spot_img
spot_img

ದೇವರನ್ನು ಅಂತರಂಗದಲ್ಲಿ ಧ್ಯಾನಿಸಬೇಕು – ಸಾವಳಗಿ ಶ್ರೀಗಳು

Must Read

- Advertisement -

ಮೂಡಲಗಿ: ‘ನಿರ್ಮಲವಾದ ಮತ್ತು ತ್ಯಾಗಮಯವಾದ ಭಕ್ತಿಯ ಇದ್ದರೆ ದೇವರ ಅನುಗ್ರಹವಾಗುವುದು. ದೇವರನ್ನು ಅಂತರಂಗದಲ್ಲಿ ಧ್ಯಾನಿಸುವಂತಾಗಬೇಕು ಎಂದು ಸಾವಳಗಿ ಸಿದ್ಧ ಸಂಸ್ಥಾನ ಪೀಠದ ಜಗದ್ಗರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಹೇಳಿದರು.

ತಾಲ್ಲೂಕಿನ ಖಾನಟ್ಟಿ ಗ್ರಾಮದ ಶಿವಲಿಂಗೇಶ್ವರ ದೇವಸ್ಥಾನದ ಮಹಾದ್ವಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಮನುಷ್ಯನಿಗೆ ಅಂತರಂಗ ಮತ್ತು ಬಹಿರಂಗ ಎರಡರಲ್ಲೂ ಶುದ್ಧಿಯಾಗಿಸಿಕೊಂಡು ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು. 

ಜ್ಞಾನ ಬೆಳೆದಂತೆ ಅಜ್ಞಾನ ಬೆಳೆಯುತ್ತಲಿದೆ. ಸಮಾಜದಲ್ಲಿ ಯಾವುದು ಮಾಡಬೇಕು ಮತ್ತು ಯಾವುದು ಮಾಡಬಾರದು ಎನ್ನುವುದನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಆನಂದವನ್ನು ತಂದುಕೊಳ್ಳಬೇಕು. ಖಾನಟ್ಟಿಯ ಭಕ್ತರು ಸೇರಿ ಶಿವಲಿಂಗೇಶ್ವರ ಮಹಾದ್ವಾರ ನಿರ್ಮಿಸಿದ್ದು ಅವರ ತ್ಯಾಗಭಕ್ತಿಯ ಪ್ರತೀಕವಾಗಿದೆ ಎಂದರು.

- Advertisement -

ಮುಖ್ಯ ಅತಿಥಿ ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಯುವಕರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು, ಧಾರ್ಮಿಕತೆಯಲ್ಲಿ ಇರುವಂತ ಶಕ್ತಿ ಬೇರೆ ಯಾವುದರಲ್ಲಿ ಇರುವುದಿಲ್ಲ, ನಾಲ್ಕು ಯುಗದಲ್ಲಿ ರಾಕ್ಷಸ ಇದ್ದಾರೆ, ಕಲಿಯುಗದಲ್ಲಿ ರಾಕ್ಷಸ ಎನ್ನುವುದೆ ನಾನು ಎನ್ನುವುದು ಇವತ್ತಿನ ರಾಕ್ಷಸ, ನಾನು ಎನ್ನುವ ರಾಕ್ಷಸ ಅಹಂಕಾರವನ್ನು ಸಂಹಾರ ಮಾಡಲು  ಮಠಮಾನ್ಯಗಳಲ್ಲಿ ಸೇವೆ ಮಾಡುವದರಿಂದ ಮತ್ತು ಭಗವಂತನಲ್ಲಿ ಭಕ್ತಿ ಮಾಡುವದರಿಂದ ರಾಕ್ಷಸ ದೂರವಿಡಲು ಸಾಧ್ಯ ಎಂದರು.

