ಸ್ಕೌಟ್ಸ್ ಮತ್ತು ಗೈಡ್ಸ್ ನ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿದ ಗಜಾನನ ಮಣ್ಣಿಕೇರಿ

Must Read

ಮೂಡಲಗಿ: ಶಿಕ್ಷಕರು ತಮ್ಮನ್ನು ತಾವು ತೊಡಗಿಸಿಕೊಂಡು ಸ್ಕೌಟ್ಸ್ ಮತ್ತು ಗೈಡ್ಸ ತತ್ವಗಳನ್ನು ಮಕ್ಕಳಲ್ಲಿ ಬಿತ್ತುವ ಮೂಲಕ ಒಳ್ಳೆಯ ನಾಗರಿಕರನ್ನಾಗಿಸಲ್ಲು ಶ್ರಮಿಸಬೇಕೆಂದು ಬೆಳಗಾವಿ ಜಿಲ್ಲಾ ಸ್ಕೌಟ್ಸ ಮತ್ತು ಗೈಡ್ಸ್ ಸಂಸ್ಥೆ ಅಧ್ಯಕ್ಷರು ಹಾಗೂ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಗಜಾನನ ಮಣ್ಣಿಕೇರಿ ಹೇಳಿದರು.

ಅವರು ಪಟ್ಟಣದ ಸರಕಾರಿ ಕನ್ನಡ ಬಾಲಕರ ಮಾದರಿ ಶಾಲೆಯಲ್ಲಿ “ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕೋವಿಡ -19 ಹಿನ್ನೆಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ ತರಬೇತಿಗಳು ಸ್ಥಗಿತಗೊಂಡಿದ್ದರಿಂದ ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ ವಿಚಾರ ಬಗ್ಗೆ ತಿಳಿವಳಿಕೆ ಸ್ವಲ್ಪ ಕಡಿಮೆಯಾಗಿತ್ತು, ಸದ್ಯ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದರಿಂದ ಮತ್ತೆ ಮುಂದಿನ ದಿನಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ ಚಟುವಟಿಕೆಗಳು ನಡೆಯುವ ಸಾಧ್ಯತೆ ಇರುವದರಿಂದ ಮಕ್ಕಳಿಗೆ ಪೂರಕವಾದ ಮಾಹಿತಿ ನೀಡುವ ಅಗತ್ಯವಿದೆ. ಬೇಸಿಗೆಯಲ್ಲಿ 4 ರಿಂದ 12 ದಿನಗಳವರೆಗೆ ಅಗತ್ಯಕ್ಕೆ ತಕ್ಕಂತೆ ಸ್ಕೌಟ್ಸ್ ಮತ್ತು ಗೈಡ್ಸ ಮೂಲ ತತ್ವದ ಚಟುವಟಿಕೆಗಳು ಮತ್ತು ಬೇರೆ ಬೇರೆ ತರಬೇತಿಗಳನ್ನು ನೀಡುವ ಮೂಲಕ ಮಕ್ಕಳಿಗೆ ಮತ್ತಷ್ಟು ಮನದಟ್ಟಾಗಿ ಮಾಡಿಕೊಳ್ಳುವ ಬ್ರಿಡ್ಜ್ ಕೋರ್ಸ ಮಾದರಿಯ ತರಬೇತಿ ಇದ್ದಾಗಿರುತ್ತದೆ ಕಾರಣ ತರಬೇತಿಯ ಸೌಲಭ್ಯವನ್ನು ಎಲ್ಲ ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕೆಂದ ಅವರು, ಶಾಲೆಯು ಹಮ್ಮಿಕೊಳ್ಳುತ್ತಿರುವ ಸ್ಕೌಟ್ಸ್ ಗೈಡ್ಸ್ ಮತ್ತು ಶಾಲಾ ಅಭಿವೃದ್ಧಿಪರ ಕಾರ್ಯಗಳು ಪ್ರಶಂಸಾರ್ಹವಾಗಿವೆ ಎಂದರು.

ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಕೋಪರ್ಡೆ ಮತ್ತು ಶಿಕ್ಷಕರು ಗಜಾನನ ಮಣ್ಣಿಕೇರಿ ಅವರನ್ನು ಸತ್ಕರಿಸಿ ಮಾತನಾಡಿ, ಸರಕಾರಿ ಕನ್ನಡ ಬಾಲಕರ ಮಾದರಿ ಶಾಲೆಯಲ್ಲಿ ಸರಕಾರದ ಸೌಲಭ್ಯ ಮತ್ತು ಸಾರ್ವಜನಿಕರ ಹಾಗೂ ದಾನಿಗಳ ಸಹಕಾರದಿಂದ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದರು.

ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಬಿ.ಆರ್.ತರಕಾರ, ಸ್ಕೌಟ್ಸ್ ಗೈಡ್ಸ್ ಕಾರ್ಯದರ್ಶಿ ಬಸವರಾಜ ನಿಡೋಣಿ, ಶಾಲಾ ಸ್ಕೌಟ್ಸ್ ಗೈಡ್ಸ ಶಿಕ್ಷಕಿ ಕಮಲ ಚಂದಗಡೆ, ಸಿ.ಆರ್.ಪಿ ದಬಾಡಿ, ಶಿಕ್ಷಕರಾದ ಆರ್.ಎಲ್ ಲಮಾಣಿ, ಎಸ್.ವಿ.ಸೋಮವ್ವಗೋಳ, ಶಿಕ್ಷಕಿಯರಾದ ಅರ್ಚನಾ ಮಹೇಂದ್ರಕರ, ಸೈರಾಬಾನು ಬಾಗವಾನ, ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group