ತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತು ಈ ತರಬೇತಿ ಮಹತ್ವದ್ದಾಗಿದೆ – ವಿಜಯಕುಮಾರ
ಮುನವಳ್ಳಿಃ “ಮಾನವನು ಬಳಸಿದ ವಸ್ತುಗಳ ಉಳಿದ ಭಾಗವನ್ನು ತ್ಯಾಜ್ಯದ ಉಗಮ ಎನ್ನುವರು.ಈ ವ್ಯರ್ಥ ವಸ್ತುಗಳು ಮನುಷ್ಯನ ಆರೋಗ್ಯ ಹಾಗೂ ಪರಿಸರದ ಸೌಂದರ್ಯದ ಮೇಲೆ ಕಟ್ಟ ಪರಿಣಾಮವನ್ನು ಬೀರುತ್ತವೆ.ಈ ನಿಟ್ಟಿನಲ್ಲಿ ಇಂದು ಜರುಗುತ್ತಿರುವ ಈ ತರಬೇತಿ ಕಸ ಸಂಗ್ರಹ ಸಾಗಣೆ ಸಂಸ್ಕರಣೆ ಮರುಬಳಕೆ ಅಥವ ವಿಲೇವಾರಿ ತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತು ಮಹತ್ವವಾಗಿದೆ ಇದರ ಸದುಪಯೋಗ ಎಲ್ಲರೂ ಪಡೆದುಕೊಂಡು ತಮ್ಮ ಗ್ರಾಮಗಳಲ್ಲಿ ಸ್ವಚ್ಚತೆಯ ಕುರಿತು ಅರಿವು ಮೂಡಿಸುವ ಜೊತಗೆ ಅದರ ಮಹತ್ವವನ್ನು ಪ್ರಚುರಪಡಿಸಿರಿ” ಎಂದು ಬೆಂಗಳೂರಿನ ಮಹಾತ್ಮಾ ಗಾಂಧಿ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜಯಕುಮಾರ ತಿಳಿಸಿದರು.
ಅವರು ಸವದತ್ತಿ ತಾಲೂಕಿನ ಸುಕ್ಷೇತ್ರ ಸೊಗಲದಲ್ಲಿ ಜರುಗಿದ ಬೆಂಗಳೂರಿನ ಮಹಾತ್ಮಾ ಗಾಂಧಿ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಧಾರವಾಡದ ಪರಿಪೂರ್ಣ ಗ್ರಾಮೀಣ ಅಭಿವೃದ್ಧಿ ಮಹಿಳಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜರುಗುತ್ತಿರುವ ೫ ದಿನಗಳ ವಸತಿಯುತ ಸವದತ್ತಿ ತಾಲೂಕಿನ ಮಹಿಳೆಯರಿಗಾಗಿ ಸಂಘಟಿಸಿರುವ ಘನತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ವಹಣೆ ಹಾಗೂ ಕಾರ್ಯಾಚರಣೆ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿಸೊಗಲ ಟ್ರಸ್ಟನ ಅಧ್ಯಕ್ಷರಾದ ವ್ಹಿ.ಡಿ.ಸಂಗಣ್ಣವರ, ಬೆಳಗಾವಿ ಜಿಲ್ಲಾ ಪಂಚಾಯತಿಯ ಡಿ.ಪಿ.ಎಂ.ಎಂ.ಆರ್.ಮರಿಗೌಡರ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ, ಯಕ್ಕುಂಡಿ ಸಮೂಹ ಸಂಪನ್ಮೂಲ ವ್ಯಕ್ತಿ ಎನ್.ಬಿ.ಪೆಂಟೇದ, ಅರ್ಚಕರಾದ ಗುರುಸ್ವಾಮಿ ಹೊಸಪೇಟಿಮಠ, ಪರಿಪೂರ್ಣ ಗ್ರಾಮೀಣ ಅಭಿವೃದ್ಧಿ ಮಹಿಳಾ ಸಂಸ್ಥೆಯ ಸಂಚಾಲಕಿ ಜಯಲಕ್ಷ್ಮೀ ಚಿಕ್ಕಮಠ, ಲೀಲಾ ಜಾಧವ, ಶೃತಿ ಎಸ್. ಜಿ. ಮೊದಲಾದವರು ಉಪಸ್ಥಿತರಿದ್ದರು.
