ಸಭ್ಯತೆಯ ಸಾಧ್ವಿ ಶರಣೆ ಸರಸ್ವತಿ ಬಿರಾದಾರ

Must Read

ನಾವು – ನಮ್ಮವರು

ಸರಸ್ವತಿ ಬಿರಾದಾರ ಅವರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ಒಬ್ಬ ಅತ್ಯಂತ ಸರಳ -ಸಜ್ಜನಿಕೆಯ ಸದ್ಗೃಹಿಣಿ ಎಂದರೆ ತಪ್ಪಾಗಲಾರದು. ಮೃದು ಮಾತಿನ , ಸಭ್ಯತೆಯ ಹೆಣ್ಣುಮಗಳು ಮತ್ತು ಶರಣರ ವಚನ ಗಾಯನ ಮಾಡುವುದರ ಜೊತೆಗೆ ಶರಣ ಚಿಂತಕಿ ಕೂಡಾ
ಆಗಿರುವರು.

ಸರಸ್ವತಿ ಯಶವಂತ ಬಿರಾದಾರ ಅವರು ವಿಜಯಪುರ ಜಿಲ್ಲೆಯವರು. ಅವರು ಮಹಾರಾಷ್ಟ್ರದ ಸೊಲ್ಲಾಪುರ ದಲ್ಲಿ 1959 ಜುಲೈ 18 ರಂದು ಜನಿಸಿದರು. ಅವರ ತಂದೆ ಕೆ.ಎಲ್.ಇ ಸಂಸ್ಥೆಯ ಶಾಲೆಯಲ್ಲಿ ಹೈಸ್ಕೂಲ್ ಟೀಚರ್ ಆಗಿದ್ದರು.ಬಸವ ತತ್ವದಂತೆ ನಡೆದ ಸರಳ ಪ್ರಮಾಣಿಕ ವ್ಯಕ್ತಿಯಾಗಿ ಜೀವನದುದ್ದಕ್ಕೂ ಬದುಕಿದರು. ಒಂದರಿಂದ ಹತ್ತನೆಯ ಕ್ಲಾಸ್ ವರೆಗೆ ಅಕ್ಕಲಕೋಟದ ಕೆ.ಎಲ್.ಇ ಸಂಸ್ಥೆಯ ಮಂಗರೂಳೆ ಹೈಸ್ಕೂಲ್ನನಲಿ ಅವರ ಶಿಕ್ಷಣ ನಡೆಯಿತು ಮುಂದೆ ಅವರ ತಂದೆಯವರು ಸಹೋದರ ಸಹೋದರಿಯರ ಶಿಕ್ಷಣಕ್ಕಾಗಿ ಸೊಲ್ಲಾಪುರಕ್ಕೆ ವರ್ಗಾವಣೆ ಮಾಡಿಸಿಕೊಂಡರು. ಅಲ್ಲಿ ಇದ್ದಾಗಲೇ ಸರಸ್ವತಿ ಅವರ ಮದುವೆಯಾಯಿತು. ಗಂಡನ ಮನೆಯಲ್ಲಿ ಅವರಿಗೆ ಮುಂದೆ ಓದುವ ಅವಕಾಶ ಸಿಗಲಿಲ್ಲ. ಹಿರಿಯ ಸೊಸೆಯಾಗಿ ಮನೆಯ ಎಲ್ಲ ಜವಾಬ್ದಾರಿ ಹೊತ್ತು ಬಹಳಷ್ಟು ಶ್ರಮಪಟ್ಟರು.
ಅವರ ಮನೆಯವರು ರಾಯಚೂರು ಜಿಲ್ಲೆಯ ಹಟ್ಟಿ ಗೋಲ್ಡ್ ಮೈನ್ಸ್ ನಲ್ಲಿ ಅಡ್ಮಿನ್ ಭಾಗದಲ್ಲಿ ಕೆಲಸ ಮಾಡುತ್ತಿದ್ದರು ಅವರು ಬಸವ ಅಭಿಮಾನಿಗಳು ಕಂಪನಿಯಲ್ಲಿಯ ಅಧಿಕಾರಿಗಳ ಭ್ರಷ್ಟತನ ಕಂಡು 2001ರಲ್ಲಿ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದರು. ಅವರ ಮರಣದ ನಂತರ ವಿ. ಆರ್ ಎಸ್ ದಿಂದ ಬಂದ ಹಣದಲ್ಲಿ ಯಾರಿಗೂ ಕೈಚಾಚದೆ ಮಗನ ಇಂಜಿನಿಯರಿಂಗ್ ಶಿಕ್ಷಣವನ್ನು ಮೈಸೂರಲ್ಲಿ ಜೊತೆಗಿದ್ದು ಮುಗಿಸಿದರು

