spot_img
spot_img

ಗಿರಿಜಾ.ಎಸ್.ದೇಶಪಾಂಡೆರವರ ‘ಸಂಸ್ಕೃತಿ ‘( ನಮ್ಮ ಆಚರಣೆಗೊಂದು ಭಾವಾರ್ಥ) ೪ ನೇಯ ಕೃತಿ ಲೋಕಾರ್ಪಣೆ

Must Read

- Advertisement -

ಬೆಂಗಳೂರು: ಸಂಸ್ಕೃತಿ ಎಂಬ ಕೃತಿ ಸಂದರ್ಭಕ್ಕನುಸಾರವಾಗಿ ಬರೆದ ಲೇಖನಗಳನ್ನೊಳಗೊಂಡಿದೆ. ಹಲವಾರು ಸಂಸ್ಕೃತಿಯ ಆಗರವಾಗಿರುವ ನಮ್ಮ ನಾಡಿನಲ್ಲಿ ಆಚರಿಸುವ ದೀಪಾವಳಿ, ಮಹಾನವಮಿ, ಸಂಕ್ರಾಂತಿ, ಯುಗಾದಿ ಮುಂತಾದ ಪ್ರಮುಖ ಹಬ್ಬಗಳ ಮಹತ್ವ ಅವುಗಳ ಪೌರಾಣಿಕ,ಧಾರ್ಮಿಕ,ಸಾಮಾಜಿಕ ಹಿನ್ನೆಲೆ, ಆಚರಿಸುವ ರೀತಿ,ಅದರಿಂದಾಗುವ ಪ್ರಯೋಜನ ಕುರಿತು ಮಾಹಿತಿಪೂರ್ಣವಾದ ವಿವರಣೆಗಳು ಕೃತಿಯಲ್ಲಿವೆ.

ಬೇರೆ ಬೇರೆ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳನ್ನು ಒಂದುಗೂಡಿಸಿ “ಸಂಸ್ಕೃತಿ” ಹೆಸರಿನ ಪುಸ್ತಕ ಪ್ರಕಟಿಸುತ್ತಿರುವದು ಸಂತಸ ಮತ್ತು ಹೆಮ್ಮೆಯ ಸಂಗತಿ.ನಾಡಿನ ಸಂಸ್ಕೃತಿಯ ರಾಯಭಾರಿಗಳಾದ ಮಹಿಳೆಯರಿಗೆ ನಮ್ಮ ಹಬ್ಬಗಳ ವೃತಾಚರಣೆ ಕುರಿತು ಮಾಹಿತಿ ಒಂದೇಕಡೆ ಸಿಗುವಂತೆ ಮಾಡಿದ ಕಾಯಕ ಸ್ತುತ್ಯರ್ಹ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಎಸ. ಶಿವಾನಂದ ಹೇಳಿದರು.

ಲೇಖಕಿ ಗಿರಿಜಾ.ಎಸ್.ದೇಶಪಾಂಡೆಯವರು ಸದಾ ಕ್ರಿಯಾಶೀಲರು, ಬದುಕನ್ನು ಬಂದಂತೆ ಸ್ವೀಕರಿಸಿ ಅನುಭವಿಸಿ ಆನಂದಿಸುವ ಗುಣವುಳ್ಳವರು,ಎಲ್ಲರೊಂದಿಗೆ ಆತ್ಮೀಯರಾಗಿ ಬೆರೆಯುವ ಸ್ನೇಹಜೀವಿಯಾದ ಅವರ ಮತ್ತಷ್ಟು ಕೃತಿಗಳು  ಪ್ರಕಟವಾಗಲಿ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಶಿವಾನಂದ. ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

- Advertisement -

ದಿ. 20 ರಂದು ಬೆ.11-30ಕ್ಕೆ  ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮಾತಿನಮನೆ ಸಭಾಂಗಣದಲ್ಲಿ ನಡೆಯುವ ಸಮಾನ ಚಿಂತಕರ ಸಮ್ಮೇಳನದಲ್ಲಿ ಗಿರಿಜಾ ಅವರ ಸಂಸ್ಕೃತಿ ಕೃತಿ  ಲೋಕಾರ್ಪಣೆಯಾಗಲಿದೆ.

ಲೇಖಕ ರೋಹಿತ್ ಚಕ್ರತೀರ್ಥ ಕೃತಿ ಬಿಡುಗಡೆ  ಮಾಡಲಿದ್ದಾರೆ. ಸಂಸ್ಕೃತಿ ಪ್ರತಿಪಾದಕ  ವಿದ್ವಾನ್ ನವೀನಶಾಸ್ತ್ರೀ ಪುರಾಣಿಕ ಅವರಿಂದ ಪುಸ್ತಕಾವಲೋಕನ .ಲೇಖಕ ಹನುಮಂತ. ಮ. ದೇಶಕುಲಕರ್ಣಿ , ಸಹನಾ ಪ್ರಕಾಶನದ  ಆರ್. ಶ್ರೀನಿವಾಸ ಉಪಸ್ಥಿತರಿರಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತಿನಮನೆ ಸಂಸ್ಥಾಪಕ ರಾ.ಸು. ವೆಂಕಟೇಶ ವಹಿಸಲಿದ್ದಾರೆ.

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group