ಶಿವಾಪುರ(ಹ)ದ ಅಡವಿಸಿದ್ದೇಶ್ವರಮಠದ ಅಡವಿಸಿದ್ಧರಾಮ ಸ್ವಾಮಿಗಳು ಮಾತನಾಡಿ, ಮನುಷ್ಯ ಹುಟ್ಟಿದ ಮೇಲೆ ಜೀವನದಲ್ಲಿ ಒಳ್ಳೆಯ ಕೆಲಸ ಮಾಡಿ ಜೀವನವನ್ನು ಸಾರ್ಥಕಮಾಡಿಕೊಳ್ಳಬೇಕು ಎಂದರು. ಹುಟ್ಟು, ಬದುಕು ಮತ್ತು ಸಾವು ಎಲ್ಲರಿಗೂ ಸಮನಾಗಿ ಇದ್ದು, ಬದುಕಿರುವವರೆಗೆ ಸಮಾಜಕ್ಕೆ ಒಳ್ಳೆಯವರಾಗಿ ಇರಬೇಕು ಎಂದರು.

ಬಿ.ಸಿ. ಮುಗಳಖೋಡ ಮುನ್ಯಾಳದ ಆನಂದರಾವ ನಾಯ್ಕ, ಸಾಹಿತಿ ಬಾಲಶೇಖರ ಬಂದಿ ಮಾತನಾಡಿದರು.

- Advertisement -

ಗೋಕಾಕದ ಶೂನ್ಯ ಸಂಪಾದನಮಠದ ಮುರುಘರಾಜೇಂದ್ರ ಸ್ವಾಮಿಗಳು, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮಿಗಳು, ಹೊಸದುರ್ಗದ ಪುರುಷೋತ್ತಮಾನಂದಪುರಿ, ಜೋಡಕುರಳಿಯ ಸಿದ್ದಾರೂಢ ಮಠದ ಚಿದ್ಧನಾನಂದ ಭಾರತಿ ಸ್ವಾಮಿಗಳು, ದೂಪಧಾಳದ ಭೀಮಾನಂದ ಸ್ವಾಮಿಗಳು, ಮುಮ್ಮೆಟಗುಡ್ಡದ ಸಿದ್ಧರತ್ನ ಮದಗೊಂಡೇಶ್ವರ ಮಹಾರಾಜರು ಮತ್ತು ಮೂಡಲಗಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ನವೀನಪ್ರಸಾದ ಕಟ್ಟಿಮನಿ ಇದ್ದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹಾದೇವಿ ಮಹಾದೇವ ತುಪ್ಪದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಮಹಾದ್ವಾರ ನಿರ್ಮಾಣಕ್ಕೆ ಮತ್ತು ಸಮಾರಂಭಕ್ಕೆ ದೇಣಿಗೆ ನೀಡಿರುವ ಮಹನೀಯರನ್ನು ಸನ್ಮಾನಿಸಿದರು. ಸಮಾರಂಭದ ಪೂರ್ವದಲಿ  ಸಮಾರಂಭದಲ್ಲಿ ಮಹಾದ್ವಾರ ನಿರ್ಮಾಣಕ್ಕೆ ಮತ್ತು ಸಮಾರಂಭಕ್ಕೆ ದೇಣಿಗೆ ನೀಡಿರುವ ಮಹನೀಯರನ್ನು ಸನ್ಮಾನಿಸಿದರು. 

ಸಮಾರಂಭದ ಪೂರ್ವದಲ್ಲಿ ಪೂರ್ಣ ಕುಂಭ ಮತ್ತು ಆರತಿಗಳ ಮೂಲಕ ಪೂಜ್ಯರನ್ನು ಬರಮಾಡಿಕೊಂಡರು. ಮಹಾ ಪ್ರಸಾದದಲ್ಲಿ ಅನೇಕ ಭಕ್ತರು ಭಾಗವಹಿಸಿದ್ದರು.

    ಶಂಕರ ಡೋಣಿ ಸ್ವಾಗತಿಸಿದರು, ಶೃತಿ ಜಾಧವ ನಿರೂಪಿಸಿದರು. ವೆಂಕಪ್ಪ ಉದ್ದನ್ನವರ ವಂದಿಸಿದರು.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group