ಕರ್ನಾಟಕದಲ್ಲಿ ಕನ್ನಡ ಭಾಷೆ ಶ್ರೇಷ್ಠ ನಾವೆಲ್ಲರೂ ಕನ್ನಡ ಭಾಷೆಯನ್ನು ಕಾಪಾಡಬೇಕು ಎಲ್ಲಾ ಆಂಗ್ಲ ಭಾಷೆ ಶಾಲೆಗಳಲ್ಲಿ ಮೊದಲು ಕನ್ನಡಕ್ಕೆ ಗೌರವ ಕೊಡಬೇಕು ಎಂದು ಸಾಹಿತಿ ಶಿವಶಂಕರ ತರನಳ್ಳಿ ಹೇಳಿದರು
ಹುಮನಾಬಾದ್ ಪಟ್ಟಣದಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಬಾಲ ಭಾರತಿ ವಿದ್ಯಾ ಮಂದಿರ ಶಾಲೆಯ ಅವರಣದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಜಿಲ್ಲಾ ಘಟಕ ಬೀದರ್ ವತಿಯಿಂದ ಆಯೋಜಿಸಿದ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದ ಉದ್ಘಾಟಿಸಿದ ಪರಮಪೂಜ್ಯರಾದ ಶಂಕರ್ಲಿಂಗ ಸ್ವಾಮೀಜಿಯವರು ಧುಮುಸೂರ್ ನಾವೆಲ್ಲರೂ ಕರ್ನಾಟಕದ ಗಡಿನಾಡಿನ ಕನ್ನಡಕ್ಕೆ ಸೇವೆಗೆ ನಿರಂತರವಾಗಬೇಕು ಕನ್ನಡ ಉಳಿಸಿ ಬಳಸಬೇಕು ಎಂದು ನುಡಿದರು
ಈ ಸಂದರ್ಭದಲ್ಲಿ ಸಾಹಿತಿ ಕರುಣಾ ಸಲಗರ ಕರ್ನಾಟಕ ರಾಜ್ಯ ಸರಕಾರ ಎಲ್ಲಾ ಕನ್ನಡ ಸಂಘಕ್ಕೆ ಮೊದಲು ಗೌರವ ಕೊಡಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಸಾಹಿತಿ ಸುನಿತಾ ಪಾಟೀಲ್ ಮಾತನಾಡಿದ ಮಕ್ಕಳಲ್ಲಿ ಮೊಬೈಲ್ ನೋಡುವ ಕಡಿಮೆ ಮಾಡಿ ಹೆಚ್ಚಿಗೆ ಕನ್ನಡ ಪುಸ್ತಕಗಳನ್ನು ಓದಿಸಿ ಅವರಿಗೆ ಜ್ಞಾನವಂತ ಮಾಡಿಸಿರಿ ಎಂದು ನುಡಿದರು
ಈ ಸಂದರ್ಭದಲ್ಲಿ ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಕವಿಗಳು ಸಿದ್ದಾರ್ಥ ಮೆತ್ರೆ , ಶ್ರೀಕಾಂತ್ ಯರಬಾಗ , ಮಹಿಳಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು ಶೋಭಾ ಮೇಡಂ, ಶ್ರೀಶೈಲ್ ಬೆನ್ನೂರು ವಿಜಯಪುರ, ಮೈ ನೋದ್ದಿನ್ ಹನುಕುಣಿ ಶಿವಲಿಂಗ ಚಟ್ಟಿ, ಶೀಲಾ ಜೂಜಾ, ವಿದ್ಯಾವತಿ ಮೇಡಂ, ಎಂದು ಕವಿಗಳು ವಾಚನ ಮಾಡಿದರು.
ಈ ಸಂದರ್ಭದಲ್ಲಿ ಇದೇ ವರ್ಷದ ತಾಲೂಕ ಮಟ್ಟದ ರಾಜೋತ್ಸವ ಪ್ರಶಸ್ತಿ ಪುರಸ್ಕಾರದ ಸಾಹಿತಿ ವೀರಾರೆಡ್ಡಿ ರವರಿಗೆ ವಿಶೇಷ ಸನ್ಮಾನವಾಯಿತು. ವೆಂಕಟೇಶ್ವರ ಶಾಲೆ ವಿದ್ಯಾರ್ಥಿಗಳು, ಬೇಂದ್ರೆ ಸರ್, ಭೀಮಸೇನ ಗಾಯಕ್ವಾಡ ಮಡೆಪ ಕುಂಬಾರ ಹಲವಾರು ಸಾಹಿತಿಗಳು ಉಪಸ್ಥಿತರಿದ್ದರು ಕರ್ನಾಟಕ ರಾಜ್ಯ ಬರಹಗಾರರ ಸಂಘ ಬೀದರ ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ ಚಟ್ಟಿ ಈ ಕಾರ್ಯಕ್ರಮದ ನಿರೂಪಣೆ ಮಾಡಿದರು ಶ್ರೀಕಾಂತ ಯರಬಾಗ ವಂದನಾರ್ಪಣೆ ಮಾಡಿದರು.

