spot_img
spot_img

ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂಬರ್ 15 ಮಲಪ್ರಭಾನಗರ ವಡಗಾವಿ ಬೆಳಗಾವಿ

Must Read

- Advertisement -

ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಏಳನೇ ವರ್ಗದ ಮಕ್ಕಳ ಬಿಳ್ಕೊಡುವ ಸಮಾರಂಭ

ಬೆಳಗಾವಿ:  ದಿನಾಂಕ 24.02.2023 ರಂದು KHPS no 15 ಮಲಪ್ರಭಾ ನಗರ ಶಾಲೆಯಲ್ಲಿ  ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಮತ್ತು 7ನೇ ವರ್ಗದ ಮಕ್ಕಳ ಬೀಳ್ಕೊಡುವ ಸಮಾರಂಭ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀಮತಿ ರತ್ನಪ್ರಭಾ ವಿಶ್ವನಾಥ್ ಬೆಲ್ಲದ ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲೆ ಇವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

- Advertisement -

ಬಸವಣ್ಣನವರ ಕಾಯಕ ತತ್ವದಲ್ಲಿ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಈ ಶಾಲೆಗೆ 21 ಸಾವಿರ ಬೆಲೆ ಬಾಳುವ ಅಹುಜಾ ಕಂಪನಿಯ ಸೌಂಡ್ ಸಿಸ್ಟಮನ್ನು ಶಾಲೆಗೆ ದೇಣಿಗೆಯಾಗಿ ಕೊಟ್ಟರು.

ಶಾಲೆಯ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿರುವ ಮತ್ತು ಶಾಲಾ ಆವರಣದಲ್ಲಿ ಈ ರೀತಿಯಾಗಿ ವಿಜೃಂಭಣೆಯಿಂದ  ಕಾರ್ಯಕ್ರಮ ಶಾಲೆಯಲ್ಲಿ ಮೊದಲನೇ ಬಾರಿಗೆ ಆಯೋಜನೆಯನ್ನು ಈ ಶಾಲೆಯ ಪ್ರಧಾನ ಗುರುಗಳಾದ ಕೃಷ್ಣ ರಾವಳ ಸರ್ ಇವರು ಎಲ್ಲರೊಂದಿಗೆ ಚರ್ಚಿಸಿ ಈ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಯಾಗಲು ಕಾರಣಕರ್ತರಾಗಿದ್ದಾರೆ. 

 

- Advertisement -

ಈ ಕಾರ್ಯಕ್ರಮದಲ್ಲಿ ನಗರ ಸೇವಕರಾದ ಉದಯ್ ಉಪರಿ ಮತ್ತು ಸಮಾಜ ಸೇವಕರಾದ ಗಜಾನನ ಗುಂಜೇರಿ, ಭಾರತಿ ವಿದ್ಯಾಲಯದ ಗುರುಮಾತೆಯರು ಅತಿಥಿಗಳಾಗಿ ಆಗಮಿಸಿದ್ದರು.

ಈ ಕಾರ್ಯಕ್ರಮದಲ್ಲಿ ಖಾಸಬಾಗ ಕ್ಲಸ್ಟರ್ ಸಿ ಆರ್ ಪಿ ರವರಾದ ಸಿ. ಟಿ.ಪೂಜಾರ್ ಸರ್,ಎಸ್ ಡಿ ಎಮ್ ಸಿ ಅಧ್ಯಕ್ಷರು ಸದಸ್ಯರು ಶಾಲೆಯ ಎಲ್ಲ ಗುರುಬಳಗ ಹಾಗೂ ಪಾಲಕ್ ವೃಂದದವರು ಮಕ್ಕಳು ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ತುಂಬಾ ವೈಭವದಿಂದ ಜರುಗಿದವು. ಪಾಲಕರು ತಮ್ಮ ಮಕ್ಕಳ ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ನೋಡಿ ತುಂಬಾ ಸಂತಸ ಗೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ದೇಣಿಗೆ ಕೊಟ್ಟಂತಹ ರತ್ನಪ್ರಭಾ ವಿಶ್ವನಾಥ್ ಬೆಲ್ಲದ ಮೇಡಂ ಇವರಿಗೆ ಶಾಲೆಯ ಎಲ್ಲ ಗುರುಬಳಗ,ಮಕ್ಕಳು ಹಾಗೂ ಎಸ್ಡಿಎಂಸಿ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಿರುತ್ತಾರೆ.

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group