ಸರಸ್ವತಿ ಅವರಿಗೆ ಓದುವ ಹವ್ಯಾಸ ಬಹಳವಿತ್ತು. ದಿನವೆಲ್ಲ ಕೆಲಸ ಮಾಡಿ ಉಳಿದ ವೇಳೆಯಲ್ಲಿ ವಾರಪತ್ರಿಕೆ, ಕಾದಂಬರಿಗಳನ್ನು ಓದುತ್ತಲಿದ್ದರು. ಬಹಳಷ್ಟು ವರ್ಷಗಳ ಕಾಲ ಸಂತಾನ ವಾಗದ ಕಾರಣ ನನ್ನ ಒಲವೆಲ್ಲ ಆಧ್ಯಾತ್ಮಿಕದತ್ತ ವಾಲಿತು. ಮೊದಲಿನಿoದಲೂ ಬಸವಣ್ಣ ಅವರ ಮನೆಯ ಆರಾಧ್ಯ ದೈವ ಮಾತಾಜಿ ಮತ್ತು ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಪ್ರವಚನದಿಂದ ಇನ್ನಷ್ಟು ಪರಿವರ್ತಿತಳಾದರು. ಅವರ ತರಂಗಿಣಿ ಪುಸ್ತಕ,ಅಕ್ಕನ ಪ್ರವಚನ,ಅನೇಕ ಆಧ್ಯಾತ್ಮಿಕ ಗ್ರಂಥಗಳನ್ನು ಓದಿದ್ದಾರೆ. ಎಲ್ಲೇ ಸತ್ಸಂಗ, ಪ್ರವಚನ ಇದ್ದರೂ ತಪ್ಪಿಸುತ್ತಿದ್ದಿಲ್ಲ. ಅವರ ತಂದೆ ವಿದ್ಯೆ ಜೊತೆಗೆ ಮಕ್ಕಳಿಗೆ ಆಸಕ್ತಿ ಇರುವ ಕಲೆಯಲ್ಲಿ ಮುಂದುವರೆಯಬೇಕು ಎಂದು ಅವರಿಗೆ ಆರನೆಯ ಕ್ಲಾಸ್ ಇದ್ದಾಗಲೇ ಶಾಸ್ತ್ರೀಯ ಸಂಗೀತ ಕಲಿಯಲು ಕಳಿಸಿ ಎರಡೂ ಪರೀಕ್ಷೆಯನ್ನು ಕಟ್ಟಿಸಿದ್ದರು. ಮುಂದೆ ಹೈಸ್ಕೂಲಗೆ ಬಂದಾಗ ಅದು ನಿಂತು ಹೋಯ್ತು. (ಅವರ ಅಜ್ಜ ಮತ್ತು ತಾಯಿ ಒಳ್ಳೆಯ ಹಾಡುಗಾರರು) ಅದರಿಂದ ಅವರಿಗೆ ಸಂಗೀತದಲ್ಲಿ ಆಸಕ್ತಿ. ವಚನ ಹಾಡುವುದರಲ್ಲಿ ಅವರು ಲೌಕಿಕ ನೋವನ್ನೆಲ್ಲ ಮರೆಯುತ್ತಿದ್ದರು. ಮನೆ ಕೆಲಸ ಮಾಡುತ್ತಿದ್ದಾಗಲೂ ವಚನಗಳನ್ನು ಗುನುಗುನುಸುತ್ತಿದ್ದರು ಅದರಿಂದ ಅವಾಗಲೇ 30 ರಿಂದ 40 ವಚನಗಳು ಕಂಠಪಾಠವಾಗಿದ್ದವು. ಈಗಲೂ ಧ್ವನಿ ಸರಿಯಾಗಿ ಇಲ್ಲದಿದ್ದರೂ ಹಾಡಲು ಪ್ರಯತ್ನಿಸುತ್ತಾರೆ. ವಿಜಯಪುರ,ಮೈಸೂರ, ರಾಯಚೂರದಲ್ಲಿ ಕಾರ್ಯಕ್ರಮದಲ್ಲಿ ವಚನವನ್ನು ಹಾಡಿದ್ದಾರೆ.

