ಸಮರ್ಥ, ಸ್ಥಿರ ಸರ್ಕಾರಕ್ಕಾಗಿ ಬಿಜೆಪಿಗೆ ಅಧಿಕಾರ ಕೊಡಿ – ಬಾಲಚಂದ್ರ ಜಾರಕಹೊಳಿ

Must Read

ಜಗದೀಶ ಶೆಟ್ಟರ್ ಪರ ಮತ ಬೇಟೆ ಮುಂದುವರೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಪರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತಬೇಟೆ ಮುಂದುವರೆಸಿದ್ದಾರೆ‌

ಶನಿವಾರದಂದು ಮೂಡಲಗಿ ತಾಲ್ಲೂಕಿನ ಅರಭಾವಿ, ಕಲ್ಲೊಳ್ಳಿ, ನಾಗನೂರ, ಮೂಡಲಗಿ ಪಟ್ಟಣಗಳಿಗೆ ತೆರಳಿ ಮತ ಯಾಚಿಸಿದ ಅವರು, ಮೇ. ೭ ರಂದು ನಡೆಯುವ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡುವಂತೆ ಮನವಿ ಮಾಡಿಕೊಂಡರು.

ದೇಶದ ಭವಿಷ್ಯದ ದೃಷ್ಟಿಯಿಂದ ಬಿಜೆಪಿಯು ಉತ್ತಮ ಆಯ್ಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಭಾರತವು ವಿಶ್ವಮಾನ್ಯವಾಗಿದೆ. ಶಕ್ತಿಶಾಲಿ ಭಾರತವಾಗುತ್ತಿದೆ. ವಿಶ್ವದಲ್ಲೇ ಪ್ರಗತಿಶೀಲ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ಈ ದೇಶಕ್ಕೆ ಮತ್ತೊಮ್ಮೆ ಮೋದಿ ಅವರು ಪ್ರಧಾನಮಂತ್ರಿ ಆಗಬೇಕು. ಇಡೀ ಈ ದೇಶದ ನಾಗರಿಕರ ಆಶಯವಾಗಿದೆ. ಈ ದಿಸೆಯಲ್ಲಿ ಯಾವ ಆಮಿಷಗಳಿಗೂ ಬಲಿಯಾಗದೇ ಸಮರ್ಥ, ಸ್ಥಿರ ಸರ್ಕಾರಕ್ಕಾಗಿ ಬಿಜೆಪಿಯನ್ನು ಬೆಂಬಲಿಸುವಂತೆ ಅವರು ಕೋರಿದರು.

ಜಗದೀಶ್ ಶೆಟ್ಟರ ಅವರಿಗೆ ಮತ ನೀಡಿದರೆ ಅದು ಮೋದಿ ಅವರಿಗೆ ನೀಡಿದಂತೆ. ಶೆಟ್ಟರ ಅವರನ್ನು ಆಯ್ಕೆ ಮಾಡಿದರೆ ನಮ್ಮ ಬೆಳಗಾವಿ ಜಿಲ್ಲೆಗೆ ಮತ್ತಷ್ಟು ಅನುಕೂಲವಾಗಲಿದೆ. ಈ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಅವರಿಗೆ ನಾವೆಲ್ಲರೂ ಮತ ನೀಡುವ ಮೂಲಕ ಆಶೀರ್ವಾದ ಮಾಡುವಂತೆ ಮನವಿ ಮಾಡಿಕೊಂಡರು.

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನಾನು ಪ್ರಚಾರಕ್ಕೆ ಹೋಗಲಿಲ್ಲ. ಆದ್ರೂ ನಂಗೆ ರಾಜ್ಯದಲ್ಲಿಯೇ ೪ ನೇ ಸ್ಥಾನದ ಮುನ್ನಡೇ ಮತಗಳಿಂದ ಆಯ್ಕೆ ಮಾಡಿರುವ ನಿಮ್ಮಗಳ ಋಣಭಾರ ನನ್ನ ಮೇಲಿದೆ. ಈಗ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದೇನೆ. ಅತೀ ಹೆಚ್ಚಿನ ಮತಗಳನ್ನು ಶೆಟ್ಟರ ಅವರ ಶೇ. ನಂ ೨ ರ ಕಮಲ ಗುರುತಿನ ಚಿತ್ರಕ್ಕೆ ನೀಡಿ ಆರಿಸಿ ತರುವಂತೆ ಅವರು ತಿಳಿಸಿದರು.

ಕೆಲವರು ಈ ಚುನಾವಣೆಯಲ್ಲಿ ಮತದಾರರಿಗೆ ಕೆಲವು ಆಮಿಷಗಳನ್ನು ಒಡ್ಡುತ್ತಿದ್ದಾರೆ. ಬಹಳವೆಂದರೆ ಮೇ. ೭ ರತನಕ ನಿಮ್ಮನ್ನು ಕಾಳಜಿ ಮಾಡಬಹುದು. ಚುನಾವಣೆ ಮುಗಿದ ಬಳಿಕ ನಿಮ್ಮನ್ನು ಕಡೆಗಣಿಸಿ ಹೋಗುತ್ತಾರೆ. ನಾನು ನಿಮ್ಮ ಕಷ್ಟ- ಸುಖದಲ್ಲಿ ನಿರಂತರವಾಗಿ ಭಾಗಿಯಾಗುತ್ತಿದ್ದೇನೆ. ನಿಮ್ಮ ಸಮಸ್ಯೆಗಳನ್ನು ನಾನು ಪರಿಹರಿಸುತ್ತೇನೆ. ಭೀಕರ ಬರಗಾಲದ ಮಧ್ಯೆಯೂ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಈಗಾಗಲೇ ಹಳ್ಳ ಮತ್ತು ಕಿನಾಲಗಳಿಗೆ ನೀರನ್ನು ಹರಿಸಿದ್ದೇನೆ. ರಾಜ್ಯದಾದ್ಯಂತ ಕುಡಿಯಲು ನೀರು ಸಿಗುತ್ತಿಲ್ಲ. ಮುಂದೊಂದು ದಿನ ನೀರು ಬಂಗಾರಕ್ಕಿಂತ ಹೆಚ್ಚು ಬೆಲೆ ಸಿಗಲಿದೆ. ನೀರಿಗೆ ಮಹತ್ವ ಎಷ್ಟಿದೇ ಎಂಬುದು ನಿಮಗೆ ಈಗಾಗಲೇ ಅರ್ಥವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಜನ ಪ್ರತಿನಿಧಿಗಳು, ವಿವಿಧ ಸಮಾಜಗಳ ಮುಖಂಡರು, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group