ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸಂಸ್ಕೃತ ಮತ್ತು ಕನ್ನಡ ಉಭಯಭಾಷಾ ವಿದ್ವಾಂಸರಾಗಿ ,ವಾಗ್ಮಿಯಾಗಿ ಸಾರಸ್ವತ ಲೋಕಕ್ಕೆ ಮಹತ್ತರ ಕೊಡುಗೆಯನ್ನಿತ್ತ ಗಲಗಲಿ ಆಚಾರ್ಯರ ಸೇವೆಯನ್ನು ದೇಶದ ಶೈಕ್ಷಣಿಕ ವಲಯದ ಯಾವುದೇ ವಿಶ್ವವಿದ್ಯಾಲಯಗಳು ಗುರಿತಸದೇ ಇರುವುದು ದುರದೃಷ್ಟಕರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾರಂಭದ ಪ್ರಾಯೋಜಕರಾದ ಪುಷ್ಪಾ ಮುದಕವಿ ಮತ್ತು ಮೋಹನ ಮುದಕವಿ ಕುಟುಂಬ, ಉ.ರಾ ಬ್ರಾಹ್ಮಣ ಸಭಾದ ಅಧ್ಯಕ್ಷ ಎಸ್ .ಬಿ ರಾಜೇಶ್ , ಕಾರ್ಯದರ್ಶಿ ಭಾನುಪ್ರಕಾಶ್ ಹೆಚ್ ಪಿ , ಪ್ರೊ.ಹೆಚ್.ಎಸ್.ಲಕ್ಷ್ಮಿನಾರಾಯಣ ಭಟ್ಟರು ಮೊದಲಾದವರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group