ಸರಸ್ವತಿ ಅವರಿಗೆ ಸಂತಾನದ ಕೊರತೆ ಇರುವಾಗ ಮಾತಾಜಿಯವರ ಉಪದೇಶದಂತೆ ಅವರು ಬಸವಣ್ಣನವರ ವೃತಪೂಜೆಗೆ ತೊಡಗಿದರು.ಆವಾಗಿನಿಂದ ಇಲ್ಲಿಯವರೆಗೂ ಆರಾಧನೆ ತಪ್ಪದೇ ಮಾಡುತ್ತಿದ್ದಾರೆ. ಅದರಲ್ಲಿ ಸಿಗುವ ಆನಂದ ಇನ್ನೆಲ್ಲಿಯೂ ಸಿಗದು. ಬಸವಣ್ಣನವರ ಕರುಣೆಯಿಂದ ಅವರು ಮದುವೆಯ 18 ವರ್ಷಗಳ ನಂತರ ತಾಯಿಯಾದರು.ಅವರು ಇಳಕಲ್ ಮಠದ ಮಹಾಂತ ಸ್ವಾಮೀಜಿ ಅವರನ್ನು ಬಹಳಷ್ಟು ಆರಾಧಿಸುತಿದ್ದರು ಅದಕ್ಕೋಸ್ಕರ ಮಗನಿಗೆ ವಿಜಯ ಮಹಾಂತೇಶ ಎಂದು ನಾಮಕರಣ ಮಾಡಿದರು.

ಸರಸ್ವತಿ ಅವರ ಪತಿ ಅಕಾಲ ಮರಣಕ್ಕೆ ತುತ್ತಾದಾಗ (2010) ಅವರು ಬಹಳಷ್ಟು ಕುಸಿದು ಹೋಗಿದ್ದರು. ಆದರೂ ಬಸವಣ್ಣನವರು ಅವರಿಗೆ ಪ್ರತಿ ಘಳಿಗೆ ಅವರ ಸoರಕ್ಷಣ ಮಾಡಿದ್ದಾರೆ. ಅವರ ನೋವನ್ನು ಅವರ ಆರಾಧ್ಯ ದೈವ ಬಸವಣ್ಣನಲ್ಲದೆ ಯಾರಲ್ಲೂ ತೋಡಿಕೊಂಡಿಲ್ಲ. ಅವರ ಕಷ್ಟದಲ್ಲಿಯೂ ಮಗನಿಗೆ ಇಂಜಿನಿಯರ್ ಡಿಗ್ರಿ ಓದಿಸಿ ಈಗ ದೊಡ್ಡ ಹುದ್ದೆಯಲ್ಲಿರುವಂತೆ ಮಾಡಿದ್ದಾರೆ.

ಸರಸ್ವತಿ ಅವರು ಒಳಪಂಗಡ ಪಂಚಾಂಗ ಸಾಲಾವಳಿ ಯಾವುದೂ ನೋಡದೆ ಮಗನ ಮದುವೆ ಮಾಡಿದ್ದಾರೆ. ಸೊಸೆಯು ಸಹ ಸಾಫ್ಟ್ವೇರ್ ಇಂಜಿನಿಯರ್.ಇದೆಲ್ಲ ಬಸವನ ಕೃಪೆಯಿಂದ ಆದದ್ದು ಎಂದು ಸಂತಸ ಪಡುತ್ತಾರೆ. ಅವರ ಕುಟುಂಬದವರೆಲ್ಲರೂ ಬಸವಣ್ಣನ ಮಾರ್ಗದಲ್ಲಿ ನಡೆಯಬೇಕೆಂದು ಅವರ ಇಚ್ಛೆ. ಅವರ ಆರೋಗ್ಯ ಸರಿ ಇಲ್ಲದ ಕಾರಣ ಮನೆಯಲ್ಲಿಯೇ ಸಾಧ್ಯವಾದಷ್ಟು ಸಾಹಿತ್ಯ, ವಾಚನ, ವಚನ ಗಾಯನದತ್ತ ಅವರ ಮನಸ್ಸನ್ನು ತೊಡಗಿಸಿಕೊಂಡಿದ್ದಾರೆ.