ಸಸಿಗೆ ನೀರುಣಿಸುವ ಮೂಲಕ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ತರಬೇತಿಗೆ ಚಾಲನೆ ನೀಡಿದರು.
ಜಿಲ್ಲಾ ಪಂಚಾಯತಿಯ ಡಿ.ಪಿ.ಎಂ.ಎಂ.ಆರ್.ಮರಿಗೌಡರ ಮಾತನಾಡುತ್ತ “ತ್ಯಾಜ್ಯ ವಸ್ತುಗಳ ನಿರ್ವಹಣೆ ತರಬೇತಿಯ ಮಹತ್ವವೇನು.? ಐದು ದಿನಗಳ ತರಬೇತಿ ಪಡೆದುಕೊಂಡ ನಂತರ ಮಾಡಬೇಕಾದ ಕರ್ತವ್ಯಗಳೇನು? ಎಂಬ ಕುರಿತು ಮಹತ್ವವನ್ನು ತಿಳಿಸಿದರು. ಜಯಲಕ್ಷ್ಮೀ ಚಿಕ್ಕಮಠ ತರಬೇತಿಗೆ ಆಗಮಿಸಿದ ಎಲ್ಲ ಮಹಿಳೆಯರು ಐದು ದಿನಗಳ ಕಾಲ ತರಬೇತಿಯಲ್ಲಿ ಏನನ್ನು ವಿಷಯ ತಿಳಿದುಕೊಳ್ಳಬಹುದು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಿದರು.
ವೈ.ಬಿ.ಕಡಕೋಳ ಮಾತನಾಡಿ, ದೈನಂದಿನ ಬದುಕಿನಲ್ಲಿ ನಾವು ಕಸವನ್ನು ನೋಡುವ ರೀತಿ ಅದರಿಂದ ಆಗಬಹುದಾದ ತೊಂದರೆಗಳನ್ನು ತಿಳಿಸುತ್ತ ಇದು ಮಹತ್ವವಾದ ತರಬೇತಿ ಆಗಿದ್ದು ಎಲ್ಲರೂ ಇದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು
ಈ ತರಬೇತಿಯಲ್ಲಿ ಸವದತ್ತಿ ತಾಲೂಕಿನ ಮರಕುಂಬಿ, ಹೂಲಿ, ಉಗರಗೋಳ, ಆಲದಕಟ್ಟಿ, ಕೆ.ಎಂ.ಇಂಚಲ, ಹಿರೇಬೂದನೂರ, ಗೊರವನಕೊಳ್ಳ, ಹಿರೇಕುಂಬಿ, ಬಡ್ಲಿ ಮೊದಲಾದ ಗ್ರಾಮ ಪಂಚಾಯತಿ ವ್ಯಾಪ್ತಿಗಳ ಆಯ್ದ ೩೦ ಜನ ಮಹಿಳೆಯರು ಪಾಲ್ಗೊಂಡಿರುವರು. ತರಬೇತಿ ಪ್ರಾರಂಭದಲ್ಲಿ ಯಕ್ಕೇರೆವ್ವ.ಫ.ಸತ್ತೀಗೇರಿ ಪ್ರಾರ್ಥನಾ ಗೀತೆ ಹಾಡಿದರು. ಗೊರವನಕೊಳ್ಳ ಪಂಚಾಯತಿಯ ಪವಿತ್ರಾ ಮಾದರ ಸ್ವಾಗತಿಸಿದರು.ದೀಪಾ ಕುಂಬಾರ ಕಾರ್ಯ ಕ್ರಮ ನಿರೂಪಿಸಿದರು