ಸಾಫ್ಟ್ವೇರ್ ಇಂಜಿನಿಯರ ಆಗಿ ಅವರ ಮಗ ಪುಣೆಗೆ ಬಂದು ಸೇರಿದಾಗ ಅವರಿಗೆ ಅಲ್ಪಸಲ್ಪ ಮರಾಠಿ ಬರುತ್ತಿತ್ತು. ಅವರಿಗೆ ಅಲ್ಲಿ ಸತ್ಸಂಗ ಪ್ರವಚನವಿಲ್ಲ ದ್ದರಿಂದ ಬಹಳ ಬೇಜಾರಾಗುತ್ತಿತ್ತು. ಅವರು ವಿಜಯಪುರದ ಪಾಟೀಲ ಸರ್ ಅವರಿಂದ ಅಕ್ಕನ ಅರಿವು ಗ್ರೂಪಿಗೆ ಸೇರಿದರು. ಆನ್ಲೈನ್ ಕಾರ್ಯಕ್ರಮದ ಮುಖಾಂತರ ಸಾವಿಲ್ಲದ ಶರಣರ ಮತ್ತು ಬಸವಾದಿ ಶರಣರ ಅನೇಕ ಚರಿತ್ರೆಗಳನ್ನು ತಿಳಿದುಕೊಂಡರು. ಪಟ್ಟಣ ಸರ್ ಅವರು ಎಲ್ಲರನ್ನೂ ಪ್ರೋತ್ಸಾಹಿಸುವ ವಚನ ಸಾಹಿತ್ಯ ಓದಲು ಪ್ರೇರೇಪಿಸುವ ರೀತಿ ಅವರಿಗೆ ಬಹಳ ಮೆಚ್ಚುಗೆ ಆಯ್ತು. ಅವರ ಮುಖಾಂತರ ಕನ್ನಡ ಕವನ ಕಾವ್ಯ ಕೂಟದಲ್ಲಿ ಭಾಗಿಯಾದರು ಮತ್ತು ಕನ್ನಡ ಟೈಪಿಂಗ್ ಮಾಡುವುದನ್ನು ಕಲಿತುಕೊಂಡರು. ಅವರಿಗೆ ವಚನ ಸಂಗೀತ ಇಷ್ಟವಾದ ಕಾರಣ ಅವಕಾಶ ಸಿಕ್ಕಾಗ ಹಾಡಲು ಪ್ರಯತ್ನಿಸುತ್ತಾರೆ. ಒಟ್ಟಿನಲ್ಲಿ ಸರಸ್ವತಿ ಅವರು ಶರಣತತ್ವದಲ್ಲಿ ಸಂಪೂರ್ಣ ವಾಗಿ ತಮ್ಮನ್ನು ತಾವು ತೊಡಗಿಸಿಕೊಂಡ ಶರಣೆ ಎಂದು ಹೇಳಬಹುದು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

LEAVE A REPLY

Please enter your comment!
Please enter your name here

Latest News

ಮೂಡಲಗಿ : ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಹ್ಯಾಂಡ್‌ಬಾಲ್ ಕ್ರೀಡಾಕೂಟ

ಮೂಡಲಗಿ - ಕ್ರೀಡೆ ಎಂಬುದನ್ನು ಗ್ರೀಕ್ ದೇಶದಲ್ಲಿ ಮನರಂಜನೆಗಾಗಿ ಬಳಸುತ್ತಿದ್ದರು ಆದರೆ ಈಗ ಮಕ್ಕಳು ಸದೃಢವಾದ ದೇಹವನ್ನು ಮತ್ತು ಜ್ಞಾನದ ಗ್ರಹಿಕೆಯು ಹೆಚ್ಚಾಗಬೇಕಾದರೆ ಮೊದಲು ಕ್ರೀಡೆಯಲ್ಲಿ...

More Articles Like This

error: Content is protected !!
Join WhatsApp Group